ಭಾರತಕ್ಕೆ 188 ರನ್‌ಗಳ ಗೆಲುವು – ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ

Public TV
2 Min Read
INDvsBAN test 2

ಢಾಕಾ: ಟೀಂ ಇಂಡಿಯಾದ ಕುಲ್‌ದೀಪ್ ಯಾದವ್ (Kuldeep Yadav), ಅಕ್ಷರ್ ಪಟೇಲ್ (Axar Patel) ಸ್ಪಿನ್ ಬೌಲಿಂಗ್ ದಾಳಿ ಹಾಗೂ ಶುಭಮನ್‌ಗಿಲ್ (Shubman Gill), ಚೇತೇಶ್ವರ್ ಪೂಜಾರ (Cheteshwar Pujara) ಭರ್ಜರಿ ಶತಕದ ಕಮಾಲ್‌ನಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ (Test Cricket) ಪಂದ್ಯದಲ್ಲಿ ಭಾರತ 188 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

INDvsBAN test

ಭಾರತದ ಬೌಲರ್‌ಗಳ ಸಂಘಟಿತ ದಾಳಿಯ ಫಲವಾಗಿ 4ನೇ ದಿನದಾಟದ ಅಂತ್ಯಕ್ಕೆ 102 ಓವರ್‌ಗಳಲ್ಲಿ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ಗಳಿಸಿ 241 ರನ್‌ಗಳ ಹಿನ್ನಡೆಯಲ್ಲಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 113.2 ಓವರ್‌ಗಳಲ್ಲಿ 324 ರನ್‌ಗಳಿಗೆ ಸರ್ವಪತನಕಂಡಿದೆ. ಭಾರತ ಭರ್ಜರಿ 188 ರನ್‌ಗಳ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ಗಿಲ್ ಚೊಚ್ಚಲ 100, ಪೂಜಾರ ವೇಗದ ಶತಕ – ಬಾಂಗ್ಲಾಗೆ ಬೃಹತ್ ಟಾರ್ಗೆಟ್

INDvsBAN 3 1

4ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ರನ್ ಬಾರಿಸಿತ್ತು, ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಅಜೇಯ 40 ರನ್ (69 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಮೆಹಿದಿ ಹಸನ್ ಮಿರಾಜ್ 9 ರನ್ ಸಿಡಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಬಾಂಗ್ಲಾ (Bangladesh) ಗೆಲುವಿಗೆ 241 ರನ್ ಬಾಕಿಯಿತ್ತು. ಇಂದು ಬಾಂಗ್ಲಾದೇಶ ಗೆಲುವಿನ ಭರವಸೆಯೊಂದಿಗೆ ಕ್ರೀಸ್‌ಗಿಳಿದಿತ್ತು. ಆದರೆ ಟೀಂ ಇಂಡಿಯಾ ಬೌಲರ್‌ಗಳ ಸ್ಪಿನ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ 113.2 ಓವರ್‌ಗಳಿಗೆ ಸರ್ವಪತನ ಕಂಡಿತು.

INDIA VS BANGALADESH 4

ಕೊನೆಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ 11.2 ಓವರ್‌ಗಳಲ್ಲಿ 52 ರನ್ ಗಳಿಸುವ ವೇಳೆಗೆ ಭಾರತ ಎದುರಾಳಿಗಳನ್ನು ಕಟ್ಟಿಹಾಕಿತು. 2ನೇ ಇನ್ನಿಂಗ್ಸ್‌ನಲ್ಲಿ ಜಾಕಿರ್ ಹಸನ್ 224 ಎಸೆತಗಳಲ್ಲಿ 100 ರನ್ (13 ಬೌಂಡರಿ, 1 ಸಿಕ್ಸರ್) ಸಿಡಿದರು. ನಾಯಕ ಶಕೀಬ್ ಅಲ್ ಹಸನ್ 108 ಎಸೆತಗಳಲ್ಲಿ ಸ್ಫೋಟಕ 84 ರನ್ (6 ಬೌಂಡರಿ, 6 ಸಿಕ್ಸರ್) ಚಚ್ಚಿ ಔಟಾದರು. ನಂತರದಲ್ಲಿ ಕ್ರೀಸ್‌ಗಿಳಿದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಬಾಂಗ್ಲಾದೇಶ ಸೋಲಿಗೆ ಶರಣಾಯಿತು. ಇದನ್ನೂ ಓದಿ: ಬಾಂಗ್ಲಾದ ಭಾರ ಹೊತ್ತ ಜಾಕಿರ್ – ಜಯದ ಹೊಸ್ತಿಲಲ್ಲಿ ಭಾರತ

INDIA VS BANGALADESH 2 1

ಕುಲ್‌ದೀಪ್, ಅಕ್ಷರ್ ಸ್ಪಿನ್ ಕಮಾಲ್:
ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ 40 ರನ್ ಗಳಿಸಿ, ಬೌಲಿಂಗ್‌ನಲ್ಲಿ 5 ವಿಕೆಟ್ ಕಬಳಿಸಿದ ಕುಲ್‌ದೀಪ್ 2ನೇ ಇನ್ನಿಂಗ್ಸ್ನಲ್ಲೂ 3 ವಿಕೆಟ್ ಕಬಳಿಸುವ ಮೂಲಕ ಕಮಾಲ್ ಮಾಡಿದರು. ಇನ್ನೂ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್‌ಗೆ ತೃಪ್ತಿ ಪಡೆಕೊಂಡಿದ್ದ ಅಕ್ಷರ್‌ಪಟೇಲ್ 2ನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದು ಮಿಂಚಿದರು.

INDIA VS BANGALADESH 1 1

ಬಾಂಗ್ಲಾ ವಿರುದ್ಧ 2ನೇ ಇನ್ನಿಂಗ್ಸ್‌ನಲ್ಲೂ ಭಾರತದ ಬ್ಯಾಟ್ಸ್‌ಮ್ಯಾನ್‌ ತಮ್ಮ ಉತ್ತಮ ಲಯ ಮುಂದುವರಿಸಿದ್ದರು. ಭಾರತ ಪರ ಶುಭಮನ್ ಗಿಲ್ 110 ರನ್ (152 ಎಸೆತ, 10 ಬೌಂಡರಿ, 3 ಸಿಕ್ಸ್) ಚಚ್ಚಿ ತಮ್ಮ ಚೊಚ್ಚಲ ಶತಕ ಪೂರೈಸಿದರು. ಇನ್ನೊಂದೆಡೆ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದ ಪೂಜಾರ 2ನೇ ಇನ್ನಿಂಗ್ಸ್‌ನಲ್ಲಿ 102 ರನ್ (130 ಎಸೆತ, 13 ಬೌಂಡರಿ) ಬಾರಿಸಿ ಶತಕ ಪೂರೈಸಿಕೊಂಡರು. ಇದು ಪೂಜಾರ ಅವರ ಟೆಸ್ಟ್ ವೃತ್ತಿ ಜೀವನದ ವೇಗದ ಹಾಗೂ 19ನೇ ಶತಕವಾಗಿದೆ. ಪೂಜಾರ ಶತಕ ಸಿಡಿಸುತ್ತಿದ್ದಂತೆ 61.4 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 258 ರನ್ ಬಾರಿಸಿದ್ದಾಗ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *