ನಾಗ್ಪುರ: ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (Team India) 144 ರನ್‌ಗಳ ಮುನ್ನಡೆ ಸಾಧಿಸಿದೆ.
ಎರಡನೇ ದಿನ ರೋಹಿತ್ ಶರ್ಮಾ (Rohith Sharma) ಶತಕ, ರವೀಂದ್ರ ಜಡೇಜಾ (Ravindra Jadeja) ಮತ್ತು ಅಕ್ಷರ್ ಪಟೇಲ್ (Axar Patel) ಅರ್ಧಶತಕದ ಆಟದಿಂದ ಭಾರತ ಮುನ್ನೂರು ರನ್‌ಗಳ ಗಡಿ ದಾಟಿದೆ.
Advertisement
Advertisement
ಗುರುವಾರ 56 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ರೋಹಿತ್ ಶರ್ಮಾ ಇಂದು 120 ರನ್(212 ಎಸೆತ, 15 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಅಶ್ವಿನ್ 23 ರನ್, ಪೂಜಾ 7 ರನ್, ವಿರಾಟ್ ಕೊಹ್ಲಿ 12 ರನ್, ಸೂರ್ಯಕುಮಾರ್ ಯಾದವ್ 8 ರನ್, ಶ್ರೀಕಾರ್ ಭರತ್ 8 ರನ್ ಹೊಡೆದು ಔಟಾದರು. ಇದನ್ನೂ ಓದಿ: ಒಂದೂವರೆ ವರ್ಷಗಳ ಬಳಿಕ ಶತಕ ಸಿಡಿಸಿ ದಾಖಲೆ ಬರೆದ ರೋಹಿತ್
Advertisement
Advertisement
ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಉರುಳಿದ್ದರೂ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಂಡಕ್ಕೆ ಆಸರೆಯಾದರು. ಇವರಿಬ್ಬರು ಮುರಿಯದ 8ನೇ ವಿಕೆಟ್‌ಗೆ 185 ಎಸೆತಗಳಲ್ಲಿ 81 ರನ್ ಜೊತೆಯಾಟವಾಡಿದ್ದಾರೆ. ಜಡೇಜಾ 66 ರನ್(170 ಎಸೆತ, 9 ಬೌಂಡರಿ), ಅಕ್ಷರ್ ಪಟೇಲ್ 52 ರನ್(102 ಎಸೆತ, 8 ಬೌಂಡರಿ) ಹೊಡೆದಿದ್ದು ದಿನದ ಅಂತ್ಯಕ್ಕೆ ಭಾರತ 114 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 321 ರನ್ ಹೊಡೆದಿದೆ.
ಟಾಡ್ ಮರ್ಫಿ 5 ವಿಕೆಟ್ ಕಿತ್ತರೆ, ಪ್ಯಾಟ್ ಕಮ್ಮಿನ್ಸ್ ಮತ್ತು ನಥನ್ ಲಿಯಾನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ರವೀಂದ್ರ ಜಡೇಜಾ, ಅಶ್ವಿನ್ ಬೌಲಿಂಗ್ ದಾಳಿಗೆ ಪಲ್ಟಿ ಹೊಡೆದ ಆಸ್ಟ್ರೇಲಿಯಾ 177 ರನ್‌ಗಳಿಗೆ ಆಲೌಟ್ ಆಗಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k