ಟೀಂ ಇಂಡಿಯಾಗೆ 434 ರನ್‌ಗಳ ದಾಖಲೆ ಜಯ – ಭಾರತದ ಟಾಪ್-5 ಟೆಸ್ಟ್ ಲಿಸ್ಟ್!

Public TV
1 Min Read
Team India 7

ರಾಜ್‌ಕೋಟ್: ಟೆಸ್ಟ್ ಇತಿಹಾಸದಲ್ಲಿ ಟೀಂ ಇಂಡಿಯಾ ಮತ್ತೊಂದು ದಾಖಲೆ ಬರೆದಿದೆ. ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದ ಅತಿ ಹೆಚ್ಚು ರನ್ ಅಂತರದ ಗೆಲುವನ್ನು ಇಂಗ್ಲೆಂಡ್ ವಿರುದ್ಧ ದಾಖಲಿಸಿದೆ.

ಭಾರತ ತಂಡ ಇದುವರೆಗೆ ಒಟ್ಟು 577 ಟೆಸ್ಟ್ ಪಂದ್ಯಗಳನ್ನಾಡಿದ್ದು ಇಂಗ್ಲೆಂಡ್ ವಿರುದ್ಧ ಇಂದು ನಡೆದ ಪಂದ್ಯವನ್ನು 434 ರನ್‌ಗಳಿಂದ ಗೆದ್ದಿದೆ. ಇದು ಭಾರತದ ಪಾಲಿಗೆ ಐತಿಹಾಸಿಕ ಸಾಧನೆಯಾಗಿದೆ.

TEAM INDIA

ಇದಕ್ಕೂ ಮುನ್ನ ಟೀಂ ಇಂಡಿಯಾ 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ 372 ರನ್‌ಗಳಿಂದ ಗೆದ್ದಿದ್ದೇ ಇದುವರೆಗಿನ ಬೃಹತ್ ಅಂತರದ ಗೆಲುವಿನ ದಾಖಲೆಯಾಗಿತ್ತು.

ಭಾರತದ ಟಾಪ್ 5 ಟೆಸ್ಟ್ ಗೆಲುವುಗಳು
1. 434 ರನ್ ಗೆಲುವು – ಇಂಗ್ಲೆಂಡ್ ವಿರುದ್ಧ – ರಾಜ್‌ಕೋಟ್ – 2024ರಲ್ಲಿ
2. 372 ರನ್ ಗೆಲುವು – ನ್ಯೂಜಿಲೆಂಡ್ ವಿರುದ್ಧ – ಮುಂಬೈ – 2021ರಲ್ಲಿ
3. 337 ರನ್ ಗೆಲುವು – ದಕ್ಷಿಣ ಆಫ್ರಿಕಾ ವಿರುದ್ಧ – ದೆಹಲಿ – 2015ರಲ್ಲಿ
4. 321 ರನ್ ಗೆಲುವು – ನ್ಯೂಜಿಲೆಂಡ್ ವಿರುದ್ಧ – ಇಂದೋರ್ – 2016ರಲ್ಲಿ
5. 320 ರನ್ ಗೆಲುವು – ಆಸ್ಟ್ರೇಲಿಯಾ ವಿರುದ್ಧ – ಮೊಹಾಲಿ – 2008ರಲ್ಲಿ

Share This Article