ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ, ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಆಸೀಸ್ 7 ವಿಕೆಟ್ ಗೆಲುವು ಪಡೆದಿದ್ದು, ಈ ಮೂಲಕ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.
ಟೀಂ ಇಂಡಿಯಾ ನೀಡಿದ 191 ರನ್ ಗಳ ಗುರಿ ಬೆನ್ನಟ್ಟಿದ ಆಸೀಸ್ 2 ಎಸೆತ ಬಾಕಿ ಇರುವಂತೆಯೇ 194 ರನ್ ಸಿಡಿಸಿ ಜಯ ಪಡೆಯಿತು. ಆಸ್ಟ್ರೇಲಿಯಾ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಮ್ಯಾಕ್ಸ್ ವೆಲ್ ಶತಕ ಸಿಡಿಸಿ ಗೆಲುವಿನ ರೂವಾರಿಯಾದರು. 55 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ ಸಿಡಿಸಿದ ಮ್ಯಾಕ್ಸ್ ವೆಲ್ ಅಜೇಯ 113 ರನ್ ಗಳಿಸಿದರು. ಉಳಿದಂತೆ ಆರಂಭಿಕ ಶಾರ್ಟ್ 40 ರನ್ ಹಾಗೂ ಹ್ಯಾಂಡ್ಸ್ ಕಂಬ್ 20 ರನ್ ಗಳಿಸಿ ಅಜೇಯರಾಗಿ ಉಳಿದರು.
Advertisement
Australia have won it!
113 runs off 55 balls – a sensational innings from Glenn Maxwell takes them over the line. #INDvAUS LIVE ➡️ https://t.co/jVYUv2OMoG pic.twitter.com/ZHQNTWphZ4
— ICC (@ICC) February 27, 2019
Advertisement
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕೆ ಇಳಿದ ಧವನ್ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಕೇವಲ 26 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗು 3 ಬೌಂಡರಿಗಳ ಮೂಲಕ 47 ರನ್ ಗಳಿದ್ದ ವೇಳೆ ವೇಗಿ ನಾಥನ್ ಕೌಂಟರ್ ನೈಲ್ ಗೆ ವಿಕೆಟ್ ಒಪ್ಪಿಸಿದ್ದರು. ಪರಿಣಾಮ ಸರಣಿಯಲ್ಲಿ ಸತತ 2ನೇ ಅರ್ಧಶತಕ ಸಿಡಿಸುವ ಅವಕಾಶ ವಂಚಿತರಾದ್ರು.
Advertisement
ರಾಹುಲ್ ಔಟಾಗುತ್ತಿದಂತೆ 14 ರನ್ ಗಳಿಸಿದ್ದ ಧವನ್ ಕೂಡ ವಿಕೆಟ್ ಒಪ್ಪಿಸಿದರು. ಇತ್ತ ಯುವ ಆಟಗಾರ ಪಂತ್ 1 ರನ್‍ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ರಾಹುಲ್ ಔಟಾಗುತ್ತಿದಂತೆ ಕಣಕ್ಕೆ ಇಳಿದ ನಾಯಕ ಕೊಹ್ಲಿ ಪಂದ್ಯದಲ್ಲಿ ತಮ್ಮ ಕ್ಲಾಸಿ ಪ್ರದರ್ಶನದ ಮೂಲಕ ಗಮನ ಸೆಳೆದರು. ಇತ್ತ ಧೋನಿ ಕೂಡ ಟೀಕೆಗಳಿಗೆ ಉತ್ತರಿಸುವಂತೆ ಬ್ಯಾಟ್ಸ್ ಬೀಸಿದರು. 23 ಎಸೆತಗಳನ್ನು ಎದುರಿಸಿದ ಧೋನಿ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದ ಧೋನಿ ಅಂತರಾಷ್ಟ್ರಿಯ ಕ್ರಿಕೆಟ್ ನಲ್ಲಿ 350 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದರು.
Advertisement
The MS Dhoni entertainment comes to an end. He departs after scoring a brilliant 40 off 23 deliveries.#TeamIndia 174/4 with 5 more balls to go #INDvAUS pic.twitter.com/zXJ3LSKQEm
— BCCI (@BCCI) February 27, 2019
ಇತ್ತ ನಾಯಕ ಕೊಹ್ಲಿ ಕೂಡ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ ತಂಡದ ರನ್ ವೇಗವನ್ನು ಹೆಚ್ಚಿಸಿದರು. 38 ಎಸೆತಗಳಲ್ಲಿ 72 ಭರ್ಜರಿ 6 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿದ ಕೊಹ್ಲಿ 72 ರನ್ ಗಳಿಸಿ ಔಟಾಗದೆ ಉಳಿದರು. ಪರಿಣಾಮ ಭಾರತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತ 190 ರನ್ ಗಳಿಸಿತು. ಪಂದ್ಯದಲ್ಲಿ 2 ಬೌಂಡರಿ ಸಿಡಿಸಿದ ವೇಳೆ ಕೊಹ್ಲಿ ಟಿ20 ಮಾದರಿಯಲ್ಲಿ ಒಟ್ಟಾರೆ 223 ಬೌಂಡರಿಗಳನ್ನು ಸಿಡಿಸಿದ ಸಾಧನೆ ಮಾಡಿ ಶ್ರೀಲಂಕಾದ ದಿಲ್ಶನ್ ದಾಖಲೆಯನ್ನು ಸರಿಗಟ್ಟಿದರು. 80 ಪಂದ್ಯಗಳಲ್ಲಿ ದಿಲ್ಶನ್ಲ್ 223 ಬೌಂಡರಿ ಸಿಡಿಸಿದ್ದರು. ಉಳಿದಂತೆ ಭಾರತದ ಪರ ಕೊಹ್ಲಿ ಮತ್ತು ರೋಹಿತ್ ಮಾತ್ರ 200ಪ್ಲಸ್ ಬೌಂಡರಿ ಸಿಡಿಸಿದ ಸಾಧನೆ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv