ತಿರುವನಂತಪುರಂ: ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿಯ ಕ್ರಿಕೆಟ್ ಗೆ ನಿವೃತ್ತಿ ಹೇಳಬೇಕು ಎಂದು ಹೇಳಿದ್ದ ಟೀಕಾಕಾರರಿಗೆ ತಿರುಗೇಟು ನೀಡಿರುವ ಕೊಹ್ಲಿ, ಯಾಕೆ ಎಲ್ಲರೂ ಅವರನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂಬುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯ ಗೆದ್ದ ಬಳಿಕ ಮಾತನಾಡಿದ ಕೊಹ್ಲಿ ಯಾಕೆ ಎಲ್ಲರೂ ಅವರನ್ನೇ ಗುರಿಯಾಗಿಸಿಕೊಂಡಿದ್ದಾರೆ. ನಾನು ಸತತವಾಗಿ ಮೂರು ಬಾರಿ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾದರು ಯಾರು ನನ್ನನ್ನು ಟೀಕೆ ಮಾಡುವುದಿಲ್ಲ, ಏಕೆಂದರೆ ನನಗೆ 35 ವರ್ಷ ಪೂರ್ಣಗೊಂಡಿಲ್ಲ. ಆದರೆ ಧೋನಿ ಎಲ್ಲಾ ಫಿಟ್ ನೆಸ್ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಆಯ್ಕೆಯಾಗಿದ್ದಾರೆ. ಬ್ಯಾಟ್ ಮೂಲಕ ತಂಡದ ಗೆಲುವಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಆಸ್ಟೇಲಿಯಾ ಹಾಗೂ ಶ್ರೀಲಂಕಾ ಸರಣಿಯಲ್ಲಿ ಧೋನಿ ನೀಡಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ. ನ್ಯೂಜಿಲೆಂಡ್ ಸರಣಿಯಲ್ಲಿ ಮಾತ್ರ ಅವರಿಗೆ ಬ್ಯಾಟ್ ಮಾಡಲು ಉತ್ತಮ ಅವಕಾಶ ಲಭ್ಯವಾಗಿಲ್ಲ ಎಂದು ಹೇಳಿದರು.
Advertisement
Advertisement
ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ ಸಹ ಉತ್ತಮವಾಗಿ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾವು ಧೋನಿ ಅವರನ್ನು ಮಾತ್ರ ಯಾಕೆ ಗುರಿ ಮಾಡುತ್ತಿದ್ದೇವೆ? ಒಬ್ಬರನ್ನೇ ಟೀಕೆ ಮಾಡುವುದು ಸರಿಯಲ್ಲ. ಧೋನಿ ಬ್ಯಾಟ್ ಮಾಡಲು ಬಂದ ಕ್ರಮಾಂಕದ ಕುರಿತು ತಿಳಿದು ಸತ್ಯವನ್ನು ಗಮನಿಸಿಬೇಕಿದೆ. ಧೋನಿ ಬ್ಯಾಟ್ ಮಾಡಲು ಆಗಮಿಸಿದ ವೇಳೆ ರನ್ ರೇಟ್ ಎಷ್ಟಿತ್ತು ಹಾಗೂ ಪ್ರಮುಖ ವಿಕೆಟ್‍ಗಳನ್ನು ಸಹ ಕಳೆದುಕೊಡಿದ್ದೇವು ಎಂದು ತಿಳಿಸಿದ್ದಾರೆ.
Advertisement
Advertisement
ತಂಡದ ಸದಸ್ಯರಾಗಿ ಎಲ್ಲಾ ಆಟಗಾರರು ಪಂದ್ಯದ ವೇಳೆ ಬ್ಯಾಟ್ ಮಾಡುವ ಸನ್ನಿವೇಶದ ಕುರಿತು ತಿಳಿದಿರುತ್ತೇವೆ. ವಿವಿಧ ದೃಷ್ಟಿಗಳಿಂದ ವಿಮರ್ಶೆ ನಡೆಸುವ ಟೀಕಾಕಾರರ ಹೇಳಿಕೆಗಳಿಂದ ನಾವು ಭಾವನತ್ಮಕತೆಗೆ ಒಳಾಗುವುದಿಲ್ಲ. ಕ್ರೀಡಾಂಗಣದಲ್ಲಿದ್ದಾಗ ವಿಕೆಟ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ಮಾತ್ರ ಗಮನಿಸುತ್ತೇವೆ ಎಂದು ಟೀಕಾಕಾರಿಗೆ ಟಾಂಗ್ ನೀಡಿದ್ದಾರೆ.
ಎರಡನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್ 197 ರನ್ ಗೆಲುವಿನ ಗುರಿ ನೀಡಿತ್ತು. ಆದರೆ ಭಾರತ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡು 40ರನ್ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಧೋನಿ 49 (37 ಎಸೆತ) ರನ್ ಗಳಿಸಿದ್ದರು. ಇದರಿಂದ ಪಂದ್ಯದ ಪ್ರಮುಖ ಸಮಯದಲ್ಲಿ ಧೋನಿ ನಿಧಾನಗತಿಯಿಂದ ಬ್ಯಾಟ್ ಮಾಡಿದರು ಎಂದು ಹಲವರು ಟೀಕೆ ಮಾಡಿದ್ದರು.
ಭಾರತ ತಂಡದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ಧೋನಿ ಟಿ-20 ಮಾದರಿಗೆ ವಿದಾಯ ನೀಡಿ ಯುವ ಆಟಗಾರರಿಗೆ ಅವಕಾಶವನ್ನು ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಸೆಹ್ವಾಗ್ ಧೋನಿ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು ಎಂದು ನಿರ್ಧಾರ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.