CricketLatestMain PostNationalSports

ಟೀಂ ಇಂಡಿಯಾಗೆ 333 ರನ್ ಹೀನಾಯ ಸೋಲು!

ಪುಣೆ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 333 ರನ್‍ಗಳಿಂದ ಹೀನಾಯವಾಗಿ ಸೋತಿದೆ. ಗೆಲ್ಲಲು 441 ರನ್‍ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡ ಕೇವಲ 107 ರನ್‍ಗಳಿಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್ ಗಿಂತ 2 ರನ್ ಹೆಚ್ಚು ಗಳಿಸಿದ್ದು ಮಾತ್ರ ಟೀಂ ಇಂಡಿಯಾದ ಸಾಧನೆಯಾಯಿತು.

ಎರಡೂ ಇನ್ನಿಂಗ್ಸ್ ಗಳಲ್ಲಿ ಭಾರತ ತಂಡ 75 ಓವರ್‍ಗಳನ್ನೂ ಬ್ಯಾಟ್ ಮಾಡಲು ಬಳಸಿಲ್ಲ ಎನ್ನುವುದೇ ವಿಶೇಷ. ಟೀಂ ಇಂಡಿಯಾದ ಈ ಸೋಲಿನಿಂದ 19 ಟೆಸ್ಟ್ ಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. 2 ಇನ್ನಿಂಗ್ಸ್ ಗಳಲ್ಲಿ ಒಟ್ಟು 12 ವಿಕೆಟ್ ಗಳಿಸಿದ ಆಸ್ಟ್ರೇಲಿಯಾದ ಸ್ಟೀಫನ್ ಒಕೀಫ್ ಆಸೀಸ್ ಗೆಲುವಿನ ರೂವಾರಿಯಾದರು. ಒಕೀಫ್ 10 ವಿಕೆಟ್ ಪಡೆದಿದ್ದು ಇದೇ ಮೊದಲು. ಆಸೀಸ್ 2ನೇ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ನಾಯಕ ಸ್ಟೀವನ್ ಸ್ಮಿತ್ ಕೂಡಾ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಯಾರೆಷ್ಟು ರನ್ ಹೊಡೆದ್ರು?: ಭಾರತದ ಪರವಾಗಿ ಮುರಳಿ ವಿಜಯ್ 2, ಕೆ.ಎಲ್.ರಾಹುಲ್ 10, ಚೇತೇಶ್ವರ್ ಪೂಜಾರ 31, ವಿರಾಟ್ ಕೊಹ್ಲಿ 13, ಅಜಿಂಕ್ಯ ರಹಾನೆ 18, ಅಶ್ವಿನ್ 8, ರಿದ್ದಿಮಾನ್ ಸಾಹ 5, ರವೀಂದ್ರ ಜಡೇಜ 3 ರನ್ ಗಳಿಸಿದರು.

ಮೊದಲ ಇನ್ನಿಂಗ್ಸ್ ನಲ್ಲಿ 260 ರನ್ ಗಳಿಸಿದ್ದ ಆಸೀಸ್ ತಂಡ ಟೀ ಇಂಡಿಯಾವನ್ನು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 105 ರನ್‍ಗಳಿಗೆ ಕಟ್ಟಿ ಹಾಕಿತು. 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 285 ರನ್‍ಗಳಿಗೆ ಆಲೌಟಾಯಿತು. ಇದರಲ್ಲಿ 11 ಬೌಂಡರಿಗಳ ನೆರವಿನಿಂದ ನಾಯಕ ಸ್ಮಿತ್ 109 ರನ್ ಸೇರಿಸಿದ್ದರು. ಭಾರತದ ಪರವಾಗಿ ಅಶ್ವಿನ್ 4, ಜಡೇಜ 3 ಹಾಗೂ ಉಮೇಶ್ ಯಾದವ್ 2 ವಿಕೆಟ್ ಪಡೆದರು.

Leave a Reply

Your email address will not be published. Required fields are marked *

Back to top button