ಮುಂಬೈ: ಟೀಂ ಇಂಡಿಯಾ ಅಂಡರ್-19 ವಿಶ್ವಕಪ್ ಗೆದ್ದ ನಾಯಕ ಯಶ್ ಧುಲ್ ಡೆಲ್ಲಿ ಪರ ರಣಜಿಯಲ್ಲಿ ಪಾದಾರ್ಪಣ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ.
Advertisement
ವೆಸ್ಟ್ ಇಂಡೀಸ್‍ನಲ್ಲಿ ನಡೆದ ಅಂಡರ್-19 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದ ಯಶ್ ಧುಲ್ ಇಂದು ಡೆಲ್ಲಿ ಪರ ರಣಜಿ ಕ್ರಿಕೆಟ್ ಆಡಲು ಮೈದಾನಕ್ಕಿಳಿದಿದ್ದಾರೆ. ಡೆಲ್ಲಿ ಮತ್ತು ತಮಿಳುನಾಡು ನಡುವಿನ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಆಡಿದ ಯಶ್ ಧುಲ್ 113 ರನ್ (150 ಎಸೆತ, 18 ಬೌಂಡರಿ) ಸಿಡಿಸಿ ಆಡಿದ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
Advertisement
???????????????? ???? ????????????????????????! ???? ????
???? on Ranji Trophy debut! ???? ????
This has been a fantastic batting performance from Yash Dhull in his maiden First Class game. ???? ???? @Paytm | #RanjiTrophy | #DELvTN | @YashDhull2002
Follow the match ▶️ https://t.co/ZIohzqOWKi pic.twitter.com/uaukVSHgUq
— BCCI Domestic (@BCCIdomestic) February 17, 2022
Advertisement
ವೆಸ್ಟ್ ಇಂಡೀಸ್‍ನಲ್ಲಿ ನಡೆದ ಅಂಡರ್-19 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದ ಯಶ್ ಧುಲ್ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಜೊತೆ ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸಿದ್ದರು. ಅಂಡರ್-19 ವಿಶ್ವಕಪ್‍ನಲ್ಲಿ ಒಟ್ಟು 6 ಪಂದ್ಯದಲ್ಲಿ ಯಶ್ ಧುಲ್ 1 ಶತಕ 3 ಅರ್ಧಶತಕ ಸಹಿತ 331 ರನ್ ಸಿಡಿಸಿದ್ದಾರೆ. ಅಲ್ಲದೇ ಐಪಿಎಲ್ ಮೆಗಾ ಹರಾಜಿನಲ್ಲಿ 50 ಲಕ್ಷ ರೂ.ಗೆ ಡೆಲ್ಲಿ ಕಾಪಿಟಲ್ಸ್ ತಂಡ ಖರೀದಿಸಿದೆ.
Advertisement