ಒಂದೇ ದಿನಕ್ಕೆ ದೇಶದಲ್ಲಿ ಮತ್ತೆ ಕೊರೊನಾ ಹೆಚ್ಚಳ – 2 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿ

Public TV
1 Min Read
china covid corona

ನವದೆಹಲಿ: ದೇಶದಲ್ಲಿ ಕೋವಿಡ್ (Covid-19) ಹೆಮ್ಮಾರಿಯ ಕಾಟ ಮತ್ತೆ ಹೆಚ್ಚುತ್ತಿದೆ. ಕಳೆದ ಕೆಲ ತಿಂಗಳಿಂದ ನಿಯಂತ್ರಣದಲ್ಲೇ ಇದ್ದ ಕೊರೊನಾ ವೈರಸ್ (Corona Virus) ಇದೀಗ ಎಲ್ಲೆಡೆ ವ್ಯಾಪಿಸುತ್ತಿದೆ.

ನಿನ್ನೆಯೊಂದೇ ದಿನ ದೇಶದಲ್ಲಿ 2,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಐದು ತಿಂಗಳ ಗರಿಷ್ಠ ಎನ್ನುವುದು ಗಮನಾರ್ಹ. 1.42 ಲಕ್ಷ ಮಂದಿಗೆ ಟೆಸ್ಟ್ ಮಾಡಿದಾಗ 2,151 ಮಂದಿಯಲ್ಲಿ ಸೋಂಕು ಇರುವುದು ಧೃಢಪಟ್ಟಿದೆ. ಇದನ್ನೂ ಓದಿ: ಲಕ್ಷದ್ವೀಪ MP ಅನರ್ಹತೆ ದಿಢೀರ್ ರದ್ದು

coronavirus

ಸಕ್ರಿಯ ಕೇಸ್‍ಗಳ ಸಂಖ್ಯೆ ಈಗ 12 ಸಾವಿರದ ಗಡಿಯ ಸನಿಹದಲ್ಲಿವೆ. ದಿನವಾಹಿ ಪಾಸಿಟಿವಿಟಿ ರೇಟ್ 1.51ರಷ್ಟಿದೆ. ಕೇರಳ, ಮಹಾರಾಷ್ಟ್ರದಲ್ಲಿ ತಲಾ ಮೂವರು, ಕರ್ನಾಟಕದಲ್ಲಿ ಒಬ್ಬರು ಕೋವಿಡ್‍ಗೆ ಬಲಿ ಆಗಿದ್ದಾರೆ.

ಕೇವಲ ಒಂದು ದಿನದ ಅವಧಿಯಲ್ಲಿ ದೆಹಲಿಯಲ್ಲಿ 300 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷದ ಆಗಸ್ಟ್‌ ನಂತರ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳು 300ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ವರದಿ ಪ್ರಕಾರ, ಪಾಸಿಟಿವಿಟಿ ದರ ಶೇ.13.89ಕ್ಕೆ ತಲುಪಿದೆ. ಕೋವಿಡ್‌ ಸಂಬಂಧಿ 2 ಸಾವು ಕೂಡ ವರದಿಯಾಗಿದೆ.

Share This Article