ದುಬೈ: ಬಲಿಷ್ಠ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಭಾರತ (Team India) ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ಪ್ರವೇಶಿಸಿದೆ. ಈ ಮೂಲಕ 2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಸೋಲಿಗೆ ಸೇಡು ತೀರಿಸಿತು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 264 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 48.1 ಓವರ್‌ಗಳಲ್ಲಿ 267 ರನ್ ಹೊಡೆಯುವ ಮೂಲಕ ಫೈನಲ್ ಪ್ರವೇಶಿಸಿತು. ತಾಳ್ಮೆಯ ಆಟವಾಡಿ ಭಾರತ ಫೈನಲ್ ಪ್ರವೇಶಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ವಿರಾಟ್ ಕೊಹ್ಲಿಗೆ ಅರ್ಹವಾಗಿಯೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಇದನ್ನೂ ಓದಿ: ಸಚಿನ್ ದಾಖಲೆ ಬ್ರೇಕ್ – ವಿಶ್ವದಾಖಲೆ ಬರೆದ ಕೊಹ್ಲಿ
Advertisement
KL RAHUL FINISHES OFF IN STYLE!!!!! 🇮🇳
What a moment, what a win as #TeamIndia qualify for the #ChampionsTrophy final for the 5th time! 👏#ChampionsTrophyOnJioStar FINAL 👉 SUN, 9th March, 1:30 PM on Star Sports 1, Star Sports 1 Hindi, Star Sports 2 & Sports18-1!
📺📱 Start… pic.twitter.com/ymcT8TwJdA
— Star Sports (@StarSportsIndia) March 4, 2025
Advertisement
ವಿರಾಟ್ ಕೊಹ್ಲಿ 84 ರನ್ (98 ಎಸೆತ, 5 ಬೌಂಡರಿ), ಶ್ರೇಯಸ್ ಅಯ್ಯರ್ 45 ರನ್(62 ಎಸೆತ, 3 ಬೌಂಡರಿ), ಕೆಎಲ್ ರಾಹುಲ್ ಔಟಾಗದೇ 42 ರನ್ (34 ಎಸೆತ, 2 ಬೌಂಡರಿ, 2 ಸಿಕ್ಸ್), ಹಾರ್ದಿಕ್ ಪಾಂಡ್ಯ 28 ರನ್ (24 ಎಸೆತ, 1 ಬೌಂಡರಿ, 3 ಸಿಕ್ಸ್) ಹೊಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಫೈನಲಿಗೆ ಭಾರತ – ದಾಖಲೆ ಬರೆದ ರೋಹಿತ್ ಶರ್ಮಾ
Advertisement
Virat Kohli steadied the India chase in a crucial stand with Shreyas Iyer 👌
Watch live now in India on @StarSportsIndia
Head here for broadcast details in other territories ➡️ https://t.co/S0poKnxpTX pic.twitter.com/4kbuMuoO80
— ICC (@ICC) March 4, 2025
ಎರಡನೇ ಸೆಮಿಫೈನಲ್ ಪಂದ್ಯ ಮಂಗಳವಾರ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ನಡೆಯಲಿದೆ. ಈ ಪಂದ್ಯದಲ್ಲಿ ವಿಜೇತರಾದವರು ಭಾನುವಾರ ದುಬೈ ಮೈದಾನದಲ್ಲಿ ಭಾರತವನ್ನು ಎದುರಿಸಲಿದ್ದಾರೆ.
Advertisement
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರವಾಗಿ ನಾಯ ಸ್ವೀವ್ ಸ್ಮಿತ್ 73 ರನ್( 4 ಬೌಂಡರಿ, 1 ಸಿಕ್ಸ್), ಅಲೆಕ್ಸ್ ಕ್ಯಾರಿ 61 ರನ್( 57ಎಸೆತ, 8 ಬೌಂಡರಿ, 1 ಸಿಕ್ಸ್) ಹೊಡೆದರು.
ಮೊಹಮ್ಮದ್ ಶಮಿ 3 ವಿಕೆಟ್, ವರುಣ್ ಚಕ್ರವರ್ತಿ ಮತ್ತು ಜಡೇಜಾ ತಲಾ 2 ವಿಕೆಟ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
Travis Head unleashes havoc with the willow before Varun Chakaravarthy strikes back for India ⚡
Watch live now in India on @StarSportsIndia
Head here for broadcast details in other territories ➡️https://t.co/S0poKnxpTX pic.twitter.com/Dg1tEMxpew
— ICC (@ICC) March 4, 2025