ನವದೆಹಲಿ: ಭಾರತವು ರಷ್ಯಾದಿಂದ ಅಗ್ಗದ ಬೆಲೆಗೆ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಲಿದೆ. ಆದರೆ, ರಿಯಾಯಿತಿಯ ನಿಯಮಗಳನ್ನು ಅಂತಿಮಗೊಳಿಸಿಲ್ಲ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಷ್ಯಾಕ್ಕೆ ವಿಶ್ವದ 3ನೇ ತೈಲ ಆಮದುದಾರನಾಗಿರುವ ಭಾರತ ತೈಲ ಖರೀದಿಯನ್ನು ಮುಂದುವರಿಸಿದೆ. ಕಚ್ಚಾ ತೈಲ ಖರೀದಿಯ ಸರಾಸರಿ ಬೆಲೆ ಒಂದು ಬ್ಯಾರೆಲ್‌ಗೆ 100 ಡಾಲರ್‌ಗಿಂತಲೂ (7,756 ರೂ.) ಹೆಚ್ಚಿದೆ ಎಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ದಾವೋಸ್‌ನಲ್ಲೂ ಆಪರೇಷನ್ ಕಮಲದ ಸದ್ದು- ಸಿಎಂಗೆ ನೀವು ಸ್ಟೇಬಲ್ ಇದ್ದೀರಾ ಎಂದ ಮಿತ್ತಲ್
Advertisement
Advertisement
ಉಕ್ರೇನ್ ಮೇಲಿನ ಯುದ್ಧದಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಕಚ್ಚಾತೈಲ ಖರೀದಿಯ ಮೇಲೆ ನಿರ್ಬಂಧ ಹೇರಿವೆ. ಕೆಲ ಅಂತಾರಾಷ್ಟ್ರೀಯ ವ್ಯಾಪಾರಿಗಳು ಪಾವತಿ ವ್ಯವಸ್ಥೆ ಮತ್ತು ಸಾಗಣೆ ಹಾಗೂ ಬ್ಯಾರಲ್‌ಗಳ ಖರೀದಿಯನ್ನು ಅಡ್ಡಿಪಡಿಸುತ್ತಿದ್ದಾರೆ. ಈ ನಡುವೆಯೂ ವಹಿವಾಟು ಸುಗಮಗೊಳಿಸಲು ರೂಪಾಯಿ – ರುಬೆಲ್ ವ್ಯಾಪಾರ ಕಾರ್ಯವಿಧಾನವನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಆದರೆ ಈ ಬಗ್ಗೆ ಇನ್ನು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಸರಕುಗಳಿಗೆ ಪಾವತಿಸಲು ಸಾಧ್ಯವಿರುವ ಎಲ್ಲಾ ಮಾರ್ಗಗಳ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶೂಟೌಟ್‍ಗೂ ಮೊದಲೇ ಇನ್‍ಸ್ಟಾಗ್ರಾಮ್‍ನಲ್ಲಿ ಗನ್‍ಗಳ ಚಿತ್ರ ಪೋಸ್ಟ್ ಮಾಡಿದ್ದ ಆರೋಪಿ
Advertisement
Advertisement
ಇದರೊಂದಿಗೆ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯಿಂದಾಗಿ ಭಾರತವು ಕಲ್ಲಿದ್ದಲಿನ ಮೇಲೆ ಅವಲಂಬನೆಯನ್ನು ಹೆಚ್ಚಿಸುತ್ತಿದೆ. ಮುಂಬರುವ ತಿಂಗಳಲ್ಲಿ ಸರ್ಕಾರಿ ಕೋಲ್ ಇಂಡಿಯಾ ಹೆಚ್ಚು ಕಲ್ಲಿದ್ದಲು ಉತ್ಪಾದಿಸುತ್ತದೆ ಎಂದು ಅವರು ತಿಳಿಸಿದ್ದಾರೆ.