ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ 2030ರ ವೇಳೆಗೆ ಭಾರತ ಜಪಾನ್ ಹಿಂದಿಕ್ಕಿ ಮೂರನೇ ಸ್ಥಾನವನ್ನು ಏರಲಿದೆ ಎಂದು ಅಮೆರಿಕಾದ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯಾದ ಎಚ್‍ಎಸ್‍ಬಿಸಿ ವರದಿ ನೀಡಿದೆ.
ಜಾಗತಿಕ ಆರ್ಥಿಕತೆಯ ಬಗ್ಗೆ ವರದಿ ನೀಡಿರುವ ಎಚ್‍ಎಸ್‍ಬಿಸಿ, 2017ರ ಜಾಗತಿಕ ಆರ್ಥಿಕತೆಯಲ್ಲಿ 6ನೇ ಸ್ಥಾನದಲ್ಲಿರುವ ಭಾರತವು, 2030ರ ವೇಳೆಗೆ 3ನೇ ಸ್ಥಾನವನ್ನು ತಲುಪಲಿದೆ. ಅಲ್ಲದೇ ಜಪಾನ್ ಹಾಗೂ ಜರ್ಮನ್ ದೇಶಗಳನ್ನು ಆರ್ಥಿಕತೆಯಲ್ಲಿ ಭಾರತ ಹಿಂದಿಕ್ಕಲಿದೆ ಎನ್ನುವ ವರದಿ ನೀಡಿದೆ.
Advertisement
Advertisement
2030ರ ವೇಳೆಗೆ 26 ಟ್ರಿಲಿಯನ್ (1,889.16 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆಯ ಮೂಲಕ ಚೀನಾ ಪ್ರಥಮ ಸ್ಥಾನ ಪಡೆದುಕೊಂಡರೆ, 25.2 ಟ್ರಿಲಿಯನ್ (1,831.03 ಲಕ್ಷ ಕೋಟಿ ರೂಪಾಯಿ) ಮೂಲಕ ಅಮೆರಿಕ ಎರಡನೇ ಸ್ಥಾನದಲ್ಲಿರುತ್ತದೆ. ಭಾರತ 5.9 ಟ್ರಿಲಿಯನ್ (428.69 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆ ಹೊಂದುವ ಮೂಲಕ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಅಂದಾಜಿಸಿದೆ.
Advertisement
ಈ ಹಿಂದೆ ಅಮೆರಿಕದ ಹಾರ್ವರ್ಡ್ ವಿವಿಯ ಸೆಂಟರ್ ಫಾರ್ ಇಂಟರ್ ನ್ಯಾಷನಲ್ ಡೆವಲಪ್‍ಮೆಂಟ್ (ಸಿಐಡಿ) ಅಧ್ಯಯನದ ಪ್ರಕಾರ 2025 ರವರೆಗೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಹೊರಹೊಮ್ಮುವ ಆರ್ಥಿಕ ಶಕ್ತಿಯಾಗಿ ಭಾರತ ಉದಯಿಸಲಿದೆ. ಈ ಸಂದರ್ಭದಲ್ಲಿ ವಾರ್ಷಿಕ ಜಿಡಿಪಿ ಬೆಳವಣಿಗೆ ದರ ಶೇ.7.7 ಇರಲಿದೆ ಎಂದು ಸಂಸ್ಥೆ ಅಂದಾಜಿಸಿತ್ತು. ಅಲ್ಲದೇ ರಾಸಾಯನಿಕ, ವಾಹನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳ ಬೆಳವಣಿಗೆಯಿಂದ ಭಾರತದ ಆರ್ಥಿಕತೆ ಪ್ರಗತಿ ಕಾಣಲಿದೆ ಎಂದು ವರದಿ ನೀಡಿತ್ತು.
Advertisement
ಈ ಮೊದಲು 2017 ರ ವಿಶ್ವಬ್ಯಾಂಕ್ ವರದಿಯಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತ ಫ್ರಾನ್ಸ್ ದೇಶವನ್ನು 7ನೇ ಸ್ಥಾನಕ್ಕೆ ತಳ್ಳಿದೆ. ಭಾರತದ ಜಿಡಿಪಿ 2.59 ಲಕ್ಷ ಕೋಟಿ ಡಾಲರ್ ಗಳಿಗೆ ಏರಿದರೆ ಫ್ರಾನ್ಸ್ ಜಿಡಿಪಿ 2.582 ಲಕ್ಷ ಕೋಟಿ ಡಾಲರ್ ಗಳಾಗಿವೆ ವರದಿ ತಿಳಿಸಿದೆ. ಭಾರತದ ಜನಸಂಖ್ಯೆ 134 ಕೋಟಿ ಇದ್ದರೆ, ಫ್ರಾನ್ಸ್ ಜನಸಂಖ್ಯೆ ಕೇವಲ 6.7 ಕೋಟಿ ಇದೆ. ಹೀಗಾಗಿ ಭಾರತದ ತಲಾ ಆದಾಯವನ್ನು ಜಿಡಿಪಿಗೆ ಹೋಲಿಸಿದರೆ ಫ್ರಾನ್ಸ್ ನ ತಲಾ ಆದಾಯದ 20 ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ. ಫ್ರಾನ್ಸ್ ನಲ್ಲಿ 6.78 ಕೋಟಿ ಜನಸಂಖ್ಯೆಯಿದೆ.
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಪ್ರಕಾರ 2019 ರ ಭಾರತ ಆರ್ಥಿಕ ಪ್ರಗತಿ 7.8% ಗೆ ಹೆಚ್ಚಳವಾಗಲಿದೆ ಎಂದು ತಿಳಿಸಿತ್ತು. 2018 ರಲ್ಲಿ ವರ್ಷದಲ್ಲಿ ಭಾರತದ ಜಿಡಿಪಿ ದರ 7.4% ಕ್ಕೆ ಏರಿಕೆ ಆಗಲಿದ್ದು, ಈ ವೇಳೆ ಚೀನಾ 6.8% ರಷ್ಟು ಹೊಂದಿರಲಿದೆ ಎಂದು ಐಎಂಎಫ್ ಹೇಳಿತ್ತು. ನೋಟು ನಿಷೇಧ ಮತ್ತು ಜಿಎಸ್‍ಟಿ ಜಾರಿಯಾದ ಬಳಿಕ ಭಾರತದ ಆರ್ಥಿಕತೆ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಏಷ್ಯಾದಲ್ಲಿ ಚೀನಾದ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದ್ದರೆ ಭಾರತದ ಆರ್ಥಿಕತೆ ವೇಗವಾಗಿ ಸಾಗುತ್ತಿದೆ ಎಂದು ವಿಶ್ವಬ್ಯಾಂಕ್ ವರದಿ ಉಲ್ಲೇಖಿಸಿದೆ.
ವಿಶ್ವದ ಐದು ದೊಡ್ಡ ಅರ್ಥವ್ಯವಸ್ಥೆಯ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನದಲ್ಲಿ ಅನುಕ್ರಮವಾಗಿ ಇಂಗ್ಲೆಂಡ್, ಚೀನಾ, ಜಪಾನ್, ಜರ್ಮನಿ ಪಡೆದುಕೊಂಡಿವೆ.
ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆ ಈ ವರ್ಷವೇ ಬ್ರಿಟನ್ ಮತ್ತು ಫ್ರಾನ್ಸ್ ಅನ್ನು ಮೀರಿಸಲಿದೆ. ಇದೇ ಬೆಳವಣಿಗೆಯನ್ನು ಕಾಯ್ದುಕೊಂಡರೆ 2032ರ ವೇಳೆಗೆ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಲಂಡನ್ ಮೂಲದ ಸೆಂಟರ್ ಫಾರ್ ಎಕನಾಮಿಕ್ಸ್ ಆ್ಯಂಡ್ ಬಿಸಿನೆಸ್ ರೀಸರ್ಚ್ 2017ರಲ್ಲಿ ಭವಿಷ್ಯ ನುಡಿದಿತ್ತು.
ಯಾವ ವರ್ಷ ಎಷ್ಟು ಜಿಡಿಪಿ?
2012 – 5.46%
2013 – 6.39%
2014 – 7.41%
2015 – 8.16%
2016 – 7.11%
2017 – 6.74%
ಯಾವ ಅವಧಿಯಲ್ಲಿ ಎಷ್ಟಿತ್ತು?
ಮಾರ್ಚ್ 2016 – 9.2%
ಜೂನ್ 2016 – 7.9%
ಸೆಪ್ಟೆಂಬರ್ 2016 – 7.5%
ಡಿಸೆಂಬರ್ 2016 – 7%
ಮಾರ್ಚ್ 2017 – 6.1%
ಜೂನ್ 2017 – 5.6%
ಸೆಪ್ಟೆಂಬರ್ 2017 – 6.3%
ಡಿಸೆಂಬರ್ 2017 – 7.0%
ಮಾರ್ಚ್ 2018 – 7.7%
ಜೂನ್ 2018 – 8.2%
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv