ಮುಂಬೈ: ಟೀಂ ಇಂಡಿಯಾ (Team India) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (M.S Dhoni) ಇಂದು ಪತ್ರಿಕಾಗೋಷ್ಠಿ ಕರೆದು, ಭಾರತ ತಂಡ 2022ರ ವಿಶ್ವಕಪ್ ಗೆಲ್ಲಲು, ಇಂದು ಪತ್ರಿಕಾಗೋಷ್ಠಿ ಕರೆಯಲು ಲಿಂಕ್ ಇದೆ ಎಂದು ಲಾಜಿಕ್ ಆಗಿ ಮಾತನಾಡಿದ್ದಾರೆ.
ಇಂದು ಪತ್ರಿಕಾಗೋಷ್ಠಿ ಕರೆದಿದ್ದ ಧೋನಿ ನಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಆಗುತ್ತಿತ್ತು. ಧೋನಿ ಐಪಿಎಲ್‍ಗೂ (IPL) ಮುನ್ನ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಕರೆದಿರುವ ಪತ್ರಿಕಾಗೋಷ್ಠಿ ಎಂಬ ಅನುಮಾನ ಅಭಿಮಾನಿಗಳಲ್ಲಿತ್ತು. ಆದರೆ ಧೋನಿ ಮಾತ್ರ ಪತ್ರಿಕಾಗೋಷ್ಠಿಯಲ್ಲಿ ಲಾಜಿಕ್ ಆಗಿ ಮಾತನಾಡಿ ಭಾರತ ವಿಶ್ವಕಪ್ ಗೆಲ್ಲುವ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ: ಬ್ಯಾಟ್ಸ್‌ಮ್ಯಾನ್ ಜೊತೆ ಕಿರಿಕ್ – ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್‍ರನ್ನು ಹೊರನಡಿ ಎಂದ ರಹಾ
If India wins this world cup, MS again will steal credits: Gambhir????????#OreoAgain #MSDhoni @Oreo pic.twitter.com/I7BiUqGjk1
— john wick (@LCUFAN) September 25, 2022
ಧೋನಿ ಇಂದು ಪತ್ರಿಕಾಗೋಷ್ಠಿ ನಡೆಸಿ ಓರಿಯೊ (Oreo) ಬಿಸ್ಕತ್ (Biscuits) ಬಿಡುಗಡೆ ಮಾಡುತ್ತಿರುವ ಬಗ್ಗೆ ತಿಳಿಸಿ. ಈ ಹಿಂದೆ 2011ರಲ್ಲಿ ಓರಿಯೊ ಭಾರತದಲ್ಲಿ ಬಿಡುಗಡೆಗೊಂಡಿತ್ತು. ಆ ಬಳಿಕ ಅದೇ ವರ್ಷ ಭಾರತ ವಿಶ್ವಕಪ್ ಗೆದ್ದಿತ್ತು. ಇದೀಗ ಮತ್ತೆ ಓರಿಯೊ ಕುಕ್ಕಿಸ್ ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬಾರಿ ಮತ್ತೊಮ್ಮೆ ಭಾರತ ವಿಶ್ವಕಪ್ ಗೆಲ್ಲಲಿದೆ ಎಂದರು. ಅಲ್ಲದೇ 2011ರಲ್ಲಿ ನಾನು ಈ ರೀತಿ ಹೇರ್‌ಸ್ಟೈಲ್ ಮಾಡಿದ್ದೆ ಈ ಬಾರಿಯೂ ಅದೇ ಹೇರ್‌ಸ್ಟೈಲ್‌ನಲ್ಲಿ ಬಂದಿದ್ದೇನೆ. ಇದು ವಿಶೇಷ ಎಂದರು. ಇದನ್ನೂ ಓದಿ: ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ
ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿರುವ ಧೋನಿ ಐಪಿಎಲ್‍ನಲ್ಲಿ ಮಾತ್ರ ಆಡುತ್ತಿದ್ದಾರೆ. ಈಬಾರಿಯ ಐಪಿಎಲ್ ಧೋನಿಯ ಕೊನೆಯ ಐಪಿಎಲ್ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಧೋನಿ ಈ ಬಗ್ಗೆ ಏನು ಹೇಳಿಲ್ಲ. ಇಂದಿನ ಪತ್ರಿಕಾಗೋಷ್ಠಿಗೂ ಮುನ್ನ ಧೋನಿ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಭಯ ಅಭಿಮಾನಿಗಳಲ್ಲಿತ್ತು. ಆದರೆ ಧೋನಿ ಲಾಜಿಕ್ ಮಾತುಗಳ ಮೂಲಕ ವಿಶ್ವಕಪ್ ಗೆಲ್ಲುವ ಭಾರತದ ಕನಸಿಗೆ ಜೀವ ತುಂಬಿದ್ದಾರೆ.