ಕೊಲಂಬೋ: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.
ಹೌದು. ಶ್ರೀಲಂಕಾ ವಿರುದ್ಧದ ಐದನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಅಖಿಲಾ ಧನಂಜಯರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 100 ಸ್ಟಂಪ್ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರವಾಗಿದ್ದಾರೆ.
Advertisement
ಕ್ಯಾಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಸಾಧನೆಯನ್ನು ಧೋನಿ ಸರಿಗಟ್ಟಿದ್ದರು.
Advertisement
ಇಂದಿನ ಪಂದ್ಯ ಸೇರಿದಂತೆ ಧೋನಿ ಒಟ್ಟು 301 ಪಂದ್ಯಗಳ 296 ಇನ್ನಿಂಗ್ಸ್ ಮೂಲಕ 100 ಸ್ಟಪ್ ಔಟ್ ಮಾಡಿದ್ದಾರೆ. 283 ಕ್ಯಾಚ್ ಗಳನ್ನು ಪಡೆಯುವ ಮೂಲಕ ಒಟ್ಟು 383 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ.
Advertisement
75 ಸ್ಟಂಪ್ ಔಟ್ ಮಾಡುವ ಮೂಲಕ ಶ್ರೀಲಂಕಾದ ರಮೇಶ್ ಕಲುವಿತರಣ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಮೋಯಿನ್ ಖಾನ್ 73 ಸ್ಟಂಪ್ ಔಟ್ ಮಾಡಿದ್ದರೆ, ಆಸ್ಟ್ರೇಲಿಯಾದ ಆಡಂ ಗಿಲ್‍ಕ್ರಿಸ್ಟ್ 55 ಸ್ಟಂಪ್ ಔಟ್ ಮಾಡುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.
Advertisement
4ನೇ ಸ್ಥಾನ: ಅತಿ ಹೆಚ್ಚು ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ವಿಕೆಟ್ ಕೀಪರ್‍ಗಳ ಪಟ್ಟಿಯಲ್ಲಿ ಧೋನಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 482(383 ಕ್ಯಾಚ್, 99 ಸ್ಟಂಪ್) ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಿಲ್‍ಕ್ರಿಸ್ಟ್ 472(417 ಕ್ಯಾಚ್, 55 ಸ್ಟಂಪ್) ಇದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ 424 ಬಲಿ(402 ಕ್ಯಾಚ್, 22 ಸ್ಟಂಪ್) ಪಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಸದ್ಯ ಒಟ್ಟು 377 ಮಂದಿಯನ್ನು ಔಟ್ ಮಾಡಿರುವ ಧೋನಿ 2019ರ ವಿಶ್ವಕಪ್ ಕ್ರಿಕೆಟ್‍ವರೆಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದರೆ ಸಂಗಕ್ಕಾರ ನಿರ್ಮಿಸಿದ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.
ಭಾರತದಲ್ಲಿ ಯಾರು ಎಷ್ಟು? ಭಾರತದ ಪರವಾಗಿ ನಯನ್ ಮೊಂಗಿಯಾ 44 ಸ್ಟಂಪ್ ಔಟ್ ಮಾಡಿದ್ದರೆ, ಕಿರಣ್ ಮೊರೆ 27 ಸ್ಟಂಪ್ ಔಟ್ ಮಾಡಿದ್ದಾರೆ. ಚಂದ್ರಕಾಂತ್ ಪಂಡಿತ್ 15 ಸ್ಟಂಪ್ ಮಾಡಿದ್ದರೆ, ರಾಹುಲ್ ದ್ರಾವಿಡ್ 14 ಸ್ಟಂಪ್ ಔಟ್ ಮಾಡಿದ್ದಾರೆ.
ಇದನ್ನೂ ಓದಿ: ನಾಟೌಟಲ್ಲೂ ಧೋನಿ ವಿಶ್ವ ದಾಖಲೆ!
.@msdhoni becomes first ever wicket-keeper to effect 100 stumpings in ODIs #TeamIndia #Dhoni100 pic.twitter.com/fchn8OazoU
— BCCI (@BCCI) September 3, 2017
Who said lightning doesn't strike twice? Today it did for the 100th time! Well done, @msdhoni! Keep them coming 🙂 ⚡ pic.twitter.com/HteDcKPWBi
— Sachin Tendulkar (@sachin_rt) September 3, 2017
https://twitter.com/DHONIism/status/904341019977596928
#BREAKING:MS Dhoni Retains MoS (Independent Charge) Ministry of Stumpings & Breaking Records.#CabinetReshuffle#Dhoni #Dhoni100st #Dhoni100 pic.twitter.com/TPs7dvQtqu
— Sir Jadeja fan (@SirJadeja) September 3, 2017
Wicket Keeping is not such a easy job????
283* catches
100* Stumpings#Dhoni100 #MSD ???????????? pic.twitter.com/TO6GaRbvNV
— Dr. ஷர்மிளா ᵀʰᵘⁿⁱᵛᵘ ???? (@SharmilaJS) September 3, 2017
The 100th Stumping of @msdhoni #Dhoni100 #SLvIND pic.twitter.com/b9zvkhYUmt
— Dhoni Raina Team (@dhoniraina_team) September 3, 2017
Deserves A Place As A
-Captain Alone
-Finisher Alone
-Wicket-keeper Alone
Still Haters Question His Selection.#Dhoni100 #Dhoni #MSDhoni pic.twitter.com/hTUS0rwaIY
— Sir Jadeja fan (@SirJadeja) September 3, 2017
https://youtu.be/ZTprzduNDDk
https://youtu.be/ULWBPEngbpk
https://youtu.be/B8kTz5cnvgo