ವಾಷಿಂಗ್ಟನ್: ಭಾರತ ಸೇನೆಯ ನೆಚ್ಚಿನ ಮೆರವಣಿಗೆ ಹಾಡಿಗೆ ಭಾರತೀಯ ಸೈನಿಕರ ಜೊತೆ ಅಮೆರಿಕದ ಸೈನಿಕರು ಹೆಜ್ಜೆ ಹಾಕಿದ್ದಾರೆ.
ಜಂಟಿ ಮಿಲಿಟರಿ ವ್ಯಾಯಾಮದ ಸಮಯದಲ್ಲಿ ಭಾರತೀಯ ಸೈನಿಕರು ಮತ್ತು ಅಮೆರಿಕದ ಸೈನಿಕರು ಜೊತೆಗೂಡಿ ನಮ್ಮ ದೇಶದ ಸೇನೆಯ ಮೆರವಣಿಗೆ ಗೀತೆಯಾದ ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ ಎಂಬ ಹಾಡನ್ನು ಹೇಳುತ್ತಾ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Advertisement
#WATCH Indian and American soldiers sing and dance on the Assam Regiment's marching song ‘Badluram ka badan zameen ke neeche hai’ during Exercise 'Yudhabhyas' being carried out at Joint Base Lewis, McChord in the United States of America pic.twitter.com/6vTuVFHZMd
— ANI (@ANI) September 15, 2019
Advertisement
ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ ಈ ಹಾಡು ಎರಡನೇ ಮಹಾಯುದ್ಧದಲ್ಲಿ ಹುತಾತ್ಮರಾದ ಅಸ್ಸಾಂ ರೆಜಿಮೆಂಟ್‍ನ ಸೈನಿಕ ಬದ್ಲುರಾಮ್ ಅವರಿಗೆ ಸಮರ್ಪಿಸಲಾಗಿರುವ ಬಹು ಜನಪ್ರಿಯ ಗೀತೆಯಾಗಿದೆ. ಈ ಹಾಡನ್ನು ಹಾಡುತ್ತಾ ಭಾರತ ಮತ್ತು ಅಮೆರಿಕ ಸೈನಿಕರ ಗುಂಪು ಚಪ್ಪಾಳೆ ತಟ್ಟುತ್ತಾ ಹರ್ಷೋದ್ಗಾರದಿಂದ ಡ್ಯಾನ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
Advertisement
ಮ್ಯಾಕ್‍ಕಾರ್ಡ್ ನ ಜಾಯಿಂಟ್ ಬೇಸ್ ಲೂಯಿಸ್‍ನಲ್ಲಿ ಭಾರತ ಮತ್ತು ಅಮೆರಿಕ ನಡೆಸಿದ ಜಂಟಿ ಸಮರಭ್ಯಾಸ ಕಾರ್ಯಕ್ರಮದ ಸಮಯದಲ್ಲಿ ಅಸ್ಸಾಂ ರೆಜಿಮೆಂಟ್‍ನ ಮೆರವಣಿಗೆಯ ಹಾಡನ್ನು ಸೈನಿಕರ ಗುಂಪು ಹಾಡಿ ಇದರ ಜೊತೆಗೆ ನೃತ್ಯವನ್ನು ಮಾಡಿದೆ.