ಇಸ್ಲಾಮಾಬಾದ್: ಭಾರತೀಯ ಸೂಪರ್‍ಸಾನಿಕ್ (supersonic missile) ಕ್ಷಿಪಣಿ (Missile) ಆಕಸ್ಮಿಕವಾಗಿ ಉಡಾವಣೆಯಾಗಿ, ಈ ಕ್ಷಿಪಣಿ ಪಾಕಿಸ್ತಾನಕ್ಕೆ ಬಂದು ಬಿದ್ದಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತ ಸರ್ಕಾರ, ಇದು ಆಕಸ್ಮಿಕವಾಗಿ ಉಡಾವಣೆ ಆಗಿದೆ. ಮಾರ್ಚ್ 9 ರಂದು ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ ಆಗಿತ್ತು. ಘಟನೆಯು ತೀವ್ರ ವಿಷಾದನೀಯವಾಗಿದ್ದರೂ, ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ ಎಂದು ರಕ್ಷಣಾ ಸಚಿವಾಲಯ ಇಂದು ಹೇಳಿಕೆಯಲ್ಲಿ ತಿಳಿಸಿದೆ.
Advertisement
ಈ ಕ್ಷಿಪಣಿ ಸಂಬಂಧಿಸಿದಂತೆ ಪಾಕಿಸ್ತಾನ ಇಂದು ಭಾರತೀಯ ರಾಯಭಾರಕ್ಕೆ ಕರೆ ಮಾಡಿದ್ದು, ಈ ಘಟನೆಯನ್ನು ತಿಳಿಸಿದೆ. ಈ ಘಟನೆಯ ಬಗ್ಗೆ ಪಾರದರ್ಶಕ ತನಿಖೆಗೆ ಪಾಕ್ ಒತ್ತಾಯಿಸಿದೆ.
Advertisement
India regrets accidental firing of missile which landed in Pakistan
Read @ANI Story | https://t.co/QrNdcVWt9l#India #Pakistan pic.twitter.com/V5w62m3TxK
— ANI Digital (@ani_digital) March 11, 2022
Advertisement
ನಡೆದಿದ್ದೇನು?: ಮಾರ್ಚ್ 9 ರಂದು ಸಂಜೆ 6:43 ಕ್ಕೆ ಭಾರತದ ಸೂರತ್‍ಗಢದಿಂದ ಭಾರತೀಯ ಸೂಪರ್ಸಾನಿಕ್ ಫ್ಲೈಯಿಂಗ್ ಆಬ್ಜೆಕ್ಟ್ ಪಾಕಿಸ್ತಾನಕ್ಕೆ ಪ್ರವೇಶಿಸಿದೆ. ಈ ಘಟನೆಯ ಬಗ್ಗೆ ಭಾರತದ ಚಾರ್ಜ್ ಡಿಅಫೇರ್ಸ್ ಎಂ ಸುರೇಶ್ ಕುಮಾರ್ ಅವರಿಗೆ ಗುರುವಾರ ರಾತ್ರಿ ತಿಳಿಸಲಾಗಿದೆ. ಇಂತಹ ನಿರ್ಲಕ್ಷ್ಯದ ಅಹಿತಕರ ಪರಿಣಾಮಗಳ ಬಗ್ಗೆ ಎಚ್ಚರದಿಂದಿರಬೇಕು. ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳು ಮರುಕಳಿಸುವುದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ
Advertisement
ಭಾರತೀಯ ಸೂಪರ್‍ಸಾನಿಕ್ ಕ್ಷಿಪಣಿಯು ಸಿರ್ಸಾದಿಂದ ಉಡಾವಣೆಗೊಂಡು ಪಾಕಿಸ್ತಾನದ ಭೂಪ್ರದೇಶದ ಸುಮಾರು 124 ಕಿ.ಮೀ. ದೂರದಲ್ಲಿರುವ, ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಇಳಿಯಿತು ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಒಂದು ದಿನದ ನಂತರ ಭಾರತದಲ್ಲಿ ಹೇಳಿಕೆ ಬಂದಿದೆ. ಕ್ಷಿಪಣಿಯು 40,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿದೆ. ಭಾರತೀಯ ಮತ್ತು ಪಾಕಿಸ್ತಾನ ವಾಯುಪ್ರದೇಶದಲ್ಲಿ ಪ್ರಯಾಣಿಕರ ವಿಮಾನಗಳು ಮತ್ತು ನೆಲದ ಮೇಲಿನ ನಾಗರಿಕರ ಆಸ್ತಿಗೆ ಅಪಾಯ ತರುತ್ತಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ
#BREAKING: India says it accidentally fired a missile due to technical malfunction which landed in an area of Pakistan. Incident is deeply regretted.
The Government of India has taken a serious view and ordered a high-level Court of Enquiry. pic.twitter.com/hvmsIJRJIQ
— Aditya Raj Kaul (@AdityaRajKaul) March 11, 2022
ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ: ಬಿದ್ದ ಸ್ಥಳದಲ್ಲಿ ಗೋಡೆಗೆ ಅಪ್ಪಳಿಸಿತು. ಈ ಕುರಿತಾಗಿ ಭಾರತ ಮತ್ತು ಪಾಕಿಸ್ತಾನ ಸೇನೆಯ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಘಟನೆಯನ್ನು ವಿವರಿಸುವ ಜವಾಬ್ದಾರಿ ಭಾರತದ ಮೇಲಿದೆ. ಬುಧವಾರ ಸಂಜೆ 6:43 ಕ್ಕೆ ಪಾಕಿಸ್ತಾನ ವಾಯುಪಡೆಯ ವಾಯು ರಕ್ಷಣಾ ಕಾರ್ಯಾಚರಣೆ ಕೇಂದ್ರದಿಂದ ಭಾರತೀಯ ವಾಯು ಪ್ರದೇಶದೊಳಗೆ ಅತಿ ವೇಗದ ಹಾರುವ ವಸ್ತುವೊಂದು ಪತ್ತೆಯಾಗಿದೆ ಎಂದು ಇಫ್ತಿಕರ್ ಹೇಳಿದ್ದಾರೆ.