ವೆಲ್ಲಿಂಗ್ಟನ್: ಕಿವೀಸ್ ವಿರುದ್ಧದ ಟಿ20 (T20) ಮತ್ತು ಏಕದಿನ (ODI) ಸರಣಿಗಾಗಿ ನ್ಯೂಜಿಲೆಂಡ್ (New Zealand) ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ (Team India) ನಾಳೆಯಿಂದ ಟಿ20 ಸರಣಿಯನ್ನಾಡಲಿದ್ದು ಡಿ.ಡಿ ಸ್ಪೋರ್ಟ್ಸ್‌ನಲ್ಲಿ (DD Sports) ಪಂದ್ಯ ನೇರ ಪ್ರಸಾರವಾಗಲಿದೆ.
Advertisement
ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆಯದ ಕಾರಣ ಸ್ಟಾರ್ ಮತ್ತು ಹಾಟ್‍ಸ್ಟಾರ್‌ನಲ್ಲಿ ಪ್ರಸಾರವಾಗುವುದಿಲ್ಲ. ಟಿವಿ ರೈಟ್ಸ್ ಪಡೆದ ಕಾರಣ ದೂರದರ್ಶನ ಸ್ಪೋರ್ಟ್ಸ್‌ನಲ್ಲಿ (ಡಿ.ಡಿ ಸ್ಪೋರ್ಟ್ಸ್) ಮಾತ್ರ ಕ್ರಿಕೆಟ್ ವೀಕ್ಷಿಸಬಹುದು. ಇದನ್ನೂ ಓದಿ: ಭಾರತ-ಕಿವೀಸ್ ಸರಣಿ ಆರಂಭಕ್ಕೂ ಮುನ್ನ ಕಪ್ ಹಿಡಿದು ಹೊರಟ ವಿಲಿಯಮ್ಸನ್
Advertisement
Advertisement
ಅಮೆಜಾನ್ ಪ್ರೈಮ್‍ನಲ್ಲಿ ಲೈವ್ ಸ್ಟ್ರೀಮಿಂಗ್
ಅಮೆಜಾನ್ ಪ್ರೈಮ್ ವೀಡಿಯೋ ಓಟಿಟಿಯಲ್ಲಿ ಪಂದ್ಯಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲಿದೆ. ಮೊದಲ ಬಾರಿಗೆ ಟೀಂ ಇಂಡಿಯಾದ ಪಂದ್ಯವನ್ನು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ. ಪಂದ್ಯವನ್ನು ಲೈವ್ ಆಗಿ ವೀಕ್ಷಿಸಲು ಅಭಿಮಾನಿಗಳು ಪ್ರೈಮ್ ಚಂದಾದಾರರಾಗಬೇಕು. ಇದನ್ನೂ ಓದಿ: ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್ ಲಿಸ್ಟ್
Advertisement
1st T20I starts tomorrow at 11am!
Watch India's tour of New Zealand, 18th-30th Nov, live and exclusive only on Prime Video#NZvINDonPrime #CricketonPrime pic.twitter.com/uF0BBSp4G7
— prime video IN (@PrimeVideoIN) November 17, 2022
ಕಿವೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಟಿ20 ಸರಣಿಯ ಮೂರು ಪಂದ್ಯಗಳು ನ.18, 20 ಮತ್ತು 22 ರಂದು ನಡೆಯಲಿದೆ. ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. 3 ಪಂದ್ಯಗಳ ಏಕದಿನ ಸರಣಿ ನ.25, 27 ಮತ್ತು 30 ರಂದು ನಡೆಯಲಿದ್ದು, ಟೀಂ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಟಿ20 ಮತ್ತು ಏಕದಿನ ತಂಡಕ್ಕೆ ಪ್ರತ್ಯೇಕ ನಾಯಕರನ್ನು ನೇಮಿಸಲಾಗಿದೆ. ಈ ಸರಣಿಯಿಂದ ರೋಹಿತ್ ಶರ್ಮಾ, ಕೊಹ್ಲಿ ಸಹಿತ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.