ಚಗುರಾಮಸ್: ಟೀಂ ಇಂಡಿಯಾದ ನಾಯಕ ಶಿಖರ್ ಧವನ್, ಶುಭಮನ್ ಗಿಲ್ ಅವರ ಬ್ಯಾಟಿಂಗ್ ಅಬ್ಬರದ ನೆರವಿನಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 3 ರನ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿತು.
ವೆಸ್ಟ್ಇಂಡೀಸ್‌ನ ಪೋರ್ಟ್ ಆಫ್ ಸ್ಫೇನ್‌ನ ಕ್ವೀನ್ಸ್ ಪಾರ್ಕ್ ಓವಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 308 ರನ್‌ಗಳನ್ನು ಗಳಿಸಿ, ಆತಿಥೇಯ ವೆಸ್ಟ್ಇಂಡೀಸ್‌ಗೆ 309 ರನ್‌ಗಳ ಗುರಿ ನೀಡಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ 6 ವಿಕೆಟ್‌ಗಳ ನಷ್ಟಕ್ಕೆ 305 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಗಿ ಭಾರತದ ಎದುರು ಸೋಲೊಪ್ಪಿಕೊಂಡಿತು.
Advertisement
Advertisement
ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಗೆಲುವಿನ ನಗೆ ಬೀರಿತು. ಇದನ್ನೂ ಓದಿ: ಗಾಯಗೊಂಡ ರವೀಂದ್ರ ಜಡೇಜಾ – ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ ಅಮಿರ್ ಅಲಿ
Advertisement
ಟೀಂ ಇಂಡಿಯಾ ನೀಡಿದ 309 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮವಾಗಿಯೇ ಇನ್ನಿಂಗ್ಸ್ ಆರಂಭಿಸಿತು. ಆರಂಭಿಕ ಆಟಗಾರ ಶಾಯ್‌ಹೋಪ್ 8 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆ ನಂತರದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೈಲ್ ಮೇಯರ್ಸ್ ಅವರಿಂದ 75 ರನ್ ಮತ್ತು ಬ್ರ‍್ಯಾಂಡನ್ ಕಿಂಗ್ ಅವರ ಅರ್ಧಶತಕದ ನೆರವು ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ಯುತ್ತಿತ್ತು.
Advertisement
ಕೈಲ್ ಮೇಯರ್ಸ್ 68 ಎಸೆತಗಳಲ್ಲಿ 75 ರನ್ (10 ಬೌಂಡರಿ, 1 ಸಿಕ್ಸರ್) ಸಿಡಿಸಿದರೆ, ಬ್ರ‍್ಯಾಂಡನ್ ಕಿಂಗ್ 66 ಎಸೆತಗಳಲ್ಲಿ 54 ರನ್ (2 ಬೌಂಡರಿ, 2 ಸಿಕ್ಸರ್) ರನ್‌ಗಳನ್ನು ಕಲೆಹಾಕಿ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಶಮರ್ ಬ್ರೂಕ್ಸ್ 45 ರನ್, ನಿಕೋಲಸ್ ಪೂರನ್ 25 ರನ್, ರೋವ್ಮನ್ ಪೋವೆಲ್ 6 ರನ್ ಗಳಿಸಿದರು. ಅಂತಿಮವಾಗಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅಕೆಲ್ ಹೊಸೈನ್ 32 ರನ್ ಹಾಗೂ ರೊಮಾರಿಯೊ ಶೆಫರ್ಡ್ 39 ರನ್ ಸಿಡಿಸಿ ಅಜೇಯರಾಗುಳಿದರು. ಡೆತ್ ಓವರ್‌ಗಳಲ್ಲಿ ರೊಮಾರಿಯೊ ಶೆಫರ್ಡ್ ಮತ್ತು ಅಕೆಲ್ ಹೊಸೈನ್ ನಡೆಸಿದ ಹೋರಾಟ ವ್ಯರ್ಥವಾಗಿ ಕೊನೆಗೊಂಡಿತು. ಟೀಂ ಇಂಡಿಯಾ ಎದುರು 305 ರನ್‌ಗಳಿಸಿ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
ಇನ್ನು ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಪರ ಅಲ್ಜಾರಿ ಜೋಸೆಫ್ 10 ಓವರ್‌ಗಳಲ್ಲಿ 61 ರನ್ ನೀಡಿ 2 ವಿಕೆಟ್ ಪಡೆದರು. ಅದೇ ರೀತಿ ಗುಡಕೇಶ್ ಮೋಟಿ 10 ಓವರ್‌ಗಳಲ್ಲಿ 54 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ – ಫೈನಲ್‍ಗೆ ಲಗ್ಗೆ ಇಟ್ಟ ಎಲ್ದೋಸ್ ಪಾಲ್, ರೋಹಿತ್ ಯಾದವ್
ಟೀಂ ಇಂಡಿಯಾ ಶುಭಾರಂಭ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶಿಖರ್ ಧವನ್ ನಾಯಕತ್ವದ ಭಾರತ ತಂಡ ಆತಿಥೇಯ ತಂಡದ ವಿರುದ್ಧ ಉತ್ತಮ ಮೊತ್ತ ಕಲೆಹಾಕಿತ್ತು. ನಾಯಕ ಶಿಖರ್ ಧವನ್, ಶುಭ್‌ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧ ಶತಕಗಳ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿ, ಎದುರಾಳಿ ತಂಡಕ್ಕೆ 309 ರನ್‌ಗಳ ಬೃಹತ್ ಗುರಿ ನೀಡಿತ್ತು.
ಟೀಂ ಇಂಡಿಯಾ ನಾಯಕ ಶಿಖರ್ ಧವನ್ 99 ಎಸೆತಗಳಲ್ಲಿ 97 ರನ್ (10 ಬೌಂಡರಿ, 3 ಸಿಕ್ಸರ್) ಸಿಡಿಸಿ ಶತಕ ವಂಚಿತರಾದರು. ಮತ್ತೊಬ್ಬ ಆರಂಭಿಕ ಶುಭಮನ್ ಗಿಲ್ 64 ರನ್ (53 ಎಸೆತ, 6 ಬೌಂಡರಿ, 2 ಸಿಕ್ಸರ್) ಸಿಡಿಸಿ ರನ್ ಮಳೆ ಸುರಿಸಿದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 54 ರನ್ (57 ಎಸೆತ, 5 ಬೌಂಡರಿ, 2 ಸಿಕ್ಸರ್) ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು. ನಂತರದಲ್ಲಿ ಕ್ರೀಸ್‌ಗಿಳಿದ ದೀಪಕ್ ಹೂಡಾ 27, ಅಕ್ಷರ್ ಪಟೇಲ್ 21 ರನ್‌ಗಳನ್ನು ಟೀಂ ಇಂಡಿಯಾಕ್ಕೆ ಕೊಡುಗೆಯಾಗಿ ನೀಡಿದರು.
ನಾಯಕ ಶಿಖರ್ ಧವನ್ ಮತ್ತು ಶುಭ್‌ಮನ್ ಗಿಲ್ ಮೊದಲ ವಿಕೆಟ್‌ಗೆ 17.4 ಓವರ್‌ಗಳಲ್ಲಿ 119 ರನ್ ಜೊತೆಯಾಟ ನೀಡಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ಮಧ್ಯದಲ್ಲಿ ಒಂದರ ಹಿಂದೆ ಒಂದು ವಿಕೆಟ್ ಉರುಳುತ್ತಿದ್ದಂತೆ ಭಾರತದ ರನ್ ವೇಗಕ್ಕೆ ಕಡಿವಾಣ ಬಿತ್ತು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ವಿಂಡೀಸ್ ಬೌಲಿಂಗ್ ದಾಳಿಗೆ ಪ್ರತಿರೋಧ ಒಡ್ಡಲು ವಿಫಲರಾದರು. ಈ ಇಬ್ಬರು ಬ್ಯಾಟರ್‌ಗಳು ಕ್ರಮವಾಗಿ 13 ಮತ್ತು 12 ರನ್ ಗಳಿಸಿ ಔಟಾದರು.
ಸಿರಾಜ್ ಬೌಲಿಂಗ್ ದಾಳಿ: ಕೊನೆಯ ಓವರ್‌ನಲ್ಲಿ 15 ರನ್ ಬೇಕಿದ್ದಾಗ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ 11 ರನ್ ನೀಡಿ ಗೆಲುವಿಗೆ ಕಾರಣರಾದರು. ಅಲ್ಲದೇ 10 ಓವರ್‌ಗಳಲ್ಲಿ 58 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಲೆಗ್-ಸ್ಪಿನ್ನರ್ ಯುಜುವೇಂದ್ರ ಚಹಾಲ್ ಅಗತ್ಯ ಸಂದರ್ಭದಲ್ಲಿ 2 ವಿಕೆಟ್ ಪಡೆದರು ಮತ್ತು ಭಾರತ ಯಶಸ್ವಿಯಾಗಿ 308 ರನ್‌ಗಳಿಗೆ ವಿಂಡೀಸ್ ಅನ್ನು ಕಟ್ಟಿಹಾಕಿತು.