Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಏ.1 ರಿಂದ ಇ20 ಮಿಶ್ರಿತ RON 95 ಇರೋ ಪೆಟ್ರೋಲ್‌ ಮಾರಾಟ ಕಡ್ಡಾಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Automobile | ಏ.1 ರಿಂದ ಇ20 ಮಿಶ್ರಿತ RON 95 ಇರೋ ಪೆಟ್ರೋಲ್‌ ಮಾರಾಟ ಕಡ್ಡಾಯ

Automobile

ಏ.1 ರಿಂದ ಇ20 ಮಿಶ್ರಿತ RON 95 ಇರೋ ಪೆಟ್ರೋಲ್‌ ಮಾರಾಟ ಕಡ್ಡಾಯ

Public TV
Last updated: February 26, 2026 2:45 pm
Public TV
Share
3 Min Read
PETROL 1
SHARE

ನವದೆಹಲಿ: ಏಪ್ರಿಲ್‌ 1 ರಿಂದ ದೇಶದಲ್ಲಿರುವ ಎಲ್ಲಾ ಪೆಟ್ರೋಲ್‌ ಬಂಕ್‌ಗಳು (Petrol Bunk) ಕಡ್ಡಾಯವಾಗಿ 20% ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ (Ethanol Blended Petrol) ಮಾರಾಟ ಮಾಡಬೇಕೆಂದು ಕೇಂದ್ರ ಸರ್ಕಾರ ಆದೇಶ ಪ್ರಕಟಿಸಿದೆ.

ಫೆಬ್ರವರಿ 17 ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ವಿಶೇಷಣಗಳ ಪ್ರಕಾರ ಮತ್ತು ರಿಸರ್ಚ್‌ ಆಕ್ಟೇನ್ ನಂಬರ್‌ (RON) 95 ಅನ್ನು ಹೊಂದಿರುವ 20% ಎಥೆನಾಲ್ ಮಿಶ್ರಿತ ಪೆಟ್ರೋಲ್‌ ಮಾರಾಟ ಮಾಡಬೇಕೆಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

RON ಎಥೆನಾಲ್ ಮಿಶ್ರಿತ ಇಂಧನಗಳಲ್ಲಿ ಎಂಜಿನ್ ಕಾರ್ಯಕ್ಷಮತೆಯನ್ನು ಅಳೆಯುವ ಪ್ರಮುಖ ಮಾನದಂಡವಾಗಿದೆ. ಎಥೆನಾಲ್ ನೈಸರ್ಗಿಕವಾಗಿ ಸುಮಾರು 108 RON ಗಿಂತಲೂ ಹೆಚ್ಚಿನ ಆಕ್ಟೇನ್ ರೇಟಿಂಗ್ ಹೊಂದಿದೆ. ಈ ಎಥೆನಾಲ್‌ನ್ನು ಪೆಟ್ರೋಲ್‌ಗೆ ಮಿಶ್ರಣ ಮಾಡಿದರೆ ಭವಿಷ್ಯದಲ್ಲಿ ಎಂಜಿನ್‌ಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ RON 95 ಹೊಂದಿರುವ 20% ಎಥೆನಾಲ್ ಮಿಶ್ರಿತ ಪೆಟ್ರೋಲ್‌ ಮಾರಾಟಕ್ಕೆ ಅನುಮತಿ ನೀಡಿದೆ.

RON 95 ಪೆಟ್ರೋಲ್ ಅನ್ನು ಸಾಮಾನ್ಯವಾಗಿ ಆಧುನಿಕ ಉನ್ನತ-ಕಾರ್ಯಕ್ಷಮತೆಯ ಎಂಜಿನ್‌ಗಳಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚು ಸ್ವಚ್ಛವಾಗಿ ಉರಿಯುತ್ತವೆ, ಇಂಗಾಲದ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಹೊರಸೂಸುವಿಕೆಯನ್ನು 30-44% ವರೆಗೆ ಕಡಿಮೆ ಮಾಡುತ್ತದೆ.

2003ಕ್ಕೆ ಮೊದಲು ಭಾರತದಲ್ಲಿ ಕಚ್ಚಾ ತೈಲದಿಂದ ಸಂಸ್ಕರಣೆಗೊಂಡ ಪೆಟ್ರೋಲ್‌ ಬಂಕ್‌ಗಳಿಗೆ ಬರುತ್ತಿದ್ದವು. ಆದರೆ ಈಗ ಪೆಟ್ರೋಲ್‌ ಜೊತೆ ಎಥೆನಾಲ್‌ ಮಿಶ್ರಣವಾಗಿರುವ ಇಂಧನ ಬರುತ್ತಿದೆ. 20% ಎಥೆನಾಲ್‌ ಮತ್ತು 80% ಬಾಕಿ ಪೆಟ್ರೋಲ್‌ ಮಿಶ್ರಿತ ತೈಲವನ್ನು ಇ20 ತೈಲ ಎನ್ನುತ್ತಾರೆ. ಕಬ್ಬು, ಜೋಳ ಅಥವಾ ಹೆಚ್ಚುವರಿ ಧಾನ್ಯದಿಂದ ತಯಾರಿಸಲಾದ ಜೈವಿಕ ಇಂಧನವನ್ನು ಎಥೆನಾಲ್‌ ಎಂದು ಕರೆಯಲಾಗುತ್ತದೆ.

 

2003 ರಲ್ಲಿ ಭಾರತದಲ್ಲಿ ಇ5 ಇಂಧನ ಸಿಗತೊಡಗಿತು. 2022 ರಲ್ಲಿ ದೇಶದಲ್ಲಿ ಸಂಪೂರ್ಣ ಇ-10 ಪೆಟ್ರೋಲ್‌ ಬಳಕೆಯ ಗುರಿ ತಲುಪಿತು. ಇ-20 ಪೆಟ್ರೋಲ್‌ ಬಳಕೆಯ ಗುರಿ ತಲುಪಲು 2025-26 ನಿಗದಿ ಪಡಿಸಲಾಗಿತ್ತು. 2023 ರಲ್ಲಿ ಕೆಲ ನಗರಗಳಲ್ಲಿ ಪ್ರಾಯೋಗಿಕವಾಗಿ ಇ20 ಇಂಧನ ಮಾರಾಟ ಮಾಡಲಾಗುತ್ತಿತ್ತು. 2025 ರಿಂದ ದೇಶಾದ್ಯಂತ ಇ20 ಇಂಧನ ಮಾರಾಟ ಮಾಡಲಾಗುತ್ತಿದೆ. 2009 ರಿಂದಲೂ ಅನೇಕ ವಾಹನಗಳು ಇ20 ಇಂಧನಕ್ಕೆ ಹೊಂದಾಣಿಕೆಯಾಗುತ್ತಿವೆ.  ಇದನ್ನೂ ಓದಿ: ಯುಪಿ ಸರ್ಕಾರದ ಜೊತೆ ಸಹಿ – 2027ಕ್ಕೆ ಭಾರತದಲ್ಲಿ MotoGP ರೇಸ್‌?

ಮೊದಲು ಬಳಕೆಯಾಗಿದ್ದು ಎಲ್ಲಿ?

ಎಥೆನಾಲ್‌ ಬಳಕೆ ಶುರುವಾಗಿದ್ದು 90ರ ದಶಕದಲ್ಲಿ. ಅಮೆರಿಕ ತೈಲದಲ್ಲಿ ಎಥೆನಾಲ್‌ ಬಳಕೆಯನ್ನು ಮೊದಲು ಪರಿಚಯಿಸಿತು. ಆರಂಭದಲ್ಲಿ ಅಷ್ಟೊಂದು ಯಶಸ್ಸು ಸಿಗದಿದ್ದರೂ ಎಥೆನಾಲ್‌ ಬಳಕೆಯ ಪ್ರಯೋಜನ ಅರಿಯಲು ಸಹಾಯಕವಾಯಿತು. ಸದ್ಯ ಅಮೆರಿಕ ಶೇ.10ರಷ್ಟು ಎಥೆನಾಲ್‌ ಬಳಸುತ್ತಿದೆ. ಬ್ರೆಜಿಲ್‌ನಲ್ಲಿ ಇ-27, ಫ್ರಾನ್ಸ್‌ ಇ-10, ಜರ್ಮನಿ ಇ-5 ಪೆಟ್ರೋಲ್‌ ಬಳಸಲಾಗುತ್ತಿದೆ. ಅದರಲ್ಲೂ ಯುರೋಪಿನ ಸ್ವೀಡನ್‌ ಇ 85 ಇಂಧನ ಬಳಕೆ ಮಾಡುತ್ತಿದೆ.

ಈಗ ಭಾರತಲ್ಲಿ ಇ20 ಪೆಟ್ರೋಲ್‌ ಸಿಗುತ್ತಿದೆ. ಆದರೆ ಮುಂದಿನ ಕೆಲ ವರ್ಷಗಳಲ್ಲಿ ಇ-27 ಪೆಟ್ರೋಲ್‌ ಸಿಗುವ ಸಾಧ್ಯತೆಯಿದೆ. ಅಂದರೆ 27% ಎಥೆನಾಲ್‌  77% ಪೆಟ್ರೋಲ್‌ ಮಿಶ್ರಣ ಇರುವ ಇಂಧನ ಪೆಟ್ರೋಲ್‌ ಬಂಕ್‌ಗಳಲ್ಲಿ ಸಿಗಲಿದೆ. ಯಾವಾಗ ಇದು ಜಾರಿಯಾಗಲಿದೆ ಎನ್ನುವುದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿಲ್ಲ.

ಭಾರತಕ್ಕೆ ಏನು ಲಾಭ?
ವಾಹನಗಳ ಸಂಚಾರದಿಂದ ವಾಯುಮಾಲಿನ್ಯ ಆಗುತ್ತೆ. ಈ ಕಾರಣಕ್ಕೆ ದೆಹಲಿಯಲ್ಲಿ ಹಿಂದೆ ಸಮ ಮತ್ತು ಬೇಸ ಸಂಖ್ಯೆಗಳು ನೀತಿ ಜಾರಿಗೆ ಬಂದಿತ್ತು. ಆದರೆ ಎಥೆನಾಲ್‌ ಆಧಾರಿತ ಪೆಟ್ರೋಲ್‌ ಬಳಕೆ ಮಾಡಿದರೆ ಹೊರಸೂಸುವ ಇಂಗಾಲದ ಪ್ರಮಾಣ  ಕಡಿಮೆಗೊಳಿ­ಸುತ್ತದೆ. ಕಬ್ಬು ಆಧಾರಿತ ಎಥೆನಾಲ್‌ನಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯು ಪೆಟ್ರೋಲ್‌ಗಿಂತ 65% ರಷ್ಟು ಕಡಿಮೆ ಮತ್ತು ಮೆಕ್ಕೆಜೋಳ ಆಧಾರಿತ ಎಥೆನಾಲ್‌ನಿಂದ 50% ರಷ್ಟು ಕಡಿಮೆಯಾಗಿದೆ ಎಂದು ನೀತಿ ಆಯೋಗದ ಅಧ್ಯಯನ ಹೇಳಿದೆ.

ಭಾರತಕ್ಕೆ ವಾರ್ಷಿಕ 1,700 ಕೋಟಿ ಲೀಟರ್‌ ಎಥೆನಾಲ್‌ ಬೇಕು. 2013 ರಲ್ಲಿ 421 ಕೋಟಿ ಎಥೆನಾಲ್‌ ಉತ್ಪಾದನೆಯಾಗುತ್ತಿದ್ದರೆ ಈಗ 1810 ಕೋಟಿ ಲೀಟರ್‌ ಉತ್ಪಾದನೆಯಾಗುತ್ತಿದೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡಿದ್ದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ 1.44 ಲಕ್ಷ ಕೋಟಿಗೂ ರೂ. ಹೆಚ್ಚು ವಿದೇಶಿ ವಿನಿಮಯ ಉಳಿತಾಯವಾಗಿದೆ.

TAGGED:Ethanolindiapetrolಎಥೆನಾಲ್ಪೆಟ್ರೋಲ್ಭಾರತ
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Yelahanka Suicide
Bengaluru City

ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ

Public TV
By Public TV
17 seconds ago
PUC
Bellary

2nd PUC Result | ದಕ್ಷಿಣ ಕನ್ನಡದ ದಿಶಾ ರಾಜ್ಯಕ್ಕೆ ಪ್ರಥಮ – 600ಕ್ಕೆ 600 ಅಂಕ

Public TV
By Public TV
6 minutes ago
Hezbollah new chief Sheikh Naim Qassem
Latest

ಇಸ್ರೇಲ್ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥನ ಸಹಾಯಕ ಮಟಾಶ್

Public TV
By Public TV
1 hour ago
pm modi
Latest

ಬಂಗಾಳದ ಜನತೆಗೆ ಪ್ರಧಾನಿ ಮೋದಿ 6 ಗ್ಯಾರಂಟಿ ಘೋಷಣೆ

Public TV
By Public TV
2 hours ago
David Miller
Latest

ಸಿಕ್ಸ್‌ ಬದಲು ಬೌಂಡರಿ ನೀಡಿದ್ದರಿಂದ ಡೆಲ್ಲಿಗೆ ಸೋಲು – ಏನಿದು ವಿವಾದ?

Public TV
By Public TV
2 hours ago
R.Ashwin David Miller
Cricket

ನಿಮ್ಮ ನಿರ್ಧಾರ ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ: ಮಿಲ್ಲರ್‌ ವಿರುದ್ಧ ಆರ್‌.ಅಶ್ವಿನ್‌ ಬೇಸರ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?