ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 90,928 ಕೇಸ್ ದಾಖಲಾಗಿದ್ದು, 325 ಮರಣ ಪ್ರಕರಣ ದಾಖಲಾಗಿದೆ ಎಂದು ಕೆಂದ್ರ ಆರೋಗ್ಯ ಇಲಾಖೆ ವರದಿ ಬಿಡುಗಡೆಗೊಳಿಸಿದೆ.
Advertisement
ದೇಶದಲ್ಲಿ ಒಟ್ಟು 2,85,401 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 3,43,41,009 ಮಂದಿ ಈಗಾಗಲೇ ಚೇತರಿಕೆ ಕಂಡಿದ್ದಾರೆ. ಈವರೆಗೆ 4,82,876 ಮಂದಿ ಕೊರೊನಾದಿಂದ ಮರಣ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾಸಿಟಿವಿಟಿ ರೇಟ್ ದೇಶದಲ್ಲಿ 6.43% ರಷ್ಟಿದ್ದು, ಈಗಾಗಲೇ 148.67 ಕೋಟಿ ಡೋಸ್ ಲಸಿಕೆ ದೇಶದಲ್ಲಿ ವಿತರಿಸಲಾಗಿದೆ. ಇದನ್ನೂ ಓದಿ: ಕೋವಿಡ್-19 ಹೊಸ ಮಾರ್ಗಸೂಚಿಗೆ ಬಿಜೆಪಿಯ ಸಚಿವ, ಶಾಸಕರಿಂದಲೇ ವಿರೋಧ
Advertisement
#Unite2FightCorona#LargestVaccineDrive#OmicronVariant
???????????????????? ????????????????????https://t.co/XLFKXylyRO pic.twitter.com/HqiNuPTlIZ
— Ministry of Health (@MoHFW_INDIA) January 6, 2022
Advertisement
24 ಗಂಟೆಗಳ ಅವಧಿಯಲ್ಲಿ ಓಮಿಕ್ರಾನ್ ಒಟ್ಟು ಕೇಸ್ ಸಂಖ್ಯೆ 2,630ಕ್ಕೆ ಏರಿಕೆ ಕಂಡಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ದೇಶದ ಒಟ್ಟು 24 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 797 ಮಂದಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ದೆಹಲಿ 465, ಕರ್ನಾಟಕ 226, ಕೇರಳ 234, ರಾಜಸ್ಥಾನ 236, ಗುಜರಾತ್ 204, ತಮಿಳುನಾಡು 121, ತೆಲಂಗಾಣ 94. ಹರಿಯಾಣ 71, ಒಡಿಶಾ 60, ಉತ್ತರಪ್ರದೇಶ 31, ಆಂಧ್ರಪ್ರದೇಶ 24, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 28, ಉತ್ತರಾಖಂಡ 8, ಗೋವಾ 5. ಮೇಘಾಲಯ 4, ಚಂಡೀಗಢ 3, ಜಮ್ಮು ಮತ್ತು ಕಾಶ್ಮೀರ 3, ಅಂಡಮಾನ್ ಮತ್ತು ನಿಕೋಬಾರ್ 2, ಪುದುಚೇರಿ 2, ಪಂಜಾಬ್ 2, ಹಿಮಾಚಲಪ್ರದೇಶ, ಲಡಾಖ್, ಮಣಿಪುರ ತಲಾ 1 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಭಾರತದಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ – ರಾಜಸ್ಥಾನದ 73 ವರ್ಷದ ವ್ಯಕ್ತಿ ಸಾವು
Advertisement