ಹೈದರಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಿನ ರೋಚಕ ಕೊನೆಯ ಹಾಗೂ ಫೈನಲ್ ಟಿ20 (T20) ಪಂದ್ಯದಲ್ಲಿ ಕೊಹ್ಲಿ (Virat Kohli) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಭಾರತ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ವಿಶ್ವಚಾಂಪಿಯನ್ನರಿಗೆ ಸೋಲುಣಿಸಿ ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
Advertisement
ಆಸ್ಟ್ರೇಲಿಯಾ (Australia) ನೀಡಿದ 187 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ (India) ಚೇಸಿಂಗ್ ಕಿಂಗ್ ಕೊಹ್ಲಿ ಮತ್ತು ಸೂರ್ಯಕುಮಾರ್ ಸ್ಫೋಟಕ ಆಟ ನೆರವಾಯಿತು. ಅಂತಿಮ ಓವರ್ ವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದದಲ್ಲಿ ಫೋರ್ ಹೊಡೆದು ಪಾಂಡ್ಯ ಇನ್ನೊಂದು ಎಸೆತ ಬಾಕಿ ಇರುವಂತೆ 187 ರನ್ ಸಿಡಿಸಿ ಜಯ ತಂದು ಕೊಟ್ಟರು. ಅಂತಿಮವಾಗಿ 19.5 ಓವರ್‌ಗಳ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 187 ರನ್‍ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಭಾರತ ಈ ಗೆಲುವಿನೊಂದಿಗೆ ತವರಿನಲ್ಲಿ ಟಿ20 ಸರಣಿ ಗೆದ್ದುಕೊಂಡಿತು. ಜೊತೆಗೆ ಈ ವರ್ಷ ದಾಖಲೆಯ 21 ಟಿ20 ಪಂದ್ಯವನ್ನು ಗೆದ್ದು ನೂತನ ದಾಖಲೆ ಬರೆಯಿತು. ಇದನ್ನೂ ಓದಿ: 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಹೀಗಾಗಿತ್ತು, ಇದೀಗ ಮತ್ತೆ? – ಏನಿದು ಧೋನಿ ಲಾಜಿಕ್
Advertisement
Advertisement
ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿತು. ರಾಹುಲ್ 1 ರನ್‍ಗೆ ವಿಕೆಟ್ ಕೈಚೆಲ್ಲಿಕೊಂಡರೆ, ರೋಹಿತ್ ಶರ್ಮಾ ಆಟ 17 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಅಂತ್ಯಕಂಡಿತು. 30 ರನ್‍ಗಳಿಗೆ 2ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆ ಬಳಿಕ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ನೆರವಾದರು. ಈ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದರು. ಭರ್ಜರಿ ಹೊಡೆತಗಳ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್ ಸ್ಫೋಟಕ ಇನ್ನಿಂಗ್ಸ್ 69 ರನ್ (36 ಎಸೆತ, 5 ಬೌಂಡರಿ, 5 ಸಿಕ್ಸ್)ಗೆ ಅಂತ್ಯಕಂಡಿತು. ಈ ಮೊದಲು 3ನೇ ವಿಕೆಟ್‍ಗೆ ಕೊಹ್ಲಿ ಜೊತೆ 104 ರನ್ (62 ಎಸೆತ) ಜೊತೆಯಾಟವಾಡಿದರು. ಇದನ್ನೂ ಓದಿ: ಬ್ಯಾಟ್ಸ್‌ಮ್ಯಾನ್ ಜೊತೆ ಕಿರಿಕ್ – ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್‍ರನ್ನು ಹೊರನಡಿ ಎಂದ ರಹಾನೆ
Advertisement
ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಕೊಹ್ಲಿ ಜೊತೆ ಗೆಲುವಿಗಾಗಿ ಹೋರಾಡಿದರು. ಅಂತಿಮವಾಗಿ ಕೊಹ್ಲಿ 63 ರನ್ (48 ಎಸೆತ, 3 ಬೌಂಡರಿ, 4 ಸಿಕ್ಸ್) ಚಚ್ಚಿ ಗೆಲುವಿನ ಅಂಚಿನಲ್ಲಿ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಪಾಂಡ್ಯ ಅಜೇಯ 25 ರನ್ (16 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 1 ರನ್ ಬಾರಿಸಿ ಗೆಲುವನ್ನು ಸಂಭ್ರಮಿಸಿದರು. ಇದನ್ನೂ ಓದಿ: ಬುಮ್ರಾ ಯಾರ್ಕರ್‌ಗೆ ಫಿಂಚ್ ಶಬ್ಬಾಸ್‍ಗಿರಿ – ಪಲ್ಟಿ ಹೊಡೆದು ಬೆರಗಾದ ಸ್ಮಿತ್
ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾದಂತೆ ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿತು. ರಾಹುಲ್ 1 ರನ್‍ಗೆ ವಿಕೆಟ್ ಕೈಚೆಲ್ಲಿಕೊಂಡರೆ, ರೋಹಿತ್ ಶರ್ಮಾ ಆಟ 17 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಅಂತ್ಯಕಂಡಿತು. 30 ರನ್‍ಗಳಿಗೆ 2ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆ ಬಳಿಕ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ನೆರವಾದರು. ಈ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿತು. ಭರ್ಜರಿ ಹೊಡೆತಗಳ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್ ಸ್ಫೋಟಕ ಇನ್ನಿಂಗ್ಸ್ 69 ರನ್ (36 ಎಸೆತ, 5 ಬೌಂಡರಿ, 5 ಸಿಕ್ಸ್)ಗೆ ಅಂತ್ಯಕಂಡಿತು. ಈ ಮೊದಲು 3ನೇ ವಿಕೆಟ್‍ಗೆ ಕೊಹ್ಲಿ ಜೊತೆ 104 ರನ್ (62 ಎಸೆತ) ಜೊತೆಯಾಟವಾಡಿದರು.
ಈ ಮೊದಲು ಟಾಸ್ ಗೆದ್ದ ಭಾರತ ಫಿಂಚ್ ಬಳಗವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಆದರೆ ಆರಂಭಿಕರಾಗಿ ಕಣಕ್ಕಿಳಿದ ಫಿಂಚ್ 7 ರನ್‍ಗಳಿಗೆ ಸುಸ್ತಾದರು. ಮತ್ತೆ ಬಂದ ಸ್ಮಿತ್ 9, ಮ್ಯಾಕ್ಸ್‌ವೆಲ್ 6 ರನ್ ಬಾರಿಸಿ ಬೇಗನೆ ಪೆವಿಲಿಯನ್ ಸೇರಿಕೊಂಡರು.
ಇನ್ನೊಂದೆಡೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ಯಾಮರೂನ್ ಗ್ರೀನ್ ಭಾರತದ ಬೌಲರ್‌ಗಳನ್ನು ದಂಡಿಸಿದರು. ಹಿಗ್ಗಾಮುಗ್ಗಾ ಬೌಂಡರಿ, ಸಿಕ್ಸ್ ಚಚ್ಚಿ ಅಂತಿಮವಾಗಿ 52 ರನ್ (21 ಎಸೆತ, 7 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜೋಶ್ ಇಂಗ್ಲಿಸ್ ಮತ್ತು ಟೀಮ್ ಡೇವಿಡ್ ಅಬ್ಬರಿಸಲು ಆರಂಭಿಸಿದರು. ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲಿಸ್ 24 ರನ್ (22 ಎಸೆತ, 3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು.
SKY dazzled & how! ???? ????
ICYMI: Here's how he brought up his 5⃣0⃣ before being eventually dismissed for 69.
Don’t miss the LIVE coverage of the #INDvAUS match on @StarSportsIndia @surya_14kumar pic.twitter.com/UVjsjSmKdC
— BCCI (@BCCI) September 25, 2022
ಇತ್ತ ಟೀಮ್ ಡೇವಿಡ್ ಮಾತ್ರ ಡೇನಿಯಲ್ ಸ್ಯಾಮ್ ಜೊತೆ ಸೇರಿಕೊಂಡು ಸ್ಲಾಗ್ ಓವರ್‌ಗಳಲ್ಲಿ ಅಬ್ಬರಾದಾಟ ಆಡಿದರು. ಟೀಮ್ ಡೇವಿಡ್ 54 ರನ್ (2 ಬೌಂಡರಿ, 4 ಸಿಕ್ಸ್) ಚಚ್ಚಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಹರ್ಷಲ್ ಪಟೇಲ್‍ಗೆ ವಿಕೆಟ್ ನೀಡಿದರು. ಆ ಬಳಿಕ ಸ್ಯಾಮ್ ಅಜೇಯ 28 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸ್) ನೆರವಿನಿಂದ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 186 ರನ್ ಪೇರಿಸಿತು.
ಭಾರತದ ಪರ ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತು ಬಲಿಷ್ಠ ಆಸ್ಟ್ರೇಲಿಯನ್ ಬ್ಯಾಟಿಂಗ್ ಲೈನ್‍ಅಪ್‍ಗೆ ಕಡಿವಾಣ ಹಾಕಿದರು. ಭುವನೇಶ್ವರ್ ಕುಮಾರ್, ಚಹಲ್, ಹರ್ಷಲ್ ಪಟೇಲ್ ತಲಾ 1 ವಿಕೆಟ್ ಕಿತ್ತರು.