ಚಂಡೀಗಢ: ಪಂಜಾಬ್‌ನ (Punjab) ಭಾರತ – ಪಾಕಿಸ್ತಾನ (India – Pakistan) ಗಡಿಯ (Border) ಭಾಗದಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಸುಮಾರು 12 ಕೆ.ಜಿ ಸರಕನ್ನು ಹೊತ್ತಿದ್ದ ಡ್ರೋನ್ (Drone) ಒಂದನ್ನು ಭದ್ರತಾ ಪಡೆಗಳು (Security Force) ಭಾನುವಾರ ರಾತ್ರಿ ಹೊಡೆದುರುಳಿಸಿದ್ದಾರೆ.
ಅಮೃತಸರ ಸೆಕ್ಟರ್‌ನ ರಾನಿಯಾ ಗಡಿ ಪೋಸ್ಟ್ ಬಳಿ ರಾತ್ರಿ 9:15ರ ಸುಮಾರಿಗೆ ಭದ್ರತಾ ಪಡೆಗಳು ಕ್ವಾಡ್ ಕಾಪ್ಟರ್ ಸ್ಪೋರ್ಟಿಂಗ್ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಾರಾಣಸಿಯಲ್ಲಿ ಗಂಗಾರತಿ ಮಾಡಿದ ‘ಬನಾರಸ್’ ಹೀರೋ ಝೈದ್ ಖಾನ್
Advertisement
Advertisement
ಡ್ರೋನ್‌ನಲ್ಲಿ ಲೋಡ್ ಮಾಡಲಾಗಿದ್ದ ಹಾಗೂ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸರಕನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಡ್ರೋನ್‌ನಲ್ಲಿ ಯಾವ ವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಗಡಿ ಭದ್ರತಾ ಪಡೆ (BSF) ತಿಳಿಸಿದ್ದಾರೆ. ಇದನ್ನೂ ಓದಿ: ಆಧುನಿಕ ಭಗೀರಥ ಖ್ಯಾತಿಯ ಕಾಮೇಗೌಡ ನಿಧನ
Advertisement
ಇದು ಕಳೆದ 3 ದಿನಗಳಲ್ಲಿ ನಡೆದ 2ನೇ ಘಟನೆಯಾಗಿದೆ. ಅಕ್ಟೋಬರ್ 13-14ರ ಮಧ್ಯರಾತ್ರಿ ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಡ್ರೋನ್ ಹಾರಾಡಿದ್ದು, ಅದನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದರು.