ಢಾಕಾ: ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ (ODI) ಆರಂಭದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಭ್ ಪಂತ್ (Rishabh Pant) ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ.
Advertisement
ಪಂತ್ ಗಾಯಗೊಂಡಿರುವುದರಿಂದ ಏಕದಿನ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಟೆಸ್ಟ್ ಸರಣಿಯ ವೇಳೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ತಂಡದ ಮ್ಯಾನೇಜ್‍ಮೆಂಟ್ ತಿಳಿಸಿದೆ. ಇತ್ತ ಪಂತ್ ಹೊರಬಿದ್ದೊಡನೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕನ್ನಡಿಗ ಕೆ.ಎಲ್ ರಾಹುಲ್‍ಗೆ (Rishabh Pant) ವಹಿಸಲಾಗಿದೆ. ಇದನ್ನೂ ಓದಿ: ಬಾಂಗ್ಲಾದ ನಾಯಕ-ಭಾರತದ ಬೌಲರ್ – ಏಕದಿನ ಸರಣಿ ಆರಂಭಕ್ಕೂ ಮುನ್ನ ಔಟ್
Advertisement
Advertisement
ಮೊದಲ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಸಂಜು ಸ್ಯಾಮ್ಸನ್ ಬಾಂಗ್ಲಾ ಸರಣಿಗೆ ಆಯ್ಕೆ ಆಗಿಲ್ಲ. ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಗಿ ಸ್ಥಾನ ಪಡೆದಿರುವ ಇನ್ನೋರ್ವ ಆಟಗಾರ ಇಶಾನ್ ಕಿಶನ್ ಇದ್ದರೂ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡುತ್ತಿರುವ ಬಗ್ಗೆ ಈಗಾಗಲೇ ಟೀಕೆಗಳು ಕೇಳಿಬರುತ್ತಿದೆ. ಇದನ್ನೂ ಓದಿ: ದೇವರ ನಾಡಲ್ಲಿ ಐಪಿಎಲ್ ಮಿನಿ ಹರಾಜು – ಭಾರತದ 714 ಸೇರಿ ಒಟ್ಟು 991 ಆಟಗಾರರು ನೋಂದಣಿ
Advertisement
So, Rishabh has been released and Samson is in India! And back to KL Rahul to keep wickets when keepers are waiting for an opportunity and Ishan Kishan is there! I am quite confused.
— Harsha Bhogle (@bhogleharsha) December 4, 2022
ನಿನ್ನೆ ವೇಗಿ ಮೊಹಮ್ಮದ್ ಶಮಿ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದರು. ಇಂದು ಪಂತ್ ಅವರ ದಾರಿ ಹಿಡಿದಿದ್ದಾರೆ. ಏಕದಿನ ಸರಣಿ (ODI) ಜೊತೆ ಟೆಸ್ಟ್ ಸರಣಿಯಿಂದಲು ಶಮಿ ಹೊರಬೀಳುವ ಸಾಧ್ಯತೆ ಇದೆ. ಈಗಾಗಲೇ ಪುನರ್‌ಶ್ಚೇತನ ಶಿಬಿರಕ್ಕಾಗಿ ಬೆಂಗಳೂರಿಗೆ ಎನ್‍ಸಿಎಗೆ (NCA) ಕಳುಹಿಸಲು ಟೀಂ ಮ್ಯಾನೇಜ್‍ಮೆಂಟ್ ಪ್ಲಾನ್ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಶಮಿ ಬದಲು ಉಮ್ರಾನ್ ಮಲಿಕ್‍ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಬಾಂಗ್ಲಾದೇಶ ಮತ್ತು ಭಾರತ ನಡುವೆ 3 ಏಕದಿನ ಪಂದ್ಯ ಮತ್ತು 2 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಇಂದಿನಿಂದ ಏಕದಿನ ಸರಣಿ ಆರಂಭವಾಗಿದ್ದು ಡಿ.14 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.