ಪರ್ತ್: ಆಸೀಸ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 108.3 ಓವರ್ ಗಳಲ್ಲಿ 326 ರನ್‍ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ.
2ನೇ ದಿನದಾಟವನ್ನು 6 ವಿಕೆಟ್ ಗೆ 277 ರನ್ ಗಳಿಂದ ಆರಂಭಿಸಿದ ಆಸೀಸ್‍ಗೆ ನಾಯಕ ಪೈನ್ ಹಾಗೂ ಪ್ಯಾಟ್ ಕಮ್ಮಿನ್ಸ್ ಉತ್ತರ ಆರಂಭ ನೀಡಿ 7ನೇ ವಿಕೆಟ್ ಗೆ 59 ರನ್‍ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ಉಮೇಶ್ ಯಾದವ್ 19 ರನ್ ಗಳಿಸಿದ್ದ ಕಮ್ಮಿನ್ಸ್ ವಿಕೆಟ್ ಪಡೆದರು. ಇದರ ಬೆನಲ್ಲೇ ಬುಮ್ರಾ 38 ಗಳಿಸಿದ್ದ ಪೈನ್ ವಿಕೆಟ್ ಪಡೆದು ಆಸೀಸ್ ತಂಡಕ್ಕೆ ಆಘಾತ ನೀಡಿದರು. ಬಳಿಕ ಬಂದ ಮಿಚೆಲ್ ಸ್ಟಾರ್ಕ್ 6 ರನ್ ಹಾಗೂ ಜೋಶ್ ಹೇಜಲ್‍ವುಡ್ ಶೂನ್ಯ ರನ್ ಗಳಿಸಿ ಬಂದಷ್ಟೇ ವೇಗದಲ್ಲಿ ಹಿಂದಿರುಗಿದರು. ಇದರೊಂದಿಗೆ ಆಸೀಸ್ 326 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
Advertisement
That's it from the 1st Innings. Australia 326. Ishant picks 4, Bumrah, Yadav and Vihari pick 2 each #TeamIndia #AUSvIND pic.twitter.com/enmP3hQSeA
— BCCI (@BCCI) December 15, 2018
Advertisement
ಭಾರತದ ಪರ ಇಶಾಂತ್ ಶರ್ಮಾ 4 ವಿಕೆಟ್ ಪಡೆದು ಮಿಂಚಿದರೆ ಬುಮ್ರಾ, ಉಮೇಶ್ ಯಾದವ್ ಹಾಗೂ ಹನುಮ ವಿಹಾರಿ ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ಹ್ಯಾರಿಸ್ 70 ರನ್, ಆ್ಯರೋನ್ ಫಿಂಚ್ 50 ಹಾಗೂ ಟ್ರಾವಿಸ್ ಹೆಡ್‍ರ ಅರ್ಧ ಶತಕದ ನೆರವಿನಿಂದ ಮೊದಲ ದಿನದಾಂತ್ಯಕ್ಕೆ 90 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು.
Advertisement
ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಸ್ಟಾರ್ಕ್ ಆರಂಭಿಕ ಆಘಾತ ನೀಡಿದ್ದು, ಮುರಳಿ ವಿಜಯ್ ಖಾತೆ ತೆರೆಯುವ ಮುನ್ನವೇ ಔಟಾದರು. ಇದರ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಕೆಎಲ್ ರಾಹುಲ್ 2 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಕೇವಲ 8 ರನ್ ಗಳಿಗೆ ತಂಡದ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದರು. ಇದರೊಂದಿಗೆ ಭಾರತ ಉತ್ತಮ ಆರಂಭ ಪಡೆಯಲು ವಿಫಲವಾಗಿದೆ.
Advertisement
2nd Test. 5.1: WICKET! L Rahul (2) is out, b Josh Hazlewood, 8/2 https://t.co/kN8fhHfivo #AusvInd
— BCCI (@BCCI) December 15, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv