ಭುವನೇಶ್ವರ: ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ತಂತ್ರಗಾರಿಕಾ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಶನಿವಾರ ಯಶಸ್ವಿಯಾಗಿ ನಡೆಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ.
Advertisement
ಒಡಿಶಾದ ಕರಾವಳಿ ಭಾಗದ ಬಾಲಸೂರ್ ಕೇಂದ್ರದಿಂದ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಇದು ಸುಮಾರು 1,000 ದಿಂದ 2,000 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಹಳ್ಳಿಗೆ 300 ಕೋವಿಡ್ ಲಸಿಕೆಗಳನ್ನು ಸಾಗಿಸಿದ ಡ್ರೋನ್
Advertisement
ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ತಂತ್ರಗಾರಿಕಾ ಕ್ಷಪಣಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪರೀಕ್ಷೆಯಲ್ಲಿ ಉದ್ದೇಶಿತ ಕಾರ್ಯಗಳನ್ನು ಉತ್ತಮವಾಗಿ ಹಾಗೂ ನಿಖರತೆಯೊಂದಿಗೆ ಕ್ಷಿಪಣಿ ಪೂರೈಸಿದೆ.
Advertisement
New generation ballistic missile ‘Agni P’ successfully test-fired by DRDO from Dr APJ Abdul Kalam Island. #AmritMahotsav #IconicWeek https://t.co/7ex3kBczCL pic.twitter.com/FI8yC4Z1K6
— DRDO (@DRDO_India) December 18, 2021
Advertisement
ಜೂ.28ರಂದು ಕೂಡ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಲಾಗಿತ್ತು. ಕ್ಷಿಪಣಿಯು ಶೀಘ್ರದಲ್ಲೇ ರಕ್ಷಣಾ ಇಲಾಖೆಯ ಕಾರ್ಯಾಚರಣೆಗೆ ಸಿದ್ಧವಾಗಲಿದೆ. ಭಾರತವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಕಾರ್ಯತಂತ್ರದ ಕ್ಷಿಪಣಿ ಶಸ್ತ್ರಗಾರವನ್ನು ಮತ್ತಷ್ಟು ಬಲಪಡಿಸುವ ಕಾರ್ಯ ಮಾಡುತ್ತಿದೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್‌ನಿಂದ 465 ದಿನಗಳವರೆಗೆ ವ್ಯಾಲಿಡಿಟಿ ಆಫರ್ ರಿಲೀಸ್