ಮುಂಬೈ: ಶ್ರೀಲಂಕಾ (Sri Lanka) ವಿರುದ್ಧದ ಟಿ20 (T20I) ಮತ್ತು ಏಕದಿನ (ODI) ಸರಣಿಗೆ ಟೀಂ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. ಹಲವು ಬದಲಾವಣೆಯೊಂದಿಗೆ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ.
Advertisement
ಏಕದಿನ ತಂಡದ ನಾಯಕತ್ವದಲ್ಲಿ ರೋಹಿತ್ ಶರ್ಮಾ ಮುಂದುವರಿದರೆ, ಟಿ20 ತಂಡದ ನಾಯಕತ್ವ ಹಾರ್ದಿಕ್ ಪಾಂಡ್ಯ (Hardik Pandya) ಹೆಗಲಿಗೇರಿದೆ. ಇನ್ನೂ ಭವಿಷ್ಯದ ಸ್ಟಾರ್ ಎನಿಸಿಕೊಂಡಿದ್ದ ರಿಷಭ್ ಪಂತ್ (Rishabh Pant) ಕಳಪೆ ಫಾರ್ಮ್‍ಗೆ ಬೆಲೆ ತೆತ್ತಿದ್ದಾರೆ. ಶ್ರೀಲಂಕಾ ಸರಣಿಯಿಂದ ಪಂತ್‍ಗೆ ಕೂಕ್ ನೀಡಲಾಗಿದೆ. ಸೂರ್ಯಕುಮಾರ್ ಯಾದವ್‌ಗೆ ಟಿ20 ತಂಡದ ಉಪನಾಯಕನ ಪಟ್ಟ ನೀಡಲಾಗಿದೆ. ಇತ್ತ ಏಕದಿನ ತಂಡದಲ್ಲಿ ಉಪನಾಯಕನಾಗಿದ್ದ ಕೆ.ಎಲ್ ರಾಹುಲ್ ಉಪನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ನೂತನ ಉಪನಾಯಕನ್ನಾಗಿ ಪಾಂಡ್ಯ ನೇಮಗೊಂಡಿದ್ದಾರೆ.
Advertisement
Advertisement
ಗಾಯಾಳುವಾಗಿ ತಂಡದಿಂದ ದೂರ ಉಳಿದಿರುವ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅನ್‍ಫಿಟ್ ಎಂದು ತಂಡಕ್ಕೆ ಆಯ್ಕೆಯಾಗಿಲ್ಲ. ಟಿ20 ತಂಡದಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಕೈಬಿಡಲಾಗಿದೆ. ಟಿ20 ತಂಡದಲ್ಲಿ ಹೊಸ ಮುಖಗಳಾಗಿ ಶಿವಂ ಮಾವಿ, ಮುಖೇಶ್ ಕುಮಾರ್ ಎಂಟ್ರಿಕೊಟ್ಟಿದ್ದಾರೆ. ಇದನ್ನೂ ಓದಿ: ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ
Advertisement
ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (VC), ಇಶಾನ್ ಕಿಶನ್ (WK), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್. ಇದನ್ನೂ ಓದಿ: ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ
#TeamIndia squad for three-match T20I series against Sri Lanka.#INDvSL @mastercardindia pic.twitter.com/iXNqsMkL0Q
— BCCI (@BCCI) December 27, 2022
ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (VC), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (WK), ಇಶಾನ್ ಕಿಶನ್ (WK), ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.
#TeamIndia squad for three-match ODI series against Sri Lanka.#INDvSL @mastercardindia pic.twitter.com/XlilZYQWX2
— BCCI (@BCCI) December 27, 2022
ತವರಿನಲ್ಲಿ ಭಾರತ ಪ್ರವಾಸಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜ.3 ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ.