ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ಸವಾರಿ ಮಾಡಿದ ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
Advertisement
ಮೂರನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 266 ರನ್‍ಗಳ ಟಾರ್ಗೆಟ್‍ನ್ನು ಬೆನ್ನಟ್ಟಿದ ವಿಂಡೀಸ್‍ಗೆ ಭಾರತ ಬೌಲರ್‌ಗಳು ಕಿಂಚಿತ್ತು ಅವಕಾಶ ನೀಡದೆ 37.1 ಓವರ್‌ಗಳಲ್ಲಿ 169 ರನ್‌ಗೆ ಆಲೌಟ್ ಮಾಡಿ 96 ರನ್‍ಗಳಿಂದ ಗೆದ್ದು ಬೀಗಿದೆ. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಬೆಂಗಳೂರು ಸಜ್ಜು – ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು
Advertisement
Advertisement
ಭಾರತದ ಬೆಂಕಿ ಬೌಲಿಂಗ್:
ಟೀಂ ಇಂಡಿಯಾ ನೀಡಿದ 266 ರನ್‍ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತ್ತು. ಭಾರತದ ನಾಲ್ವರು ಬೌಲರ್‌ಗಳು ಕೂಡಿಕೊಂಡು ವಿಕೆಟ್ ಬೇಟೆ ಆರಂಭಿಸಿದರು. ವಿಂಡೀಸ್ ಪರ ನಾಯಕ ನಿಕೋಲಸ್ ಪೂರನ್ 34 ರನ್ (39 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿದನ್ನು ಹೊರತು ಪಡಿಸಿ ಓಡೇನ್ ಸ್ಮಿತ್ ಕೆಳಕ್ರಮಾಂಕದಲ್ಲಿ 36 ರನ್ (18 ಎಸೆತ, 3 ಬೌಂಡರಿ, 3 ಸಿಕ್ಸ್) ಮತ್ತು ಜೋಸೆಫ್ 29 ರನ್ (55 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿದನ್ನು ಹೊರತುಪಡಿಸಿ ಇನ್ನುಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಭಾರತದ ಬೌಲರ್‌ಗಳ ದಾಳಿಗೆ ಬ್ಯಾಟ್‌ಬೀಸಲಾಗದೆ ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ 37.1 ಓವರ್‌ಗಳಲ್ಲಿ 169 ರನ್‌ಗಳಿಗೆ ಅಲೌಟ್ ಆಯಿತು.
Advertisement
ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ 3 ವಿಕೆಟ್ ಪಡೆದು ಮಿಂಚಿದರು. ದೀಪಕ್ ಚಹರ್ ಮತ್ತು ಕುಲ್‍ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಇದನ್ನೂ ಓದಿ: ತವರಿನಲ್ಲಿ ಕೊಹ್ಲಿ ಹೊಸ ಮೈಲಿಗಲ್ಲು – ಧೋನಿ, ಸಚಿನ್ ಜೊತೆ Elite ಪಟ್ಟಿಗೆ ಸೇರ್ಪಡೆ
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ರೋಹಿತ್ ಶರ್ಮಾ 13 ರನ್ (15 ಎಸೆತ, 3 ಬೌಂಡರಿ) ಮತ್ತು ಶಿಖರ್ ಧವನ್ 10 ರನ್ (26 ಎಸೆತ, 1 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಬಂದ ವಿರಾಟ್ ಕೊಹ್ಲಿ ಡಕ್ ಔಟ್ ಆಗಿ ಮತ್ತೊಮ್ಮೆ ಸರಣಿಯಲ್ಲಿ ನಿರಾಸೆ ಮೂಡಿಸಿದರು.
ಅಯ್ಯರ್, ಪಂತ್ ಆರ್ಭಟ:
42 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾಗೆ ರಿಷಭ್ ಪಂತ್ 56 ರನ್ (54 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಶ್ರೇಯಸ್ ಅಯ್ಯರ್ 80 ರನ್ (111 ಎಸೆತ, 9 ಬೌಂಡರಿ) ಬಾರಿಸಿ ಮಿಂಚಿದರು. ಅಲ್ಲದೇ 4 ವಿಕೆಟ್‍ಗೆ 110 ರನ್ (124 ಎಸೆತ) ಜೊತೆಯಾಟವಾಡಿ ಟೀಂ ಇಂಡಿಯಾಗೆ ನೆರವಾದರು. ಇದನ್ನೂ ಓದಿ: ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ
ಟೀಂ ಇಂಡಿಯಾಗೆ ಬ್ರೇಕ್ ಹಾಕಿದ ಹೋಲ್ಡರ್:
ನಂತರ ಸ್ಲಾಗ್ ಓವರ್‌ಗಳಲ್ಲಿ ವಾಷಿಂಗ್ಟನ್ ಸುಂದರ್ 33 ರನ್ (34 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ದೀಪಕ್ ಚಹರ್ 38 ರನ್ (38 ಎಸೆತ, 2 ಸಿಕ್ಸ್) ಸಿಡಿಸಿ ರನ್ 250ರ ಗಡಿದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಟೀಂ ಇಂಡಿಯಾ 50 ಓವರ್‌ಗಳಲ್ಲಿ 265 ರನ್‍ಗಳಿಗೆ ಆಲೌಟ್ ಆಯಿತು. ವಿಂಡೀಸ್ ಪರ ಜೇಸನ್ ಹೋಲ್ಡರ್ 4 ವಿಕೆಟ್ ಕಿತ್ತು ಮಿಂಚಿದರು.