ಭಾರತಕ್ಕೆ ಮತ್ತೆ ಕೊರೊನಾ ಭೀತಿ – ದೆಹಲಿ, ಮುಂಬೈನಲ್ಲಿ ಹೆಚ್ಚಿದ ಸೋಂಕಿತರ ಸಂಖ್ಯೆ

Public TV
1 Min Read
corona virus 2

ನವದೆಹಲಿ: ಕೊರೊನಾ ಕಾಲ ಅಂತ್ಯವಾಯಿತು, ಎಲ್ಲವೂ ಸರಾಗವಾಗುತ್ತಿದೆ ಅಂದುಕೊಳ್ಳುತ್ತಿರುವಗಾಲೇ ಭಾರತಕ್ಕೆ ಮತ್ತೆ ಕೊರೊನಾ ಭೀತಿ ಆವರಿಸಿಕೊಂಡಿದೆ. ಫ್ರಾನ್ಸ್, ಚೀನಾ ಇಟಲಿ, ಜರ್ಮನಿ ಹಾಗೂ ಯುರೋಪ್ ದೇಶಗಳ ಬಳಿಕ ಈಗ ಭಾರತದಲ್ಲಿ ನಿಧಾನವಾಗಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಲು ಆರಂಭಿಸಿದೆ.

CORONA VIRUS

ಕೇಂದ್ರ ಅರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಇಂದು ದೇಶದಲ್ಲಿ 1007 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ನಿನ್ನೆ ಇದು 1088 ತಲುಪಿತ್ತು. ಸರಾಸರಿ 1000 ಪ್ರಕಣಗಳು ವರದಿಯಾಗಲು ಪ್ರಾರಂಭವಾಗಿದೆ.BA.2 ಸಬ್‌ವೇರಿಯಂಟ್ ಮತ್ತು XE ರೂಪಾಂತರ (BA.1 ಮತ್ತು BA.2 ರ ಮರುಸಂಯೋಜಿತ ರೂಪಾಂತರ) ಸೇರಿದಂತೆ ಹೊಸ ರೂಪಾಂತರಗಳ ಪತ್ತೆಯಾಗುತ್ತಿವೆ.

corona

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ 299 ಪ್ರಕರಣಗಳು ವರದಿಯಾಗಿದೆ. ಮಂಗಳವಾರ 209 ಮಂದಿ ಸೋಂಕಿತರು ಪತ್ತೆಯಾಗಿದ್ದರು. ಒಂದೇ ದಿನದಲ್ಲಿ 48% ಜಿಗಿತ ಕಂಡು ಬಂದಿದೆ. ಇನ್ನು ವಾಣಿಜ್ಯ ನಗರಿ ಮುಂಬೈ ನಲ್ಲಿ 73 ಪ್ರಕರಣಗಳು ವರದಿಯಾಗಿದ್ದು ಯಾವುದೇ ಸಾವುಗಳು ಸಂಭವಿಸಿಲ್ಲ.

CORONA-VIRUS.

ದೆಹಲಿ, ಮುಂಬೈನಲ್ಲಿ ಮಾಸ್ಕ್ ಸೇರಿದಂತೆ ಕೋವಿಡ್ ನಿಯಮಗಳನ್ನು ಸಡಿಲಗೊಳಿಸದ ಮೇಲೆ ಸೋಂಕಿನ ಸಂಖ್ಯೆ ಏರಿಕೆ ಕಂಡಿದೆ. ಈ ನಡುವೆ ಗುಜರಾತ್, ಮುಂಬೈನ ತಲಾ ಓರ್ವ ಅಧಿಕಾರಿಗಳಲ್ಲಿ ಹೆಚ್ಚು ಹರಡುವ XE ರೂಪಾಂತರ ಪ್ರಕರಣಗಳು ವರದಿಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದ್ದು ನಾಲ್ಕನೇ ಅಲೆಯ ಭೀತಿ ಹುಟ್ಟಿಸಿದೆ. ಇದನ್ನೂ ಓದಿ: ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿಯಾಗಿರಲಿಲ್ಲ, ಆದ್ರೆ ಈಗ ಆಗಿದ್ದೇನೆ: ಇಮ್ರಾನ್ ಖಾನ್

corona virus 1

ನಾಲ್ಕನೇ ಅಲೆಯ ಭೀತಿ ಹಿನ್ನಲೆ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮುನ್ನೆಚ್ಚರಿಕೆ ಡೋಸ್ ಪಡೆಯಲು ಕೇಂದ್ರ ಆರೋಗ್ಯ ಇಲಾಖೆ ಅವಕಾಶ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ವ್ಯಾಕ್ಸಿನ್ ಕಂಪನಿಗಳು ವ್ಯಾಕ್ಸಿನ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ್ದವು. ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಬಜರಂಗ ಮುನಿ ಅರೆಸ್ಟ್‌

 

Share This Article
Leave a Comment

Leave a Reply

Your email address will not be published. Required fields are marked *