ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 236 ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ನಾಯಕ ಆ್ಯರೋನ್ ಫಿಂಚ್ ರನ್ನು ಶೂನ್ಯಕ್ಕೆ ಪೆವಿಲಿಯನ್‍ಗಟ್ಟುವ ಮೂಲಕ ಬುಮ್ರಾ ಮೊದಲ ಅಘಾತ ನೀಡಿದರು. ಆದರೆ ತಂಡಕ್ಕೆ ಆಸರೆಯಾದ ಉಸ್ಮಾನ್ ಖವಾಜಾ, ಸ್ಟೋಯ್ನಿಸ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿ 2ನೇ ವಿಕೆಟ್‍ಗೆ 84 ರನ್ ಗಳ ಜೊತೆಯಾಟ ನೀಡಿದರು.
Advertisement
Advertisement
ವಿಶೇಷ ಎಂದರೆ ಫಿಂಚ್ ಇಂದು 100ನೇ ಏಕದಿನ ಪಂದ್ಯವನ್ನು ಆಡಿದ್ದರು. ಆದರೆ ಕಳೆದ 7 ಇನ್ನಿಂಗ್ಸ್ ಗಳಲ್ಲಿ ಕಡಿಮೆ ಮೊತ್ತಕ್ಕೆ ಔಟಾಗುವ ಮೂಲಕ ಫಿಂಚ್ ವೈಫಲ್ಯ ಅನುಭವಿಸಿದ್ದಾರೆ. 0, 8, 0, 14, 6, 6, 3, 8 ರನ್ ಫಿಂಚ್ ಗಳಿಸಿದ ಇತ್ತೀಚಿನ ರನ್ ಮೊತ್ತವಾಗಿದೆ.
Advertisement
ಟೀಂ ಇಂಡಿಯಾಗೆ ಮುಳುವಾಗುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಲು ಸ್ಪಿನ್ನರ್ ಜಾಧವ್ ಯಶಸ್ವಿಯಾದರು. 37 ರನ್ ಗಳಿಸಿದ್ದ ಸ್ಟೋಯ್ನಿಸ್ ವಿಕೆಟ್ ಪಡೆದ ಜಾಧವ್ ಆಸೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಇತ್ತ 76 ಎಸೆತ ಎದುರಿಸಿದ್ದ ಖವಾಜಾ ಐದು ಬೌಂಡರಿ, ಆಕರ್ಷಕ ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಅರ್ಧ ಶತಕ ಗಳಿಸಿದ್ದ ಖವಾಜಾರನ್ನ ಕುಲ್ದೀಪ್ ಯಾದವ್ ಪೆವಿಲಿಯನ್‍ಗಟ್ಟಿದರು. ಬಳಿಕ ಬಂದ ಹ್ಯಾಂಡ್ಸ್‍ಕಂಬ್ 19 ರನ್ ಗಳಿಸಿ ಧೋನಿಗೆ ಸ್ಟಂಪಿಂಗ್ ಬಲಿಯಾದರು. ಈ ಹಂತದಲ್ಲಿ ಆಸೀಸ್ 30 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತ್ತು.
Advertisement
ಈ ಹಂತದಲ್ಲಿ ಜೊತೆಯಾದ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ ಹಾಗೂ ಮೊದಲ ಪಂದ್ಯವಾಡಿದ ಟರ್ನರ್ ನಿಧಾನಗತಿಯಲ್ಲಿ ತಂಡ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. 21 ರನ್ ಗಳಿಸಿದ್ದ ಟರ್ನರ್ ಹಾಗೂ 40 ರನ್ ಗಳಿಸಿದ್ದ ಮಾಕ್ಸ್ ವೆಲ್‍ರನ್ನ ಬೌಲ್ಡ್ ಮಾಡಿ ಮೊಹಮ್ಮದ್ ಶಮಿ ಮಿಂಚಿದರು. ಮ್ಯಾಕ್ಸ್ ವೆಲ್ ಭಾರತ ವಿರುದ್ಧ ಕಳೆದ 3 ಇನ್ನಿಂಗ್ಸ್ ಗಳಲ್ಲಿ 200 ಪ್ಲಸ್ ರನ್ ಗಳಿಸಿದ ಸಾಧನೆ ಮಾಡಿದರು.
ಅಂತಿಮ ಹಂತದಲ್ಲಿ ತಂಡ ಸವಾಲಿನ ಮೊತ್ತ ಪೇರಿಸಲು ಕಾಣಿಕೆ ನೀಡಿದ ನೈಲ್ 28 ರನ್ ಹಾಗೂ ಅಲೆಕ್ಸ್ ಕ್ಯಾರಿ ಅಜೇಯ 36 ರನ್ ಗಳಿಸಿದರು. ಈ ಜೋಡಿ 61 ರನ್ ಜೊತೆಯಾಟ ನೀಡಿತ್ತು. ನಿಗದಿತ 50 ಓವರ್ ಗಳಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು. ಭಾರತದ ಪರ ಶಮಿ 44/2, ಕುಲ್ದೀಪ್ ಯಾದವ್ 46/2, ಬುಮ್ರಾ 60/2 ವಿಕೆಟ್ ಪಡೆದರೆ, ಕೇದಾರ್ ಜಾಧವ್ 1 ವಿಕೆಟ್ ಪಡೆದರು.
How good has @MdShami11 been in today's game?
His bowling figures read 10-2-44-2#INDvAUS pic.twitter.com/JkSUNmBcc2
— BCCI (@BCCI) March 2, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv