ಡಬ್ಲಿನ್: ಬರೋಬ್ಬರಿ 11 ತಿಂಗಳ ಬಳಿಕ ಟೀಂ ಇಂಡಿಯಾಕ್ಕೆ ಉತ್ತಮ ಕಂಬ್ಯಾಕ್ ಮಾಡಿರುವ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಐರ್ಲೆಂಡ್ ವಿರುದ್ಧ ನಾಯಕನಾಗಿ ಕಣಕ್ಕಿಳಿದು ಟೀಂ ಇಂಡಿಯಾಕ್ಕೆ (Team India) ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಮೊದಲ ಓವರ್‌ನ 4 ಎಸೆತಗಳಲ್ಲೇ 2 ವಿಕೆಟ್ ಪಡೆಯುವ ಮೂಲಕ ಮತ್ತೆ ಫಾರ್ಮ್ ಸಾಬೀತುಪಡಿಸಿದ್ದಾರೆ.
ಐರ್ಲೆಂಡ್ (Ireland) ವಿರುದ್ಧ ಆರಂಭಗೊಂಡಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯದಲ್ಲೇ 2 ರನ್‌ಗಳ ರೋಚಕ ಜಯ ಸಾಧಿಸಿದೆ. ಮಲಾಹೈಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 7 ವಿಕೆಟ್ ನಷ್ಟಕ್ಕೆ 139 ರನ್ ಕಲೆಹಾಕಿತ್ತು. 140 ರನ್‌ಗಳ ಗುರಿ ಪಡೆದ ಟೀಂ ಇಂಡಿಯಾ 6.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತ್ತು. ಈ ನಡುವೆ ಮಳೆ ಅಡ್ಡಿಯಾಗಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮ ಅನ್ವಯಿಸಲಾಯಿತು. ಇದರಿಂದ ಭಾರತ 2 ರನ್‌ಗಳ ರೋಚಕ ಜಯ ಸಾಧಿಸಿತು.
Advertisement
Advertisement
ಟಾಸ್ ಸೋತು ಕ್ರೀಸ್‌ಗಿಳಿದ ಐರ್ಲೆಂಡ್, ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿತು. ಪವರ್ ಪ್ಲೇ ಮುಗಿಯುವ ವೇಳೆಗೆ 30 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆದ್ರೆ ಕೊನೆಯಲ್ಲಿ ಆಲ್‌ರೌಂಡರ್ ಬ್ಯಾರಿ ಜಾನ್ ಮೆಕಾರ್ಥಿ (Barry John McCarthy) 33 ಎಸೆತಗಳಲ್ಲಿ ಅಜೇಯ 51 ರನ್ (4 ಬೌಂಡರಿ, 4 ಸಿಕ್ಸರ್) ಹಾಗೂ ಕರ್ಟಿಸ್ ಕ್ಯಾಂಫರ್ 33 ಎಸೆತಗಳಲ್ಲಿ 33 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಐರ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತ್ತು. ಇದನ್ನೂಓದಿ: ಇಂದಿನಿಂದ IND vs IRE ಟಿ20 ಸರಣಿ ಆರಂಭ – 11 ತಿಂಗಳ ಬಳಿಕ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಬುಮ್ರಾ
Advertisement
Advertisement
ಮೊದಲು ಫೀಲ್ಡಿಂಗ್ ಆಯ್ದುಕೊಂಡ ನಾಯಕ ಬುಮ್ರಾ 4 ಓವರ್‌ಗಳಲ್ಲಿ 24 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 4 ಓವರ್‌ಗಳಲ್ಲಿ 2 ವಿಕೆಟ್ ಪಡೆದು ಫಾರ್ಮ್ ಸಾಬೀತು ಮಾಡಿದರು. ಇದರೊಂದಿಗೆ ರವಿ ಬಿಷ್ಣೋಯಿ 2 ವಿಕೆಟ್ ಹಾಗೂ ಅರ್ಷ್‌ದೀಪ್ ಸಿಂಗ್ 1 ವಿಕೆಟ್ ಪಡೆದರು. ಇದನ್ನೂಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ವಿರಾಟ್ – ಕಿಂಗ್ ಆದ ಕೊಹ್ಲಿಯ ರೋಚಕ ಜರ್ನಿ
140 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (Yashasvi Jaiswal) 23 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಈ ಬೆನ್ನಲ್ಲೇ ತಿಲಕ್ ವರ್ಮಾ ಕೋಡ ಸುಲಭ ಕ್ಯಾಚ್‌ಗೆ ತುತ್ತಾದರು. ಆರಂಭಿಕ ಋತುರಾಜ್ ಗಾಯಕ್ವಾಡ್ 19 ರನ್ ಹಾಗೂ ಸಂಜು ಸ್ಯಾಮ್ಸನ್ 1 ರನ್ ಗಳಿಸಿ ಕ್ರೀಸ್‌ನಲ್ಲಿದರು. ಈ ವೇಳೆ ಮಳೆ ಅಡ್ಡಿಯಾಯಿತು, ಮಳೆ ನಿಲ್ಲದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಜಯದ ತಂಡವನ್ನ ಘೋಷಿಸಲಾಯಿತು. ಭಾರತ 2 ರನ್‌ಗಳ ರೋಚಕ ಜಯ ಸಾಧಿಸಿತು. ಐರ್ಲೆಂಡ್ ಪರ ಕ್ರೇಗ್ ಯಂಗ್ 5 ಎಸೆತಗಳಲ್ಲಿ 2 ರನ್ ನೀಡಿ 2 ವಿಕೆಟ್ ಕಿತ್ತರು.
Web Stories