ಜೋಹಾನ್ಸ್‌ಬರ್ಗ್: ಅರ್ಷ್‌ದೀಪ್ ಸಿಂಗ್ (Arshdeep Singh) ಮತ್ತು ಅವೇಶ್ ಖಾನ್ ಅವರ ಘಾತಕ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಯುವ ಆರಂಭಿಕ ಸಾಯಿ ಸುದರ್ಶನ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ ಭಾರತ (Team India) 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
Maiden 5⃣-wicket haul in international cricket! ???? ????
Take A Bow – @arshdeepsinghh ???? ????
Follow the Match ▶️ https://t.co/tHxu0nUwwH #TeamIndia | #SAvIND pic.twitter.com/xhWmAxmNgK
— BCCI (@BCCI) December 17, 2023
Advertisement
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಸೂಪರ್ ಸಂಡೇ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ (South Africa) ತಂಡ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 16.4 ಓವರ್‌ಗಳಲ್ಲೇ 2 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಜಯ ಸಾಧಿಸಿತು.
Advertisement
ಭಾರತದ ಪರ ತಾಳ್ಮೆಯ ಆಟವಾಡಿದ ಯುವ ಆರಂಭಿಕ ಸಾಯಿ ಸುದರ್ಶನ್ (Sai Sudharsan) ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕಗಳ ಕೊಡುಗೆ ನೀಡಿದರು. ಶ್ರೇಯಸ್ ಅಯ್ಯರ್ 45 ಎಸೆತಗಳಲ್ಲಿ 52 ರನ್ (6 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರೆ, ಸಾಯಿ ಸುದರ್ಶನ್ 43 ಎಸೆತಗಳಲ್ಲಿ 55 ರನ್ (9 ಬೌಂಡರಿ, 43 ಎಸೆತ) ಬಾರಿಸಿ ಅಜೇಯರಾಗುಳಿದರು. ಇದರಿಂದ ಭಾರತ 16.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 117 ರನ್ ಬಾರಿಸಿ ಗೆಲುವು ದಾಖಲಿಸಿತು. ಸರಣಿಯ ದ್ವಿತೀಯ ಪಂದ್ಯ ಡಿಸೆಂಬರ್ 19 ಮಂಗಳವಾರ ನಡೆಯಲಿದೆ.
Advertisement
Advertisement
ದಾಖಲೆ ಬರೆದ ಅರ್ಷ್‌ದೀಪ್:
ವೇಗಿ ಅರ್ಷ್‌ದೀಪ್ ಸಿಂಗ್ ಹರಿಣರ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ಭಾರತ ಪರ ಹೊಸ ದಾಖಲೆಯೊಂದನ್ನು ಬರೆದರು. ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಕಿತ್ತ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದ್ರೆ, ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಅವರಿಗೆ 4ನೇ ಸ್ಥಾನವನ್ನೂ ಪಡೆದುಕೊಂಡರು. ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಮೊದಲಿಗರಾಗಿದ್ದಾರೆ. ಜೋಶಿ 1999ರಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 6 ರನ್ಗೆ 5 ವಿಕೆಟ್ ಕಿತ್ತು ಮಿಂಚಿದ್ದರು. ಯಜುವೇಂದ್ರ ಚಾಹಲ್ (22 ರನ್ಗೆ 5) ಮತ್ತು ರವೀಂದ್ರ ಜಡೇಜಾ (33 ರನ್ಗೆ 5) ನಂತರದ ಸ್ಥಾನಗಳಲ್ಲಿದ್ದಾರೆ.
ಅರ್ಷ-ಆವೇಶ ನಡುವೆ ಹಣಾ-ಹಣಿ:
ಅರ್ಷ್‌ದೀಪ್ ಸಿಂಗ್‌ಗೆ ಜಿದ್ದಿಗೆ ಬಿದ್ದವರಂತೆ ಪೈಪೋಟಿ ನೀಡಿದ ಅವೇಶ್ ಖಾನ್ ತಮ್ಮ ಆವೇಶಭರಿತ ಬೌಲಿಂಗ್ ದಾಳಿ ನಡೆಸುವ ಮೂಲಕ 27 ರನ್ ನೀಡಿ 4 ವಿಕೆಟ್ ಕಿತ್ತರು. ಕುಲ್ದೀಪ್ ಯಾದವ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಉಭಯ ಬೌಲರ್ಗಳ ಘಾತುಕ ಬೌಲಿಂಗ್ ದಾಳಿಯನ್ನು ಎದುರಿಸಲು ವಿಫಲವಾದ ಡೇವಿಡ್ ಮಿಲ್ಲರ್ 2 ರನ್, ಹೆನ್ರಿಕ್ ಕ್ಲಾಸೆನ್ 6 ರನ್, ನಾಯಕ ಐಡೆನ್ ಮಾರ್ಕ್ರಮ್ 12 ರನ್ ಗಳಿಸಿದ್ರೆ ವಿಯಾನ್ ಮುಲ್ಡರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆಂಡ್ರಿಕ್ಸ್ ಶೂನ್ಯ ಸುತ್ತಿದರು.
ಫೆಹ್ಲುಕ್ವಾಯೊ ಹೋರಾಟ ವ್ಯರ್ಥ:
58ರನ್ಗೆ 7 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ 100 ರನ್ ಗಳಿಸುವುದೂ ಕಷ್ಟವಾಗಿತ್ತು. ಆದ್ರೆ ಬೌಲರ್ ಆಂಡಿಲೆ ಫೆಹ್ಲುಕ್ವಾಯೊ. ಭಾರತೀಯ ಬೌಲರ್ಗಳ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ 2 ಸಿಕ್ಸರ್ ಮತ್ತು 3 ಬೌಂಡರಿ ಬಾರಿಸಿ 33 ರನ್ ಗಳಿಸಿದರು. ಇಂದು ಇದೇ ತಂಡದ ಪರ ಗಳಿಸಿದ ಅಧಿಕ ರನ್ ಆಗಿತ್ತು. ಆದ್ರೆ ಭಾರತದ ಎದುರು ಈ ಆಟ ವ್ಯರ್ಥವಾಯಿತು.