ಢಾಕಾ: ಬಾಂಗ್ಲಾದೇಶಕ್ಕೆ ಅತಿ ದೊಡ್ಡ ಧಾನ್ಯ ಪೂರೈಕೆದಾರ ಎಂದೇ ಹೆಸರಾಗಿರುವ ಭಾರತವು ಕಳೆದ ತಿಂಗಳಿಂದ ಗೋಧಿ ರಫ್ತನ್ನು ಸ್ಥಗಿತಗೊಳಿಸಿದೆ. ಪರಿಣಾಮವಾಗಿ ಬಾಂಗ್ಲಾದೇಶವು ಗೋಧಿ ಪೂರೈಕೆಗಾಗಿ ರಷ್ಯಾದೊಂದಿಗೆ ಒಪ್ಪಂದಕ್ಕೆ ಯತ್ನಿಸುತ್ತಿದೆ.
ವಿಶ್ವದ ಅತಿದೊಡ್ಡ ಗೋಧಿ ರಫ್ತುದಾರ ರಷ್ಯಾದೊಂದಿಗಿನ ಪೂರೈಕೆ ಒಪ್ಪಂದವು ಢಾಕಾಗೆ ಜಾಗತಿಕ ಬೆಲೆಗಳಿಗಿಂತ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ. ಒಪ್ಪಂದವನ್ನು ಅಂತಿಮಗೊಳಿಸಲು ಬಾಂಗ್ಲಾದೇಶವು ಗುರುವಾರ ರಷ್ಯಾದೊಂದಿಗೆ ವರ್ಚುವಲ್ ಸಭೆ ನಡೆಸಲಿದೆ ಎಂದು ಬಾಂಗ್ಲಾದೇಶದ ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತ ನೀಡಿದ ಹಣಕಾಸಿನ ನೆರವು ದೇಣಿಗೆಯಲ್ಲ: ಶ್ರೀಲಂಕಾ ಪ್ರಧಾನಿ
Advertisement
Advertisement
ನಾವು ಆರಂಭದಲ್ಲಿ ರಷ್ಯಾದಿಂದ ಕನಿಷ್ಠ 2,00,000 ಟನ್ ಗೋಧಿಗೆ ಬೇಡಿಕೆ ಇಡುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶವು ಸುಮಾರು 7 ಮಿಲಿಯನ್ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷ ಅದರಲ್ಲಿ ಮೂರನೇ ಎರಡರಷ್ಟು ಪ್ರಮಾಣದ ಗೋಧಿ ಭಾರತದಿಂದ ಬಂದಿದೆ.
Advertisement
ಭಾರತದ ರಫ್ತು ನಿಷೇಧದ ನಂತರ ಬಾಂಗ್ಲಾದೇಶವು ಅಂತರರಾಷ್ಟ್ರೀಯ ಟೆಂಡರ್‌ಗಳ ಮೂಲಕ ಸರಬರಾಜನ್ನು ಪಡೆಯಲು ಪ್ರಯತ್ನಿಸಿತು. ಆದರೆ ಹೆಚ್ಚಿನ ಬೆಲೆ ಕಾರಣದಿಂದಾಗಿ ಸದ್ಯ ಈ ಯೋಜನೆಯನ್ನು ಕೈಬಿಟ್ಟಿದೆ. ಇದನ್ನೂ ಓದಿ: ಆಫ್ಘನ್‌ನಲ್ಲಿ ಭೂಕಂಪ – ಮೃತರ ಸಂಖ್ಯೆ 1,000ಕ್ಕೆ ಏರಿಕೆ; ಸಂತ್ರಸ್ತರಿಗೆ ನೆರವು ನೀಡ್ತೀವಿ ಎಂದ ತಾಲಿಬಾನ್
Advertisement
ಬಾಂಗ್ಲಾದೇಶ ಸರ್ಕಾರವು ಗಗನಕ್ಕೇರುತ್ತಿರುವ ಸರಕುಗಳ ಬೆಲೆಗಳನ್ನು ನಿಯಂತ್ರಿಸಲು ಹೆಣಗಾಡುತ್ತಿದೆ. ಹಣದುಬ್ಬರವು ಮೇ ತಿಂಗಳಲ್ಲಿ ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ ದೇಶದ ಗೋಧಿ ದಾಸ್ತಾನುಗಳು ಮೂರು ವರ್ಷಗಳಲ್ಲಿ 1,66,000 ಟನ್‌ಗಳಿಗೆ ಕಡಿಮೆಯಾಗಿದೆ.
ಬಾಂಗ್ಲಾದೇಶಕ್ಕೆ ಗೋಧಿಯನ್ನು ಪೂರೈಸುವ ಹಲವು ದೇಶಗಳಿವೆ. ಆದರೆ ಪ್ರಮುಖ ವಿಷಯವೆಂದರೆ ಬೆಲೆ. ರಷ್ಯಾ ಜಾಗತಿಕ ಬೆಲೆಗಳಲ್ಲಿ ರಿಯಾಯಿತಿಯನ್ನು ನೀಡಬಹುದು ಎಂದು ಜಾಗತಿಕ ವ್ಯಾಪಾರ ಸಂಸ್ಥೆಯೊಂದರ ನವದೆಹಲಿ ಮೂಲದ ಡೀಲರ್ ಹೇಳಿದ್ದಾರೆ.