ನವದೆಹಲಿ: ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು (Tariffs) ಕಡಿತಗೊಳಿಸುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಭಾರತ (India) ಸ್ಪಷ್ಟನೆ ನೀಡಿದೆ.
ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಭಾರತ ಒಪ್ಪಿಕೊಂಡಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಹೇಳಿಕೆಗೆ ಭಾರತ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಡೆವಿಲ್ ಚಿತ್ರೀಕರಣ ಶುರುವಾಗೋ ಹೊತ್ತಲ್ಲೇ ಆಪ್ತರನ್ನ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ ʻದಾಸʼ
ಭಾರತ ಸರ್ಕಾರ (Indian Government) ಆಮದು ಸುಂಕಗಳನ್ನು ಕಡಿತಗೊಳಿಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಈ ವಿಚಾರದಲ್ಲಿ ಭಾರತ – ಅಮೆರಿಕ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಸ್ಪಷ್ಟನೆ ಎಂದು ಹೇಳಿದೆ. ಇದನ್ನೂ ಓದಿ: ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತಾವನೆ ಬಂದ್ರೆ ಮಧ್ಯರಾತ್ರಿವರೆಗೂ ವ್ಯಾಪಾರಕ್ಕೆ ಅವಕಾಶ- ಭೈರತಿ ಸುರೇಶ್
ಟ್ರಂಪ್ ಹೇಳಿದ್ದೇನು?
ಭಾರತವು ಸ್ವತಃ ತೆರಿಗೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ. ಏಪ್ರಿಲ್ 2ರಿಂದ ಅನ್ವಯವಾಗುವಂತೆ ಅಮೆರಿಕಾವು ಭಾರತಕೆ ಪ್ರತಿಫಲ ತೆರಿಗೆಯನ್ನು (Reciprocal tariffs) ವಿಧಿಸಲಿದೆ. ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿದೆ. ಭಾರತಕ್ಕೆ ತನ್ನ ದುಬಾರಿ ತೆರಿಗೆ ಪದ್ದತಿಯ ತಪ್ಪು ಅರಿವಾಗಿದೆ, ಕೊನೆಗೂ ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಯಾರೋ ಅವರ ತೆರಿಗೆ ಪದ್ದತಿಯ ತಪ್ಪನ್ನು ಬಯಲಿಗೆ ಎಳೆದಿದ್ದಾರೆ. ಹಾಗಾಗಿ, ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲು ಮೋದಿ ಸರ್ಕಾರ ಒಪ್ಪಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಮುಂದುವರಿದು.. ಭಾರತವು ನಮ್ಮ ವಸ್ತುಗಳ ಮೇಲೆ ಶೇ.100ಕ್ಕಿಂತ ಹೆಚ್ಚು ತೆರಿಗೆಯನ್ನು ವಿಧಿಸುತ್ತಿದೆ. ಇದು, ಚೀನಾವು ನಮ್ಮ ಮೇಲೆ ವಿಧಿಸುವ ತೆರಿಗೆಗಿಂತ ಎರಡು ಪಟ್ಟು, ದಕ್ಷಿಣ ಕೊರಿಯಾಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಹಾಗಾಗಿ, ನಾವು ಕೂಡಾ ಭಾರತಕ್ಕೆ ಹೊಸ ತೆರಿಗೆಯನ್ನು ಏಪ್ರಿಲ್ 2ರಿಂದ ಜಾರಿಗೆ ತರಲಿದ್ದೇವೆ ಎಂದು ಸಹ ತಿಳಿಸಿದ್ದರು. ಇದನ್ನೂ ಓದಿ: `ದೃಶ್ಯಂ’ ಸಿನಿಮಾ ಶೈಲಿಯಲ್ಲಿ ಮಹಿಳೆ ಕೊಲೆ ಮಾಡಿ ಸಾಕ್ಷ್ಯ ನಾಶ – 4 ತಿಂಗಳ ಬಳಿಕ ಆರೋಪಿ ಅರೆಸ್ಟ್