Ind vs Eng Test | 2025ರ ಭಾರತ – ಇಂಗ್ಲೆಂಡ್ ವೇಳಾಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

Public TV
1 Min Read
india vs england 3rd test

ಮುಂಬೈ: ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತೀಯ ಪುರುಷರ ಕ್ರಿಕೆಟ್ ತಂಡವು (Team India) 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಮುಂದಿನ ವರ್ಷ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಸರಣಿಯ ಮೊದಲ ಪಂದ್ಯ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿ ಅಂಗಳದಲ್ಲಿ ಆಂಭವಾಗಲಿದೆ.

2023-25ನೇ ಸಾಲಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್‌ (WTC) ಫೈನಲ್​ ಪಂದ್ಯವು ಮುಂದಿನ ಜೂನ್​ನಲ್ಲಿ ನಡೆಯಲಿದ್ದು, ಬಳಿಕ ಭಾರತ-ಇಂಗ್ಲೆಂಡ್‌ ಸರಣಿ (Ind vs Eng Test series) ಆರಂಭವಾಗಲಿದೆ. ಉಣಯ ತಂಡಗಳಿಗೂ ಇದು 4ನೇ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿನ್​ಶಿಪ್​ ಋತುವಿನ (2025-27) ಮೊದಲ ಸರಣಿಯಾಗಲಿದೆ.

5 ಪಂದ್ಯಗಳ ಟೆಸ್ಟ್​ ಸರಣಿಗೆ ಲೀಡ್ಸ್‌, ಬರ್ಮಿಂಗ್ಹ್ಯಾಮ್‌, ಲಾರ್ಡ್ಸ್, ಮ್ಯಾಂಚೆಸ್ಟರ್ ಮತ್ತು ಓವಲ್ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ತನ್ನ ಅಧಿಕೃತ ಎಕ್ಸ್​ನಲ್ಲಿ ಪ್ರಕಟಿಸಿದೆ. ಬರೋಬ್ಬರಿ 1 ತಿಂಗಳ ಕಾಲ ಈ ಸರಣಿ ನಡೆಯಲಿದೆ.

Ind vs eng

2007 ರಲ್ಲಿ ಪಟೌಡಿ ಟ್ರೋಫಿಯಲ್ಲಿ ಮೈಕೆಲ್ ವಾನ್ ನೇತೃತ್ವದ ತಂಡವನ್ನು ಭಾರತ ಸೋಲಿಸಿದ ಬಳಿಕ ಇಂಗ್ಲೆಂಡ್‌ನಲ್ಲಿ ಇದುವರೆಗೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆ ಪ್ರವಾಸದ ಸಮಯದಲ್ಲಿ, ರಾಹುಲ್ ದ್ರಾವಿಡ್ ನೇತೃತ್ವದ ಭಾರತವು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಸರಣಿ ಗೆದ್ದುಕೊಂಡಿತ್ತು. ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿತ್ತು. 2 ಪಂದ್ಯಗಳು ಡ್ರಾ ಆಗಿದ್ದವು.

Ind vs Eng 2

ಇನ್ನೂ ಪ್ರಸಕ್ತ ವರ್ಷದಲ್ಲಿ ತವರಿನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯನ್ನು ಭಾರತ 4-1 ಅಂತರದಲ್ಲಿ ಗೆದ್ದುಕೊಂಡಿತ್ತು.

Share This Article