– ಗ್ರೀಸ್‌ನಲ್ಲಿ ಚಂದ್ರಯಾನ ಗುಣಗಾನ, ಮೋದಿಗೆ ಗ್ರೀಸ್ ಅತ್ತುನ್ನತ ನಾಗರಿಕ ಗೌರವ
ಅಥೆನ್ಸ್: ಭಾರತ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇಡೀ ವಿಶ್ವಕ್ಕೇ ತನ್ನ ಸಾಮರ್ಥ್ಯವನ್ನ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಂದ್ರಯಾನ ಗುಣಗಾನ ಮಾಡಿದ್ದಾರೆ.
#WATCH | Athens, Greece | PM Narendra Modi says, “This is the month of Sawan, of Lord Shiva. In this holy month, the country has made a new achievement. India has become the first country to land in the dark zone, at the south pole (of the moon)…” pic.twitter.com/vVWEVO0T5z
— ANI (@ANI) August 25, 2023
Advertisement
ಸುಮಾರು 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಗ್ರೀಸ್ (Greece) ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ ಅವರನ್ನ ಗ್ರೀಸ್ ರಾಷ್ಟ್ರಪತಿ ಹಾಗೂ ಪ್ರಧಾನಿ ಬರಮಾಡಿಕೊಂಡರು. ಭಾರತೀಯ ಸಮುದಾಯ ಸಾಂಪ್ರದಾಯಿಕವಾಗಿ ಮೋದಿ ಅವರನ್ನು ಸ್ವಾಗತಿಸಲಾಯಿತು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಸ್ ನಾಗರಿಕ ಗೌರವ ‘ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್’ ನೀಡಿ ಗೌರವಿಸಲಾಯಿತು. ಅಧ್ಯಕ್ಷೆ ಕ್ಯಾಥರೀನಾ ಸಕೆಲ್ಲರೊಪೌಲೊ ಅವರು ಮೋದಿಗೆ ಅವರಿಗೆ ಗ್ರೀಸ್ ನಾಗರಿಕ ಗೌರವ ನೀಡಿ ಸನ್ಮಾನಿಸಿದರು.
Advertisement
ನಂತರ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ (Athens) ಭಾರತೀಯ ಸಮುದಾಯದವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಚಂದ್ರಯಾನ ಸಾಧನೆಯನ್ನ ಹಾಡಿ ಹೊಗಳಿದರು. ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇಡೀ ಜಗತ್ತಿಗೆ ಭಾರತ ತನ್ನ ಸಾಮರ್ಥ್ಯ ತೋರಿಸಿದೆ ಎಂದು ಶ್ಲಾಘಿಸಿದರು.
Advertisement
Advertisement
ಈ ತಿಂಗಳು ಶಿವನನ್ನು ಪೂಜಿಸುವ ಪರ್ವಕಾಲ, ಶ್ರಾವಣ ಮಾಸದಲ್ಲಿ ದೇಶವು ಹೊಸ ಸಾಧನೆ ಮಾಡಿದೆ. ಚಂದ್ರನ ಕತ್ತಲಿನ ವಲಯವಾದ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ತಿರಂಗವನ್ನು ಚಂದ್ರನ ಮೇಲೆ ಹಾರಿಸುವ ಮೂಲಕ ಜಗತ್ತಿಗೆ ನಮ್ಮ ಸಾಮರ್ಥ್ಯ ತೋರಿಸಿದ್ದೇವೆ. ಜಗತ್ತಿನ ಮೂಲೆಮೂಲೆಗಳಿಂದ ಅಭಿನಂದನೆಯ ಸಂದೇಶಗಳು ಹರಿದು ಬರುತ್ತಿವೆ. ಸಾಧನೆಯು ಇಷ್ಟು ದೊಡ್ಡದಾಗಿರುವಾಗ ಸಂಭ್ರಮವೂ ಸಹ ಮುಂದುವರಿಯುತ್ತದೆ. ಚಂದ್ರಯಾನ-3ರ ಯಶಸ್ಸಿಗೆ ನಾನು ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಮುಖದ ಭಾವನೆಗಳೇ ಹೇಳುತ್ತಿವೆ, ನೀವು ಜಗತ್ತಿನ ಯಾವುದೇ ಜಾಗದಲ್ಲಿದ್ದರೂ ಹೃದಯದಲ್ಲಿ ಭಾರತವು ಮಿಡಿಯುತ್ತಿರುತ್ತದೆ ಎಂದು ಹೊಗಳಿದರು.
ಮುಂದುವರಿದು, ವಿಶ್ವದ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂಚೂಣಿಯಲ್ಲಿವೆ. ಭಾರತದ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ತಜ್ಞರ ಪ್ರಕಾರ ದೇಶವು 3ನೇ ಸ್ಥಾನಕ್ಕೆ ಏರಲಿದೆ. ಆರ್ಥಿಕತೆ ಬೆಳೆಯುತ್ತಿದ್ದಂತೆ ದೇಶವು ಬಡತನದಿಂದ ವೇಗವಾಗಿ ಹೊರಬರುತ್ತದೆ. ಭಾರತದಲ್ಲಿ 5 ವರ್ಷಗಳಲ್ಲಿ 13.5 ಕೋಟಿ ಭಾರತೀಯರು ಬಡತನ ಮಟ್ಟದಿಂದ ಹೊರಬಂದಿದ್ದಾರೆ ಎಂದು ಹೇಳಿದರಲ್ಲದೇ, ಭಾರತ ತಾಂತ್ರಿಕವಾಗಿಯೂ ಬೆಳೆಯುತ್ತಿದ್ದ ಸುಮಾರು 700 ಜಿಲ್ಲೆಗಳಲ್ಲಿ ಈಗಾಗಲೇ 5 ಜಿ ತಂತ್ರಜ್ಞಾನವನ್ನು ಹೊಂದಿದೆ ಎಂದು ಬೀಗಿದರು.
Web Stories