ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ಶ್ರೀಲಂಕಾಗೆ (Srilanka) 2023ನೇ ಸಾಲಿನ ಶಾಲಾ (School) ಮಕ್ಕಳಿಗೆ ಪಠ್ಯಪುಸ್ತಕಗಳ ಮುದ್ರಣಕ್ಕೆ ಅಗತ್ಯ ನೆರವು ನೀಡಲು ಭಾರತ ಮುಂದಾಗಿದ್ದು, 4 ವರ್ಷಗಳಲ್ಲಿ 2.9 ಶತಕೋಟಿ ಡಾಲರ್ ನೆರವು ನೀಡಲಿದೆ.
ಭಾರತೀಯ ಸಾಲ ಯೋಜನೆ ಅಡಿಯಲ್ಲಿ ಪಠ್ಯಪುಸ್ತಕ (Text Book) ಮುದ್ರಣಕ್ಕೆ ಅಗತ್ಯವಿರುವ ಕಾಗದ, ಶಾಯಿ ಸೇರಿದಂತೆ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುಸಿಲ್ ಪ್ರೇಮೇಜನಾಥ ತಿಳಿಸಿದ್ದಾರೆ. ಇದನ್ನೂ ಓದಿ: ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ
ಡಾಲರ್ ಕೊರತೆ ಇರುವುದರಿಂದ ಪಠ್ಯಪುಸ್ತಕಗಳ ಮುದ್ರಣಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾದ ಕಚ್ಚಾವಸ್ತುಗಳ ಖರೀದಿಗೂ ಶ್ರೀಲಂಕಾ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದ ಮಾರ್ಚ್ನಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸಲು ಕಾಗದದ ಕೊರತೆ ಉಂಟಾಗಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಪರೀಕ್ಷೆ ರದ್ದುಪಡಿಸಲಾಗಿತ್ತು.
ಉಚಿತ ಶಿಕ್ಷಣ ಯೋಜನೆಯಡಿ ಶ್ರೀಲಂಕಾವು ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಒದಗಿಸುತ್ತದೆ. 2023ರ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕ ಮುದ್ರಣಕ್ಕೆ ಸುಮಾರು 44 ಮಿಲಿಯನ್ ಡಾಲರ್ ಖರ್ಚಾಗಲಿದೆ ಎಂದು ಅಂದಾಜಿಸಿದೆ. ಇದನ್ನೂ ಓದಿ: 6 ತಿಂಗಳು ರಜೆ ಹಾಕಿ- ಡೀನ್ ವಿರುದ್ಧ ಸಚಿವ ಸೋಮಣ್ಣ ಗರಂ
ಹಾಗಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(IMF) ಆರ್ಥಿಕ ಬಿಕ್ಕಟ್ಟಿನಿಂದ ಲಂಕಾವನ್ನು ರಕ್ಷಿಸಲು ವಿವಿಧ ಷರತ್ತುಗಳೊಂದಿಗೆ 4 ವರ್ಷಗಳಲ್ಲಿ 2.9 ಶತಕೋಟಿ ಡಾಲರ್ ನೆರವು ನೀಡಲಿದೆ. ಇದರಿಂದ 2022ರಲ್ಲಿ ಭಾರತ ದೇಶವೊಂದರಿಂದಲೇ ಲಂಕಾಕ್ಕೆ 4 ಶತಕೋಟಿ ಡಾಲರ್ ನೆರವು ಒದಗಿಸಿದಂತಾಗುತ್ತದೆ.