ನವದೆಹಲಿ: ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರನ್ನು ಉಪನಾಯಕ ರೋಹಿತ್ ಶರ್ಮಾ ಹಿಂದಿಕ್ಕುವ ತವಕದಲ್ಲಿ ಇದ್ದಾರೆ.
2011ರ ವಿಶ್ವಕಪ್ ಸ್ಟಾರ್ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ಭಾರತದ ಪರ 304 ಏಕದಿನ ಪಂದ್ಯಗಳನ್ನಾಡಿ ಒಟ್ಟು 8,701 ರನ್ ಗಳಿಸಿದ್ದರು. ಇಂದು ನಡೆಯಲಿರುವ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 26 ರನ್ ಗಳಿಸಿದರೆ ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಲಿದ್ದಾರೆ.
Advertisement
Advertisement
ಭಾರತದ ಪರ 217 ಏಕದಿನ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ ಒಟ್ಟು 8,676 ರನ್ ಹೊಡೆದಿದ್ದಾರೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್, 304 ಪಂದ್ಯಗಳನ್ನು ಆಡಿ ಒಟ್ಟು 8,701 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಇಂದು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯದಲ್ಲಿ 26 ರನ್ ಗಳಿಸಿದರೆ ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಲಿದ್ದಾರೆ.
Advertisement
ಈ ಮೂಲಕ ರೋಹಿತ್ ಶರ್ಮಾ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಹೋಗಲಿದ್ದಾರೆ. ಈ ಪಟ್ಟಿಯಲ್ಲಿ 18426 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ನಂತರ ವಿರಾಟ್ ಕೊಹ್ಲಿ (11,406), ಸೌರವ್ ಗಂಗೂಲಿ (11,363), ರಾಹುಲ್ ದ್ರಾವಿಡ್ (10,889), ಎಂ.ಎಸ್.ಧೋನಿ (10,773), ಮೊಹಮ್ಮದ್ ಅಜರುದ್ದೀನ್ (9,378) ಮತ್ತು ಯುವರಾಜ್ ಸಿಂಗ್ (8,701) ಇದ್ದಾರೆ.
Advertisement
ಎರಡು ದಾಖಲೆಗಳ ಸನಿಹದಲ್ಲಿ ಕೊಹ್ಲಿ
ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿದ ನಾಯಕ ವಿರಾಟ್ ಕೊಹ್ಲಿ, ಭಾನುವಾರ ನಡೆದ 2ನೇ ಏಕದಿನ ಪಂದ್ಯಗಳಲ್ಲಿ ಭಾರತದ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರು ಕೇವಲ 174 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಏಕದಿನ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕುವ ಅವಕಾಶವಿದೆ. ಏಕದಿನದಲ್ಲಿ 238 ಪಂದ್ಯಗಳನ್ನು ಆಡಿರುವ ಕೊಹ್ಲಿ 11,406 ರನ್ ಗಳಿಸಿದ್ದಾರೆ. 328 ಪಂದ್ಯಗಳನ್ನು ಆಡಿರುವ ಕಾಲೀಸ್ 11,579 ರನ್ ಗಳಿಸಿದ್ದಾರೆ.
ಇದರ ಜೊತೆ ಇನ್ನೊಂದು ದಾಖಲೆಯ ಸನಿಹದಲ್ಲಿ ಕೊಹ್ಲಿ ಇದ್ದು, ವೆಸ್ಟ್-ಇಂಡೀಸ್‍ನಲ್ಲಿ ಭಾರತ-ವಿಂಡೀಸ್ ಏಕದಿನ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್‍ಗಳ ಪಟ್ಟಿಯಲ್ಲಿ ಕೊಹ್ಲಿಗೆ ರಾಮ್‍ನರೇಶ್ ಸರ್ವಾನ್ ಅವರನ್ನು ಮೀರಿಸಲು ಕೇವಲ 25 ರನ್‍ಗಳು ಬೇಕಾಗಿದೆ. ಕೊಹ್ಲಿ 14 ಪಂದ್ಯಗಳಿಂದ 61.45 ರ ಸರಾಸರಿಯಲ್ಲಿ 676 ರನ್ ಗಳಿಸಿದ್ದು, ವೆಸ್ಟ್ ಇಂಡೀಸ್‍ನಲ್ಲಿ 3 ಏಕದಿನ ಶತಕಗಳನ್ನು ಸಿಡಿಸಿದ್ದಾರೆ.
ಶಮಿ ದಾಖಲೆ ಮುರಿಯುವ ಸನಿಹದಲ್ಲಿ ಕುಲ್‍ದೀಪ್
ಭಾರತದ ಪರ 56 ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದ ವೇಗದ ಬೌಲರ್ ಮೊಹಮ್ಮದ್ ಶಮಿ ಅತೀ ವೇಗದಲ್ಲಿ ನೂರು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದರು. ಆದರೆ 53 ಪಂದ್ಯಗಳನ್ನು ಆಡಿ 96 ವಿಕೆಟ್ ಪಡೆದಿರುವ ಎಡಗೈ ಸ್ಪಿನ್ನರ್ ಕುಲ್‍ದೀಪ್ ಯಾದವ್, ಇಂದು ನಡೆಯಲಿರುವ ಪಂದ್ಯದಲ್ಲಿ 4 ವಿಕೆಟ್ ಪಡೆದರೆ ಶಮಿ ಅವರ ದಾಖಲೆಯನ್ನು ಮುರಿಯಲಿದ್ದಾರೆ.