CricketLatestSports

ಪರ್ತ್ ಟೆಸ್ಟ್: ಟೀಂ ಇಂಡಿಯಾಗೆ ಕೊಹ್ಲಿ, ರಹಾನೆ ಅರ್ಧಶತಕದ ಆಸರೆ

ಪರ್ತ್: ಆಸೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಆರಂಭಿಕ ಅಘಾತ ಎದುರಿಸಿದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಭವಿ ಆಟಗಾರ ರಹಾನೆ ತಲಾ ಅರ್ಧ ಶತಕ ಸಿಡಿಸಿ ಆಸರೆಯಾಗಿದ್ದಾರೆ.

ಎರಡನೇ ದಿನ ಟೀಂ ಇಂಡಿಯಾ ಬೌಲರ್ ಗಳು ಎದುರಾಳಿ ತಂಡವನ್ನು 326 ರನ್ ಗಳಿಗೆ ಕಟ್ಟಿಹಾಕಿದ ಬಳಿಕ ಆರಂಭದಲ್ಲಿ ಆಸೀಸ್ ಬೌಲರ್ ಗಳು ಮೇಲುಗೈ ಸಾಧಿಸಿದ್ದರು. ಆದರೆ ನಂತರ ಕೊಹ್ಲಿ, ರಹಾನೆ ದಿಟ್ಟ ಪ್ರತಿರೋಧದಿಂದಾಗಿ 69 ಓವರ್ ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.

ಕೊಹ್ಲಿ ಅರ್ಧಶತಕ: ತಂಡ ರನ್ ಗಳಿಸಿದ್ದಾಗ ಆಂಭಿಕರಾದ ಮುರಳಿ ವಿಜಯ್ ಹಾಗೂ ಕೆಎಲ್ ರಾಹುಲ್ ಔಟಾದಾಗ ಭಾರತಕ್ಕೆ ಆಘಾತವಾಗಿತ್ತು. ಈ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ನಾಯಕ ವಿರಾಟ್ ಕೊಹ್ಲಿ ಮತ್ತು ಪೂಜಾರ 3ನೇ ವಿಕೆಟ್‍ಗೆ 74 ರನ್ ಗಳ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಸ್ಟಾರ್ಕ್ ಬೇರ್ಪಡಿಸಿದರು. 103 ಎಸೆತಗಳಲ್ಲಿ 24 ರನ್ ಗಳಿಸಿದ್ದ ಪೂಜಾರ, ಸ್ಟಾರ್ಕ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಇತ್ತ ನಾಯಕ ವಿರಾಟ್ ಕೊಹ್ಲಿ ತಾಳ್ಮೆ ಆಟವಾಡಿ 109 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು. ಬಳಿಕ ಬಂದ ರಹಾನೆ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸೇರಿ ಇನ್ನಿಂಗ್ಸ್ ಕಟ್ಟಲು ನೆರವಾದರು. ಈ ಜೋಡಿ ಮುರಿಯದ 4ನೇ ವಿಕೆಟ್‍ಗೆ 90 ರನ್ ಜೊತೆಯಾಟವಾಡಿದೆ. 95 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಹಾನೆ ಅಂತಿಮವಾಗಿ 103 ಎಸೆತಗಳಲ್ಲಿ 51 ರನ್ ಗಳಿಸಿದ್ದು, ಕೊಹ್ಲಿ 181 ಎಸೆತಗಳಲ್ಲಿ 82 ರನ್ ಗಳಿಸಿದ್ದಾರೆ. 69 ಓವರ್ ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.

6 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ಕೊನೆಯ 4 ವಿಕೆಟ್ ಗಳ ಸಹಾಯದಿಂದ 49 ರನ್‍ಗಳಿಸಿ ಸರ್ವಪತನ ಕಂಡಿತು. ಆಸೀಸ್‍ಗೆ ನಾಯಕ ಪೈನ್ ಹಾಗೂ ಪ್ಯಾಟ್ ಕಮ್ಮಿನ್ಸ್ ಉತ್ತರ ಆರಂಭ ನೀಡಿ 7ನೇ ವಿಕೆಟ್ ಗೆ 59 ರನ್‍ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ಉಮೇಶ್ ಯಾದವ್ 19 ರನ್ ಗಳಿಸಿದ್ದ ಕಮ್ಮಿನ್ಸ್ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಬುಮ್ರಾ 38 ಗಳಿಸಿದ್ದ ಪೈನ್ ವಿಕೆಟ್ ಪಡೆದು ಆಸೀಸ್ ತಂಡಕ್ಕೆ ಆಘಾತ ನೀಡಿದರು. ಬಳಿಕ ಬಂದ ಸ್ಟಾರ್ಕ್ 6 ರನ್ ಹಾಗೂ ಜೋಶ್ ಹೇಜಲ್‍ವುಡ್ ಶೂನ್ಯ ಸುತ್ತುವ ಮೂಲಕ ಬಂದಷ್ಟೇ ವೇಗದಲ್ಲಿ ಹಿಂದಿರುಗಿದರು. ಇದರೊಂದಿಗೆ ಆಸೀಸ್ 326 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಭಾರತದ ಪರ ಇಶಾಂತ್ ಶರ್ಮಾ 4 ವಿಕೆಟ್ ಪಡೆದು ಮಿಂಚಿದರೆ ಬುಮ್ರಾ, ಉಮೇಶ್ ಯಾದವ್ ಹಾಗೂ ಹನುಮ ವಿಹಾರಿ ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ಹ್ಯಾರಿಸ್ 70 ರನ್, ಆ್ಯರೋನ್ ಫಿಂಚ್ 50 ಹಾಗೂ ಟ್ರಾವಿಸ್ ಹೆಡ್‍ರ ಅರ್ಧ ಶತಕದ ನೆರವಿನಿಂದ ಮೊದಲ ದಿನ 90 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು.

ಪಂದ್ಯದ ಮೊದಲ ಅವಧಿಯ 21.3 ಓವರ್ ಗಳಿಗೆ 55 ಹರಿದು ಬಂತು. ಆದರೆ ಮೊದಲ 14.5 ಓವರ್ ಗಳಲ್ಲಿ ವಿಕೆಟ್ ಲಭಿಸದೆ 33 ರನ್ ಗಳಿಸಿದರೆ, ಅಂತಿಮ 6.4 ಓವರ್ ಗಳಲ್ಲಿ 22 ರನ್ ಗಳಿಗೆ 5 ವಿಕೆಟ್ ಉರುಳಿತು. ಉಳಿದಂತೆ ಕೊಹ್ಲಿ ಈ ಸರಣಿಯಲ್ಲಿ ಇನ್ನು 274 ರನ್ ಗಳಿಸಿದರೆ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕರ ದಾಖಲೆಯನ್ನು ಮುರಿಯಲಿದ್ದಾರೆ. ಸಂಗಕ್ಕರ ವರ್ಷವೊಂದರಲ್ಲಿ 2,868 ರನ್ ಸಿಡಿಸಿ ಅತ್ಯಧಿಕ ರನ್ ಸಿಡಿಸಿದ ದಾಖಲೆ ಹೊಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button