ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​​ಗೆ 16 ಸದಸ್ಯರ ಭಾರತ ತಂಡ ರೆಡಿ – ಯುವ ಆಟಗಾರರಿಗೆ ಮಣೆ!

Public TV
2 Min Read
RISHABH PANTH

– 21 ತಿಂಗಳ ಬಳಿಕ ರಿಷಭ್‌ ಪಂತ್‌ ಟೆಸ್ಟ್‌ ಕ್ರಿಕೆಟ್‌ಗೆ ಕಂಬ್ಯಾಕ್‌

ಮುಂಬೈ: ಇದೇ ಸೆ.19ರಿಂದ ನಡೆಯಲಿರುವಚ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ನಾಯಕ ರೋಹಿತ್‌ ಶರ್ಮಾ ಅವರೇ ಸಾರಥ್ಯ ವಹಿಸಿದ್ದಾರೆ.

ಟೀಂ ಇಂಡಿಯಾ ಬ್ಯಾಟರ್‌ ರಿಷಬ್ ಪಂತ್ 21 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಕಂಬ್ಯಾಕ್‌ ಮಾಡಿದ್ದಾರೆ. ಕನ್ನಡಿಗ ಕೆ.ಎಲ್‌ ರಾಹುಲ್ ಕೂಡ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ

Team India

ಭಾನುವಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಬಾಂಗ್ಲಾದೇಶ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ 16 ಸದಸ್ಯರ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.

ಇದರೊಂದಿಗೆ ಧ್ರುವ್‌ ಜುರೆಲ್‌, ಆಕಾಶ್‌ ದೀಪ್‌, ಯಶ್‌ ದಯಾಳ್‌ ಅವರಂತಹ ಯುವ ಆಟಗಾರರಿಗೂ ಬಿಸಿಸಿಐ ಮಣೆ ಹಾಕಿದೆ. 2025ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿ ಉದ್ದೇಶದಿಂದಾಗಿ ಬಿಸಿಸಿಐ ಈ ಪ್ಲ್ಯಾನ್‌ ಮಾಡಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: Paralympics 2024 | ಐತಿಹಾಸಿಕ 29 ಪದಕಗಳ ಸಾಧನೆ – 18ನೇ ಸ್ಥಾನ ಪಡೆದ ಭಾರತ

Team India

ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್‌ ಕೀಪರ್‌), ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕು‌ಲ್ದೀಪ್‌ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.

ಭಾರತ vs ಬಾಂಗ್ಲಾ ಟೆಸ್ಟ್‌:
ಮೊದಲ ಟೆಸ್ಟ್‌ ಪಂದ್ಯ – ಸೆ.19 ರಿಂದ ಸೆ.23 – ಸ್ಥಳ: ಚೆಪಾಕ್‌ ಸ್ಟೇಡಿಯಂ, ಚೆನ್ನೈ
2ನೇ ಟೆಸ್ಟ್‌ ಪಂದ್ಯ – ಸೆ.27 ರಿಂದ ಅಕ್ಟೋಬರ್‌ 1, ಸ್ಥಳ: ಗ್ರೀನ್‌ ಪಾರ್ಕ್‌ ಸ್ಟೇರಿಯಂ, ಖಾನ್‌ಪುರ

Share This Article