ಗುವಾಹಟಿ: ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಸ್ಫೋಟಕ ಶತಕದ ನೆರವಿನಿಂದ ಆಸ್ಟ್ರೇಲಿಯಾ (Australia) ಭಾರತದ (Team India) ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. 5 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿದೆ.
223 ರನ್‌ಗಳ ಕಠಿಣ ಗುರಿಯನ್ನು ಪಡೆದ ಆಸ್ಟ್ರೇಲಿಯಾ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಮ್ಯಾಕ್ಸ್‌ವೆಲ್ ಬೌಂಡರಿ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 225 ರನ್ ಹೊಡೆಯುವ ಮೂಲಕ ಸರಣಿಯಲ್ಲಿ ಮೊದಲ ಜಯ ಸಾಧಿಸಿತು.
Advertisement
13.3 ಓವರ್‌ಗಳಲ್ಲಿ 134 ರನ್ ಗಳಿಸಿದ್ದಾಗ ಟಿಮ್ ಡೇವಿಡ್ ಶೂನ್ಯಕ್ಕೆ ಔಟಾದಾಗ ಪಂದ್ಯ ಸ್ವಲ್ಪ ಭಾರತದ ಕಡೆ ವಾಲಿತ್ತು. ಆದರೆ ಮುರಿಯದ 6ನೇ ವಿಕೆಟಿಗೆ ಮ್ಯಾಕ್ಸ್‌ವೆಲ್ ಮತ್ತು ನಾಯಕ ಮ್ಯಾಥ್ಯೂ ವೇಡ್ 40 ಎಸೆತಗಳಲ್ಲಿ 91 ರನ್ ಚಚ್ಚಿ ಪಂದ್ಯವನ್ನು ಭಾರತದಿಂದ ಕಸಿದುಕೊಂಡರು.
Advertisement
MAXWELL DOES IT AGAIN ????
???????? bounce back in the #IDFCFirstBankT20ITrophy and HOW! ????#INDvAUS #JioCinemaSports pic.twitter.com/MUeoURfFWT
— JioCinema (@JioCinema) November 28, 2023
Advertisement
ಕೊನೆಯ 12 ಎಸೆತಗಳಲ್ಲಿ ಆಸ್ಟ್ರೇಲಿಯಾಗೆ 43 ರನ್ ಬೇಕಿತ್ತು. ಅಕ್ಷರ್ ಪಟೇಲ್ ಎಸೆದ ಮೊದಲ ಮೂರು ಎಸೆತಗಳಲ್ಲಿ 4,2,4 ರನ್ ಬಂದರೆ 4ನೇ ಎಸೆತ ನೋಬಾಲ್ ಆಗಿತ್ತು. ನಂತರ ಫ್ರಿ ಹಿಟ್ ಎಸೆತವನ್ನು ವೇಡ್ ಸಿಕ್ಸರ್‌ಗೆ ಅಟ್ಟಿದ್ದರು. ನಂತರ ವೇಡ್ ಸಿಂಗಲ್ ರನ್ ತೆಗೆದರೆ ಕೊನೆಯ ಎಸೆತವನ್ನು ಇಶನ್ ಕಿಶನ್ ಹಿಡಿಯದ ಕಾರಣ ಬೈ ಮೂಲಕ 4 ರನ್ ಆಸೀಸ್ ಖಾತೆಗೆ ಸೇರಿತು.
Advertisement
ಪ್ರಸಿದ್ಧ್ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವೇಡ್ ಎರಡನೇ ಎಸೆತದಲ್ಲಿ ಒಂಟಿ ರನ್ ತೆಗೆದರು. ಮೂರನೇ ಎಸೆತವನ್ನು ಮ್ಯಾಕ್ಸ್‌ವೆಲ್ ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಮೂರು ಎಸೆದತದಲ್ಲಿ ಹ್ಯಾಟ್ರಿಕ್ ಬೌಂಡರಿ ಹೊಡೆಯುವ ಮೂಲಕ ಮ್ಯಾಕ್ಸ್‌ವೆಲ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಆಸೀಸ್ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್
The Big Show is turning it up in Guwahati ????
Can he take ???????? home? ????#INDvAUS #IDFCFirstBankT20ITrophy #JioCinemaSports pic.twitter.com/vtbRMo2vnn
— JioCinema (@JioCinema) November 28, 2023
ಮ್ಯಾಕ್ಸ್‌ವೆಲ್ 28 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 47 ಎಸೆತದಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ ಮ್ಯಾಕ್ಸ್‌ವೆಲ್ ಔಟಾಗದೇ 104 ರನ್(48 ಎಸೆತ, 8 ಬೌಂಡರಿ, 8 ಸಿಕ್ಸರ್) ಹೊಡೆದರೆ ವೇಡ್ ಔಟಾಗದೇ 28 ರನ್(16 ಎಸೆತ, 3 ಬೌಂಡರಿ, 1 ಸಿಕ್ಸರ್) ಚಚ್ಚಿದರು. ಭಾರತ ತಂಡ ಇತರ ರೂಪದಲ್ಲಿ 15 ರನ್ (ಬೈ 4, ಲೆಗ್ ಬೈ 3, ನೋಬಾಲ್ 2 , ವೈಡ್ 6) ನೀಡಿತ್ತು. ಪ್ರಸಿದ್ಧ್ ಕೃಷ್ಣ 68 ರನ್ ನೀಡಿದರೆ ಅರ್ಶ್‌ದೀಪ್ ಸಿಂಗ್ 44 ರನ್ ನೀಡಿದರು. ರವಿ ಬಿಶ್ನೋಯಿ 32 ರನ್ ನೀಡಿ 2 ವಿಕೆಟ್ ಪಡೆದರು.
ಅಕ್ಷರ್ ಪಟೇಲ್ 19ನೇ ಓವರ್‌ಲ್ಲಿ 22 ರನ್, ಪ್ರಸಿದ್ಧ್ ಕೃಷ್ಣ 20ನೇ ಓವರ್‌ನಲ್ಲಿ 23 ರನ್ ಬಿಟ್ಟುಕೊಟ್ಟ ಕಾರಣ ಭಾರತ ತಂಡ ಸೋಲನ್ನು ಅನುಭವಿಸಿತು. ಇದನ್ನೂ ಓದಿ: ಆಸೀಸ್ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 24 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದರೂ ಗಾಯಕ್‌ವಾಡ್ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು.
???????????????? ???????? ???????????????? ????
What a splendid way to mark his maiden T20I century! ????#INDvAUS #JioCinemaSports #IDFCBankT20ITrophy pic.twitter.com/T4W2w8pWJ7
— JioCinema (@JioCinema) November 28, 2023
32 ಎಸೆತಗಳಲ್ಲಿ ಅರ್ಧಶತಕ ಹೊಡೆದ ಗಾಯಕ್‌ವಾಡ್ ನಂತರ 20 ಎಸೆತಗಳಲ್ಲಿ 50 ರನ್ ಸಿಡಿಸಿ ಮೊದಲ ಶತಕ ಹೊಡೆದರು. 52 ಎಸೆತಗಳಲ್ಲಿ 100 ರನ್ ಹೊಡೆದ ಗಾಯಕ್ವಾಡ್ ಮಾಕ್ಸ್‌ವೆಲ್ ಎಸೆದ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸ್ ಮತ್ತು 2 ಬೌಂಡರಿ ಸಿಡಿಸಿದರು. ಸೂರ್ಯಕುಮಾರ್ ಯಾದವ್ 39 ರನ್(29 ಎಸೆತ, 5 ಬೌಂಡರಿ, 1 ಸಿಕ್ಸರ್), ತಿಲಕ್ ವರ್ಮಾ ಔಟಾಗದೇ 31 ರನ್ ( 24 ಎಸೆತ, 4 ಬೌಂಡರಿ) ಹೊಡೆದರು. ಅಂತಿಮವಾಗಿ ಗಾಯಕ್‌ವಾಡ್ ಔಟಾಗದೇ 123 ರನ್ (57 ಎಸೆತ, 13 ಬೌಂಡರಿ, 7 ಸಿಕ್ಸ್) ಚಚ್ಚಿದರು.