ನವದೆಹಲಿ: ಕೋವಿಡ್ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತದಿಂದ ಇಂದು ಮೈಲಿಗಲ್ಲು ಸೃಷ್ಟಿಯಾಗಲಿದೆ. ಇಂದು 100 ಕೋಟಿ (1 ಬಿಲಿಯನ್) ಲಸಿಕೆ ವಿತರಿಸಿ ಐತಿಹಾಸಿಕ ಸಾಧನೆಗೆ ಕ್ಷಣಗಣನೆ ಆರಂಭವಾಗಿದೆ.
ನಿನ್ನೆ ಮಧ್ಯರಾತ್ರಿಯವರೆಗೂ 99,85,16,644 ಡೋಸ್ ಹಂಚಿಕೆ ಆಗಿತ್ತು. ಈ ಮೂಲಕ 9 ತಿಂಗಳಲ್ಲಿ 100 ಕೋಟಿ ಡೋಸ್ ನೀಡಿದ ಗರಿಮೆಗೆ ಭಾರತ ಪಾತ್ರವಾಗಲಿದೆ. ಚೀನಾ ನಂತರ ಕಡಿಮೆ ಅವಧಿಯಲ್ಲಿ 100 ಕೋಟಿ ಲಸಿಕೆ ಸಾಧನೆ ಮಾಡಿದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
Advertisement
Advertisement
ಜನವರಿ 16ರಂದು ಮೊದಲ ವ್ಯಾಕ್ಸಿನ್ ನೀಡಲಾಗಿತ್ತು. ಆ ಬಳಿಕ 100 ಕೋಟಿ ಲಸಿಕೆ ವಿತರಿಸಲು 277 ದಿನ ಪಡೆದುಕೊಂಡಿದೆ. ದೇಶದ ಶೇ. 50ರಷ್ಟು ಮಂದಿಗೆ ಸಿಂಗಲ್ ಡೋಸ್ ಲಸಿಕೆ ಸಿಕ್ಕಿದರೆ ಶೇ.21ರಷ್ಟು ಮಂದಿಗೆ ಡಬಲ್ ಡೋಸ್ ಲಸಿಕೆ ಪೂರ್ಣವಾಗಿದೆ. 58,645 ಸರ್ಕಾರಿ, 2,019 ಖಾಸಗಿ ಕೇಂದ್ರ ಸೇರಿ ಒಟ್ಟು 60,664 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ. ಲಸಿಕೆ ವಿತರಿಸಲು ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. ಇದನ್ನೂ ಓದಿ: ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ
Advertisement
ಟಾಪ್ 5 ವ್ಯಾಕ್ಸಿನ್ ರಾಜ್ಯಗಳು
ಉತ್ತರ ಪ್ರದೇಶ -12,19,47,031
ಮಹಾರಾಷ್ಟ್ರ – 9,28,41,727
ಪಶ್ಚಿಮ ಬಂಗಾಳ – 6,85,12,831
ಗುಜರಾತ್ – 6,76,67,794
ಕರ್ನಾಟಕ – 6,15,62,329 (8ನೇ ಸ್ಥಾನ)