ನವದೆಹಲಿ: 12 ಸಾವಿರ ರೂ. ಗೂ ಕಡಿಮೆ ಬೆಲೆಯ ಸಾಧನಗಳನ್ನು ಮಾರಾಟ ಮಾಡುವ ಚೈನೀಸ್ ಸ್ಮಾರ್ಟ್ ಫೋನ್ ತಯಾರಕರನ್ನು ನಿರ್ಬಂಧಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.
ಕುಗ್ಗುತ್ತಿರುವ ದೇಶೀಯ ಉದ್ಯಮಗಳಿಗೆ ಉತ್ತೇಜನ ನೀಡುವ ಹಿನ್ನೆಲೆ ಭಾರತ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ಫೋನ್‌ಗನ್ನು ಮಾರಾಟ ಮಾಡುವ ಚೈನೀಸ್ ಕಂಪನಿಗಳನ್ನು ಬ್ಯಾನ್ ಮಾಡಲು ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಈ ಕ್ರಮದಿಂದ ಭಾರತದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಹೊಂದಿರುವ ಶಿಯೋಮಿ ಕಾರ್ಪ್‌ಗೆ ಭಾರೀ ಹೊಡೆತ ಬಿಳುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಚೀನಾ ಸ್ಮಾರ್ಟ್ ಫೋನ್ ಕಂಪನಿಗಳು ಹೆಚ್ಚಾಗಿ ಭಾರತದ ಮೇಲೆ ಅವಲಂಬಿತವಾಗಿವೆ. 2022ರ ಜೂನ್‌ನ ತ್ರೈಮಾಸಿಕ ವರದಿಯಲ್ಲಿ ಮೂರನೇ ಒಂದು ಭಾಗದಷ್ಟು 12 ಸಾವಿಕ್ಕೂ ಅಗ್ಗದ ಫೋನ್‌ಗಳು ಮಾರಾಟವಾಗಿವೆ. ಅವುಗಳಲ್ಲಿ ಶೇ.80 ರಷ್ಟು ಚೀನಾ ಕಂಪನಿಯ ಫೋನ್‌ಗಳೇ ಮಾರಾಟವಾಗಿವೆ. ಇದನ್ನೂ ಓದಿ: ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ
ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಶಿಯೋಮಿ, ವಿವೋ, ಓಪ್ಪೋ ಕಂಪನಿಗಳ ಮೇಲೆ ಈಗಾಗಲೇ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪರಿಶೀಲನೆ ನಡೆದಿದೆ. ಹುವಾವೇ ಟೆಕ್ನಾಲಜಿ ಕಂಪನಿ ಹಾಗೂ ಝಡ್‌ಟಿಇ ಕಾರ್ಪ್‌ಗಳ ಟೆಲಿಕಾಂ ಉಪಕರಣಗಳನ್ನು ನಿಷೇಧಿಸಲು ಸರ್ಕಾರ ಈ ಹಿಂದೆಯೇ ಅನಧಿಕೃತ ವಿಧಾನಗಳನ್ನು ಬಳಸಿದೆ.
ನರೇಂದ್ರ ಮೋದಿ ಸರ್ಕಾರ ಚೀನಾದ ಅಗ್ಗದ ಬೆಲೆ ಫೋನ್‌ಗಳನ್ನು ಬ್ಯಾನ್ ಮಾಡುವ ನೀತಿಯನ್ನು ಅಧಿಕೃತವಾಗಿ ಪ್ರಕಟಿಸುತ್ತದೋ ಅಥವಾ ಚೀನಾದ ಕಂಪನಿಗಳಿಗೆ ಅನೌಪಚಾರಿಕವಾಗಿ ತಿಳಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮೇಲೆ ನನಗೆ ಯಾವುದೇ ಭರವಸೆ ಇಲ್ಲ: ಕಪಿಲ್ ಸಿಬಲ್