ಸೌತಾಂಪ್ಟನ್: ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ 11 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಲ್ಕನೇ ಜಯ ಸಾಧಿಸಿದೆ.
ಟಾಸ್ ಗೆದ್ದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತ್ತು. 225 ರನ್ ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿನ ಕನಸು ಕೈ ತಪ್ಪಿಸಿಕೊಂಡಿದೆ.
Advertisement
TWO IN TWO!
Afghanistan, after battling so hard, now require 12 from the last two balls with one wicket in hand.#CWC19 | #INDvAFG https://t.co/JX8lD3swzS
— ICC Cricket World Cup (@cricketworldcup) June 22, 2019
Advertisement
ಕೊನೆಯ ಓವರ್ ನಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು 16 ರನ್ ಬೇಕಿತ್ತು. ಈ ಓವರ್ ನಲ್ಲಿ ಶಮಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಈ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮೊದಲ ಬೌಲರ್ ಎನಿಸಿಕೊಂಡರು.
Advertisement
46ನೇ ಓವರ್ ನಲ್ಲಿ ಬುಮ್ರಾ 7 ರನ್ ನೀಡಿದರೆ, 49 ನೇ ಓವರ್ ನಲ್ಲಿ 5 ರನ್ ನೀಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ 10 ಓವರ್ ಎಸೆದ ಬುಮ್ರಾ 1 ಮೇಡನ್ ಓವರ್ 39 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement
#GulbadinNaib on Jasprit Bumrah: "Credit goes to him, how he bowled in the last two, three overs was superb"#SpiritOfCricket #INDvAFG pic.twitter.com/aGxLCrL3yK
— ICC Cricket World Cup (@cricketworldcup) June 22, 2019
ಅಫ್ಘಾನ್‍ನ ಮೊಹಮ್ಮದ್ ನಬಿ 52 ರನ್ (55 ಎಸೆತ, 4 ಬೌಂಡರಿ,1 ಸಿಕ್ಸರ್), ರಹ್ಮತ್ ಶಾಹ 36 ರನ್ (63 ಎಸೆತ, 3 ಬೌಂಡರಿ) ನಾಯಕ ನೈಬ್ 27 ರನ್ (42 ಎಸೆತ, 2 ಬೌಂಡರಿ) ಗಳಿಸಿ ಔಟಾದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ಅಫ್ಘಾನ್ ಯುವ ಬೌಲರ್ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಬೌಲಿಂಗ್ ಎದುರು ರನ್ ಗಳಿಸಿಲು ಪರದಾಡಿತ್ತು. ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಾಯಕ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಪರಿಣಾಮ ಯಾವುದೇ ಹಂತದಲ್ಲಿ ಟೀಂ ಇಂಡಿಯಾ ರನ್ ರೇಟ್ ಹೆಚ್ಚಿಸಲು ಸಾಧ್ಯವಾಗಲೇ ಇಲ್ಲ.
A ???? reverse sweep
A ⚡ stumping off the next ball!
Afghanistan are 193/7 after 46 overs – they need 32 off 24 balls. #AFGvIND | #AfghanAtalan | #TeamIndia pic.twitter.com/WdQDqQic94
— ICC Cricket World Cup (@cricketworldcup) June 22, 2019
53 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ ಮೊಹಮ್ಮದ್ ನಬಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದರು. ಆ ಬಳಿಕ ಬಂದ ವಿಜಯ್ ಶಂಕರ್ ಕೂಡ 41 ಎಸೆತಗಳಲ್ಲಿ 21 ರನ್ ಗಳಿಸಿ ನಿರ್ಗಮಿಸಿದ್ದರು. ಕೊಹ್ಲಿ, ರಾಹುಲ್ ಜೋಡಿ 52 ರನ್ ಜೊತೆಯಾಟ ನೀಡಿದರೆ, ಕೊಹ್ಲಿ ಮತ್ತು ವಿಜಯ್ ಶಂಕರ್ 58 ರನ್ ಜೊತೆಯಾಟವಾಡಿದ್ದರು. 5 ಬೌಂಡರಿ ಸಹಾಯದಿಂದ 63 ಎಸೆತಗಳಲ್ಲಿ 67 ರನ್ ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆದ ಮೊಹಮ್ಮದ್ ನಬಿ ಭಾರತಕ್ಕೆ ರನ್ ವೇಗ ಹೆಚ್ಚಿಸಿಕೊಳ್ಳದಂತೆ ನೋಡಿಕೊಂಡಿದ್ದರು.
Afghanistan are now out of contention for the #CWC19 semi-finals. pic.twitter.com/YtTE32vPfW
— ICC Cricket World Cup (@cricketworldcup) June 22, 2019
ಈ ಹಂತದಲ್ಲಿ ಒಂದಾದ ಧೋನಿ, ಕೇದಾರ್ ಜಾಧವ್ ಕುಸಿಯುತ್ತಿದ್ದ ಟೀಂ ಇಂಡಿಯಾಗೆ ಚೇತರಿಕೆ ನೀಡಲು ಮುಂದಾಗಿದ್ದರು. ಈ ಜೋಡಿ 5ನೇ ವಿಕೆಟ್‍ಗೆ 57 ರನ್ ಜೊತೆಯಾಟ ನೀಡಿತ್ತು. ಭಾರತ 40 ಓವರ್ ಗಳ ಅಂತ್ಯಕ್ಕೆ ಕೇವಲ 157 ರನ್ ಗಳಷ್ಟೇ ಪೇರಿಸಿತ್ತು. ಇತ್ತ ಕೇದಾರ್ ಜಾಧವ್ 68 ಎಸೆತಗಳಲ್ಲಿ 52 ರನ್ ಗಳಿಸಿ ತಂಡ ಮೊತ್ತ 200 ರನ್ ಗಡಿ ದಾಟುವಂತೆ ಮಾಡಿದ್ದರು. ಅಂತಿಮ ಹಂತದಲ್ಲಿ ಬಿರುಸಿನ ಆಟಕ್ಕೆ ಮುಂದಾಗಿ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ 41 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತ್ತು.
ಅಫ್ಘಾನಿಸ್ತಾನ ಪರ ಶಿಸ್ತುಬದ್ಧ ಬೌಲಿಂಗ್ ನಡೆಸಿದ ಮೊಹಮ್ಮದ್ ನಬಿ, ಗುನ್ಬದೀನ್ ನೈಬ್ ತಲಾ 2 ವಿಕೆಟ್ ಪಡೆದರೆ ರಶಿದ್ ಖಾನ್, ರಹಮಾತ್ ಶಾ, ರೆಹಮಾನ್, ಅಲಮ್ ತಲಾ ಒಂದು ವಿಕೆಟ್ ಪಡೆದಿದ್ದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]