– ಬಲೂಚಿಸ್ತಾನದಲ್ಲಿ ರೈಲು ಹೈಜಾಕ್‌ನಲ್ಲಿ ಭಾರತದ ಕೈವಾಡವಿದೆ ಎಂದಿದ್ದ ಪಾಕ್‌ಗೆ ತರಾಟೆ
ನವದೆಹಲಿ: ಬಲೂಚಿಸ್ತಾನದಲ್ಲಿ ನಡೆದ ಜಾಫರ್ ಎಕ್ಸ್‌ಪ್ರೆಸ್ ರೈಲು ಅಪಹರಣದಲ್ಲಿ (Balochistan Train Hijack) ಭಾರತದ (India) ಕೈವಾಡವಿದೆ ಎಂಬ ಪಾಕಿಸ್ತಾನದ (Pakistan) ವಿದೇಶಾಂಗ ಕಚೇರಿಯ ಆರೋಪವನ್ನು ಭಾರತ ನಿರಾಕರಿಸಿದೆ.
ಪಾಕಿಸ್ತಾನ ಮಾಡಿರುವ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ತನ್ನ ಆಂತರಿಕ ಸಮಸ್ಯೆ ಮತ್ತು ವೈಫಲ್ಯಗಳಿಗೆ ಭಾರತ ಇತರರಿಗೆ ಬೆಟ್ಟು ಮಾಡಿ ತೋರಿಸುವ ಬದಲು, ತನ್ನನ್ನು ತಾನು ಪರಾಮರ್ಶಿಸಿಕೊಳ್ಳಲಿ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: Pakistan Train Hijack | 150ಕ್ಕೂ ಹೆಚ್ಚು ಸೈನಿಕರ ಹತ್ಯೆ – 50ಕ್ಕೂ ಹೆಚ್ಚು ಒತ್ತೆಯಾಳುಗಳು ಗಲ್ಲಿಗೆ
ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಶಫ್ಕತ್ ಅಲಿ ಖಾನ್, ಜಾಫರ್ ಎಕ್ಸ್‌ಪ್ರೆಸ್ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಬಂಡುಕೋರರು ಅಫ್ಘಾನಿಸ್ತಾನದ ರಿಂಗ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಈ ಖಂಡನೀಯ ಭಯೋತ್ಪಾದನಾ ಕೃತ್ಯದ ಅಪರಾಧಿಗಳು, ಸಂಘಟಕರು, ಹಣಕಾಸು ಒದಗಿಸುವವರನ್ನು ಹೊಣೆಗಾರರನ್ನಾಗಿ ಮಾಡಲು, ಭಯೋತ್ಪಾದನೆಗೆ ಬೆಂಬಲ ನೀಡಿದವರನ್ನು ನ್ಯಾಯದ ಕಟಕಟೆಗೆ ತರಲು ಪಾಕಿಸ್ತಾನ ಸರ್ಕಾರದೊಂದಿಗೆ ಸಹಕರಿಸಲು ನಾವು ಅಫ್ಘಾನಿಸ್ತಾನವನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ರೈಲು ಹೈಜಾಕ್; 150 ಸೆರೆಯಾಳುಗಳ ರಕ್ಷಣೆ – 27 ಉಗ್ರರ ಹತ್ಯೆ