ಮತ್ತೆ ಮೋದಿ ಸರ್ಕಾರ; ಎನ್‌ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166

Public TV
2 Min Read
modi victory win bjp

– ಇಂಡಿಯಾ ಟುಡೆ-ಸಿವೋಟರ್‌ ‘ಮೂಡ್‌ ಆಫ್‌ ದಿ ನೇಷನ್‌’ ಸರ್ವೆ ಹೇಳೋದೇನು?

ನವದೆಹಲಿ: 2024ರ ಲೋಕಸಭಾ ಚುನಾವಣೆ (Lok Sabha Election 2024) ಹತ್ತಿರ ಬರುತ್ತಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಧಿಕಾರದ ಗದ್ದುಗೆಗೆ ಯಾರು ಏರುತ್ತಾರೆ ಎಂಬ ಕುತೂಹಲವು ಮೂಡಿದೆ. ಈಗಾಗಲೇ ಒಂದೊಂದಾಗಿ ಸಮೀಕ್ಷೆಗಳು ಹೊರಬೀಳುತ್ತಿವೆ. ‘ಮೂಡ್‌ ಆಫ್‌ ದಿ ನೇಷನ್‌’ (India Today Mood Of The Nation) ಸಮೀಕ್ಷೆ ಹೊರಬಿದ್ದಿದ್ದು, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ.

ಇಂಡಿಯಾ ಟುಡೆ ‘ಮೂಡ್‌ ಆಫ್‌ ದಿ ನೇಷನ್’ ಸರ್ವೆ
ಇಂಡಿಯಾ ಟುಡೇ-ಸಿವೋಟರ್‌ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಪ್ರಕಾರ, ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ನಿರ್ಣಾಯಕ ಬಹುಮತ ಪಡೆಯುವ ಸಾಧ್ಯತೆಯಿದೆ. ಎನ್‌ಡಿಎ ಒಕ್ಕೂಟ 335 ಸ್ಥಾನಗಳ ಭರ್ಜರಿ ಬಹುಮತದೊಂದಿಗೆ 3ನೇ ಬಾರಿಯೂ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನು ‘ಇಂಡಿಯಾ’ ಮೈತ್ರಿಕೂಟವು 166 ಸ್ಥಾನಗಳನ್ನು ಪಡೆಯಲಿದೆ. ಇದನ್ನೂ ಓದಿ: ಯುಪಿಎ 10 ವರ್ಷಗಳಲ್ಲಿ ಆರ್ಥಿಕತೆಯನ್ನು ನಿಷ್ಕ್ರಿಯಗೊಳಿಸಿತ್ತು: ಶ್ವೇತಪತ್ರ ಹೊರಡಿಸಿದ ಮೋದಿ ಸರ್ಕಾರ

INDIA

2024 ರ ಫೆಬ್ರವರಿಯಲ್ಲಿ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆಯು ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ 35,801 ಜನರ ಪ್ರತಿಕ್ರಿಯೆ ಆಧರಿಸಿದೆ. 2023ರ ಡಿಸೆಂಬರ್‌ 15 ಮತ್ತು, 2024 ರ ಜನವರಿ 28 ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆಯ ಪ್ರಕಾರ, ಎನ್‌ಡಿಎ ಉತ್ತರ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಪ್ರಾಬಲ್ಯ ಮೆರೆಯಲಿದೆ. ದಕ್ಷಿಣದ ರಾಜ್ಯಗಳು ‘ಇಂಡಿಯಾ’ ಮೈತ್ರಿಕೂಟಕ್ಕೆ ಆದ್ಯತೆ ನೀಡುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

narendra modi lotus

ಉತ್ತರ ಭಾರತ?
ಉತ್ತರ ಭಾರತ ಭಾಗದಲ್ಲಿ 180 ಕ್ಕೆ ಎನ್‌ಡಿಎ 154 ಸ್ಥಾನಗಳನ್ನು ಗಳಿಸಲಿದೆ. ಇಂಡಿಯಾ ಮೈತ್ರಿಕೂಟ 25 ಹಾಗೂ ಇತರೆ 1 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಬಾಯಿ ಬಿಟ್ಟರೆ ಬರೀ ಸುಳ್ಳು – ಸಚಿವ ಪ್ರಹ್ಲಾದ್‌ ಜೋಶಿ ಕಿಡಿ

ಪೂರ್ವ
ಪೂರ್ವ ಭಾಗದಲ್ಲಿ 153 ಕ್ಕೆ ಎನ್‌ಡಿಎ 103, ಇಂಡಿಯಾ ಒಕ್ಕೂಟ 38 ಹಾಗೂ ಇತರೆ 12 ಸ್ಥಾನಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿವೆ.

ಪಶ್ಚಿಮ
ಪಶ್ಚಿಮ ಭಾಗದಲ್ಲಿ 78 ಸ್ಥಾನಗಳ ಪೈಕಿ ಎನ್‌ಡಿಎ 51, ಇಂಡಿಯಾ ಒಕ್ಕೂಟ 27 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿವೆ ಎಂದು ಸಮೀಕ್ಷೆ ಹೇಳಿದೆ.

ದಕ್ಷಿಣ
ದಕ್ಷಿಣ ಭಾರತದಲ್ಲಿ 132 ಕ್ಕೆ ಎನ್‌ಡಿಎ 27, ಇಂಡಿಯಾ ಒಕ್ಕೂಟ 76 ಹಾಗೂ ಇತರೆ 29 ಸ್ಥಾನಗಳನ್ನು ಜಯಿಸಲಿವೆ ಎಂದು ಸಮೀಕ್ಷೆ ತಿಳಿಸಿದೆ.

Share This Article