ನವದೆಹಲಿ: (New Delhi) ಭಾರತದಲ್ಲಿ (India) ಮೊದಲ ಬಾರಿಗೆ ಮಾನವರಹಿತ ಚಾಲಿತ ರೈಲು (Unmanned Train) ಶೀಘ್ರವೇ ಸಂಚಾರ ಆರಂಭಿಸಲಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮತ್ತು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (DMRC) ಒಪ್ಪಂದಕ್ಕೆ ಸಹಿ ಹಾಕಿದ್ದು, ಮೆಟ್ರೋ ಮತ್ತು ರೈಲುಗಳ ಮಾನವರಹಿತ ಕಾರ್ಯಾಚರಣೆ ಸಕ್ರಿಯಗೊಳ್ಳಲಿದೆ.
ಮೆಟ್ರೋ ಮತ್ತು ರೈಲು ಆಟೊಮೇಷನ್ ಕ್ಷೇತ್ರದಲ್ಲಿ ದೊಡ್ಡ ಪ್ರಗತಿಯಾಗಿದೆ. ಭಾರತ ಸರ್ಕಾರದ ‘ಆತ್ಮನಿರ್ಭರ್ ಭಾರತ್’ ಮಿಷನ್ಗೆ ಉತ್ತೇಜನ ನೀಡಲಿದೆ. ಈ ಯೋಜನೆಯನ್ನು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ದೇಶದ ಪ್ರಮುಖ ಸಾರಿಗೆ ಸಂಸ್ಥೆಯಾದ ಭಾರತೀಯ ರೈಲ್ವೆಯು ಏಷ್ಯಾದಲ್ಲಿ ಅತಿದೊಡ್ಡ ರೈಲು ಜಾಲವಾಗಿದೆ. ನಿರ್ವಹಣೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಪಡೆದಿದೆ. ಇದನ್ನೂ ಓದಿ: ಪಂಜಾಬ್ನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಬಿಗಿ – ಹಿಂಸೆ ವೈಭವೀಕರಿಸುವ ಹಾಡುಗಳು ಬ್ಯಾನ್
ಯಾಂತ್ರೀಕೃತಗೊಂಡ ಕ್ಷೇತ್ರದಲ್ಲಿ ಪ್ರಗತಿ ದೃಷ್ಟಿಯಿಂದ ಮೆಟ್ರೋ ಮತ್ತು ರೈಲುಗಳ ಮಾನವರಹಿತ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಲಾಗುತ್ತಿದೆ. ಇದು ಭಾರತದಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ಸಿಗ್ನಲಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಮುಖ ಹೆಜ್ಜೆಯಾಗಿದೆ. ಮೆಟ್ರೋದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಇದು ರೈಲ್ವೆ ಟ್ರಾಫಿಕ್ ನಿರ್ವಹಿಸಲು ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತ ಮಾರ್ಗವಾಗಿದೆ. ಪ್ರಸ್ತುತ ವಿಶ್ವಾದ್ಯಂತ ನೂರಕ್ಕೂ ಹೆಚ್ಚು ಕಡೆ ಈ ವ್ಯವಸ್ಥೆ ಅಳವಡಿಸಲಾಗಿದೆ. ಭಾರತದಲ್ಲಿಯೂ ಮೆಟ್ರೋ ರೈಲುಗಳಲ್ಲಿ ಅಪ್ಲಿಕೇಶನ್ಗಳನ್ನು ಹುಡುಕಲಾಗುತ್ತಿದೆ. ಇದನ್ನೂ ಓದಿ: ಜೈಲಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದರು: ನಳಿನಿ ಶ್ರೀಹರನ್