ಕ್ರಿಕೆಟ್ ಶಿಶುಗಳ ಎದುರು ರನ್‍ಗಾಗಿ ತಿಣುಕಾಡಿದ ಕೊಹ್ಲಿ ಪಡೆ

Public TV
2 Min Read
kohli 5

ಸೌತಾಂಪ್ಟನ್: ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದ್ದ ಟೀಂ ಇಂಡಿಯಾ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ರನ್ ಗಳಿಸಲು ಪರದಾಡಿದೆ. ನಾಯಕ ಕೊಹ್ಲಿಯ ಅರ್ಧ ಶತಕದ ಬಳಿವೂ ನಿಗದಿತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಲಷ್ಟೇ ಶಕ್ತವಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ಅಫ್ಘಾನ್ ಯುವ ಬೌಲರ್ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಬೌಲಿಂಗ್ ಎದುರು ರನ್ ಗಳಿಸಿಲು ಪರದಾಡಿತು. ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಾಯಕ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಪರಿಣಾಮ ಯಾವುದೇ ಹಂತದಲ್ಲಿ ಟೀಂ ಇಂಡಿಯಾ ರನ್ ರೇಟ್ ಹೆಚ್ಚಿಸಲು ಸಾಧ್ಯವಾಗಲೇ ಇಲ್ಲ.

indvsAF

53 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ ಮೊಹಮ್ಮದ್ ನಬಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಆ ಬಳಿಕ ಬಂದ ವಿಜಯ್ ಶಂಕರ್ ಕೂಡ 41 ಎಸೆತಗಳಲ್ಲಿ 29 ರನ್ ಗಳಿಸಿ ನಿರ್ಗಮಿಸಿದರು. ಕೊಹ್ಲಿ, ರಾಹುಲ್ ಜೋಡಿ 52 ರನ್ ಜೊತೆಯಾಟ ನೀಡಿದರೆ, ಕೊಹ್ಲಿ ಮತ್ತು ವಿಜಯ್ ಶಂಕರ್ 58 ರನ್ ಜೊತೆಯಾಟವಾಡಿದರು. 5 ಬೌಂಡರಿ ಸಹಾಯದಿಂದ 63 ಎಸೆತಗಳಲ್ಲಿ 67 ರನ್ ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆದ ಮೊಹಮ್ಮದ್ ನಬಿ ಭಾರತಕ್ಕೆ ರನ್ ವೇಗ ಹೆಚ್ಚಿಸಿಕೊಳ್ಳದಂತೆ ನೋಡಿಕೊಂಡರು.

ಈ ಹಂತದಲ್ಲಿ ಒಂದಾದ ಧೋನಿ, ಕೇದಾರ್ ಜಾಧವ್ ಕುಸಿಯುತ್ತಿದ್ದ ಟೀಂ ಇಂಡಿಯಾಗೆ ಚೇತರಿಕೆ ನೀಡಲು ಮುಂದಾದರು. ಈ ಜೋಡಿ 5ನೇ ವಿಕೆಟ್‍ಗೆ 57 ರನ್ ಜೊತೆಯಾಟ ನೀಡಿತು. ಭಾರತ 40 ಓವರ್ ಗಳ ಅಂತ್ಯಕ್ಕೆ ಕೇವಲ 157 ರನ್ ಗಳಷ್ಟೇ ಪೇರಿಸಿತ್ತು. ಇತ್ತ ಕೇದಾರ್ ಜಾಧವ್ 68 ಎಸೆತಗಳಲ್ಲಿ 52 ರನ್ ಗಳಿಸಿ ತಂಡ ಮೊತ್ತ 200 ರನ್ ಗಡಿ ದಾಟುವಂತೆ ಮಾಡಿದರು. ಅಂತಿಮ ಹಂತದಲ್ಲಿ ಬಿರುಸಿನ ಆಟಕ್ಕೆ ಮುಂದಾಗಿ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ 41 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು.

ಅಫ್ಘಾನಿಸ್ತಾನ ಪರ ಶಿಸ್ತುಬದ್ಧ ಬೌಲಿಂಗ್ ನಡೆಸಿದ ಮೊಹಮ್ಮದ್ ನಬಿ, ಗುನ್ಬದೀನ್ ನೈಬ್ ತಲಾ 2 ವಿಕೆಟ್ ಪಡೆದರೆ ರಶಿದ್ ಖಾನ್, ರಹಮಾತ್ ಶಾ, ರೆಹಮಾನ್, ಅಲಮ್ ತಲಾ ಒಂದು ವಿಕೆಟ್ ಪಡೆದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *