– 7 ರನ್ ಗಳಿಗೆ 3 ವಿಕೆಟ್ ಪತನ
ಹ್ಯಾಮಿಲ್ಟನ್: ಮೂರನೇ ಟಿ20 ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ನ್ಯೂಜಿಲೆಂಡಿಗೆ ಭಾರತ 180 ರನ್ ಗಳ ಗುರಿಯನ್ನು ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತದ ಪರವಾಗಿ ರೋಹಿತ್ ಶರ್ಮಾ ಮತ್ತು ರಾಹುಲ್ ಉತ್ತಮ ಆರಂಭ ನೀಡಿದರೂ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿದ್ದರಿಂದ ರನ್ ವೇಗಕ್ಕೆ ಕಡಿವಾಣ ಬಿತ್ತು. ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 179 ರನ್ ಹೊಡೆಯಲು ಭಾರತ ಯಶಸ್ವಿಯಾಯ್ತು.
Advertisement
Advertisement
ಮೊದಲ ಓವರಿನಲ್ಲಿ 4 ರನ್ ಹೊಡೆದು ಖಾತೆ ತೆರೆದ ರೋಹಿತ್ ಶರ್ಮಾ 65 ರನ್(40 ಎಸೆತ, 6 ಬೌಂಡರಿ, 3 ಸಿಕ್ಸರ್) ಹೊಡೆದರೆ ರಾಹುಲ್ 27 ರನ್(19 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಇವರಿಬ್ಬರು ಮೊದಲ ವಿಕೆಟಿಗೆ 54 ಎಸೆತಗಳಲ್ಲಿ 89 ರನ್ ಜೊತೆಯಾಟವಾಡಿದರು. ರೋಹಿತ್ ಶರ್ಮಾ ಹಮಿಶ್ ಬೆನೆಟ್ ಎಸೆದ ಇನ್ನಿಂಗ್ಸ್ 6ನೇ ಓವರ್ ಸತತ 5 ಎಸೆತಗಳಲ್ಲಿ 26 ರನ್(6,6,4,4,6) ಹೊಡೆದರು.
Advertisement
ಶಿವಂ ದುಬೆ 3 ರನ್, ಶ್ರೇಯಸ್ ಅಯ್ಯರ್ 17 ರನ್ ಗಳಿಸಿ ಔಟಾದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 38 ರನ್(27 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ಕ್ಯಾಚ್ ನೀಡಿ ಔಟಾದರು. ವಿಕೆಟ್ ನಷ್ಟವಿಲ್ಲದೆ 8.5 ಓವರ್ ಗಳಲ್ಲಿ 89 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ 7 ರನ್ ಸೇರಿಸುವಷ್ಟರಲ್ಲಿ ಅಮೂಲ್ಯ ವಿಕೆಟ್ ಕಳೆದುಕೊಂಡಿದ್ದರಿಂದ ರನ್ ವೇಗಕ್ಕೆ ಕಡಿವಾಣ ಬಿತ್ತು.
Advertisement
ಕೊನೆಯಲ್ಲಿ ಜಡೇಜಾ ಮತ್ತು ಮನಿಷ್ ಪಾಂಡೆ ಅಬ್ಬರದ ಬ್ಯಾಟಿಂಗ್ ನಡೆಸಿದ ಪರಿಣಾಮ ತಂಡ 170 ರನ್ ಗಳ ಗಡಿಯನ್ನು ದಾಟಿತು. ಮನಿಷ್ ಪಾಂಡೆ 14 ರನ್(6 ಎಸೆತ, 1 ಬೌಂಡರಿ, 1 ಸಿಕ್ಸರ್) ರವೀಂದ್ರ ಜಡೇಜಾ 10 ರನ್(5 ಎಸೆತ, 1 ಸಿಕ್ಸರ್) ಹೊಡೆದರು. ಸೌಥಿ ಎಸೆತ ಕೊನೆಯ ಓವರ್ ನಲ್ಲಿ ಈ ಜೋಡಿ 18 ರನ್ ಕಲೆ ಹಾಕಿ ತಂಡದ ಮೊತ್ತವನ್ನು ಹಿಗ್ಗಿಸಿತು.
ಭಾರತ ರನ್ ಏರಿದ್ದು ಹೇಗೆ?
50 ರನ್ – 33 ಎಸೆತ
100 ರನ್ – 73 ಎಸೆತ
150 ರನ್ – 107 ಎಸೆತ
179 ರನ್ – 120 ಎಸೆತ