ಮುಂಬೈ: 4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್, ಬೌಲರ್ ಗಳ ಅಬ್ಬರಕ್ಕೆ ನಲುಗಿದ ವೆಸ್ಟ್ ಕೇವಲ 36.2 ಓವರ್ ಗಳಲ್ಲಿ 153 ರನ್ ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಟೀಂ ಇಂಡಿಯಾ 224 ರನ್ ಗಳ ಭರ್ಜರಿ ಗೆಲುವು ಪಡೆದು, ಪುಣೆ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು.
5 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಟೂರ್ನಿಯ ಅಂತಿಮ ಪಂದ್ಯಕ್ಕೆ ತಂಡದ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
Advertisement
India's…
*third biggest win (by runs) in ODIs.
*biggest win (by runs) at home in ODIs.
*biggest win (by runs) against a Test side in ODIs. #IndvWI
— Mohandas Menon (@mohanstatsman) October 29, 2018
Advertisement
ಟೀಂ ಇಂಡಿಯಾ ನೀಡಿದ 378 ರನ್ ಗಳ ಬೃಹತ್ ರನ್ ಬೆನ್ನತ್ತಿದ ವಿಂಡೀಸ್ ಯಾವುದೇ ಹಂತದಲ್ಲಿ ಟೀಂ ಇಂಡಿಯಾಗೆ ಸವಾಲು ನೀಡದೇ ಸುಲಭ ತುತ್ತಾಯಿತು. ವೆಸ್ಟ್ ಇಂಡೀಸ್ ಪರ ಹೇಮರಾಜ್ 14, ಸ್ಯಾಮುಯಲ್ 18, ಹೆಟ್ಮೆಯರ್ 13, ಅಲೆನ್ 10 ಮಾತ್ರ ಎರಡಂಕಿ ಮೊತ್ತ ದಾಟಿದರು. ಉಳಿದಂತೆ ಅಂತಿಮ ಹಂತದಲ್ಲಿ ಧವನ್ ಕೊಟ್ಟ ಜೀವದಾನದ ಲಾಭ ಪಡೆದ ಹೋಲ್ಡರ್ ಕೆಲ ಕಾಲ ಬಿರುಸಿನ ಬ್ಯಾಟಿಂಗ್ ನಡೆಸಿ ಔಟಾಗದೇ 54 ರನ್ ಸಿಡಿಸಿದರು.
Advertisement
ಟೀಂ ಇಂಡಿಯಾ ಪರ ಯುವ ಬೌಲರ್ ಖಲೀಲ್ ಅಹ್ಮದ್ ಮತ್ತು ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
Advertisement
That's that from Mumbai.
A huge win for #TeamIndia as they win by 224 runs with the series now at 2-1.#INDvWI pic.twitter.com/uzwQ77gpjM
— BCCI (@BCCI) October 29, 2018
ಇದಕ್ಕೂ ಮುನ್ನ ಟಾಸ್ಟ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‍ಗೆ ಆರಂಭಿಕ ಧವನ್, ರೋಹಿತ್ ಶರ್ಮಾ ಜೋಡಿ 71 ರನ್ ಜೊತೆಯಾಟ ನೀಡಿತು. ಈ ವೇಳೆ ಪೌಲ್ ಧವನ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಕೊಹ್ಲಿಗೆ ಬ್ರೇಕ್: ಹ್ಯಾಟ್ರಿಕ್ ಶತಕ ಸಿಡಿಸಿ ದಾಖಲೆ ಬರೆದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕಗಳ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ವಿಂಡೀಸ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಕೇವಲ 16 ರನ್ ಔಟಾದರು. ಇಂದು ಶತಕ ಸಿಡಿಸಿದ್ದರೆ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಸರಿಗಟ್ಟುತ್ತಿದ್ದರು. ಆದರೆ ಕೀಮರ್ ರೋಚ್ ಬೌಲಿಂಗ್ ನಲ್ಲಿ ಶೈ ಹೋಪ್ ಗೆ ಕ್ಯಾಚಿತ್ತು ಕೊಹ್ಲಿ ಪೆವಿಲಿಯನ್ ಸೇರಿದರು. 17 ಎಸೆತಗಳಲ್ಲಿ 2 ಬೌಂಡರಿ ಸಹಿತ 16 ರನ್ ಕೊಹ್ಲಿ ಬಾರಿಸಿದ್ದರು.
Sunset vibes here in Mumbai ???? pic.twitter.com/8oOUMPcgdM
— BCCI (@BCCI) October 29, 2018
ಈ ಹಂತದಲ್ಲಿ ರೋಹಿತ್ ರನ್ನು ಕೂಡಿಕೊಂಡ ಅಂಬಟಿ ರಾಯುಡು ಬಿರುಸಿನ ಬ್ಯಾಟಿಂಗ್ ನಡೆಸಿ ವಿಂಡೀಸ್ ಬೌಲರ್ ಗಳ ಬೆವರಿಳಿಸಿದರು. ಮೂರನೇ ವಿಕೆಟ್ ಗೆ ಬರೋಬ್ಬರಿ 211 ರನ್ ಗಳ ಜೊತೆಯಾಟ ನೀಡಿ ತಂಡ ಬೃಹತ್ ಮೊತ್ತಗಳಿಸಲು ಕಾರಣರಾದರು. ರೋಹಿತ್ ಶರ್ಮಾ 137 ಎಸೆತಗಳಲ್ಲಿ 20 ಬೌಂಡರಿ, ಆಕರ್ಷಕ 4 ಸಿಕ್ಸರ್ ಮೂಲಕ 162 ರನ್ ಸಿಡಿಸಿ ಮಿಂಚಿದರು.
ರೋ`ಹಿಟ್’: ವಿಂಡೀಸ್ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ರೋಹಿತ್ ಈ ಪಂದ್ಯದಲ್ಲಿ ಆರಂಭದಿಂದಲೂ ರನ್ ವೇಗವಾಗಿ ರನ್ ಗಳಿಸುತ್ತಾ 60 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿದರು. ನಂತರದ 50 ರನ್ ಕೇವಲ 48 ಎಸೆಗಳಲ್ಲಿ ಗಳಿಸಿದರು. ಈ ಮೂಲಕ ರೋಹಿತ್ ತಮ್ಮ 21 ಏಕದಿನ ಶತಕವನ್ನು ಪೂರೈಸಿದರು. ಅಲ್ಲದೇ 186 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿ ಸಚಿನ್ (200 ಇನ್ನಿಂಗ್ಸ್), ಸೌರವ್ ಗಂಗೂಲಿ (217 ಇನ್ನಿಂಗ್ಸ್) ರನ್ನು ಹಿಂದಿಕ್ಕಿದರು.
.@RayuduAmbati departs after scoring his 3rd ???? off 80 deliveries #INDvWI.
What an innings from Rayudu this has been! pic.twitter.com/0flMaT1Cbc
— BCCI (@BCCI) October 29, 2018
ರೋಹಿತ್ 2013 ರಿಂದಲೂ ಭಾರತದ ಪರ ಪಂದ್ಯವೊಂದರಲ್ಲಿ ವೈಯಕ್ತಿಕವಾಗಿ ಅತೀ ಹೆಚ್ಚು ರನ್ ಸಿಡಿಸಿದ ಹೆಗ್ಗಳಿಕೆ ಪಡೆದಿದ್ದು, ಈ ಪಂದ್ಯದಲ್ಲಿ 163 ರನ್ ಸಿಡಿಸಿ ಪ್ರಸಕ್ತ ವರ್ಷದಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಉಳಿದಂತೆ 2013 ರಿಂದ 2017 ಅಧಿಯಲ್ಲಿ ಕ್ರಮವಾಗಿ 209, 264, 150, 171*,208* ರನ್ ಸಿಡಿಸಿ ಮಿಂಚಿದ್ದಾರೆ.
ಇತ್ತ ರೋಹಿತ್‍ಗೆ ಸಾಥ್ ನೀಡಿದ ಅಂಬಟಿ ರಾಯುಡು 8 ಬೌಂಡರಿ, 4 ಸಿಕ್ಸರ್ ಮೂಲಕ ಶತಕ ಸಿಡಿಸಿ ಆಯ್ಕೆ ಸಮಿತಿ ತಮ್ಮನ್ನು ಆಯ್ಕೆ ಮಾಡಿದನ್ನು ಸಮರ್ಥಿಸುವಂತೆ ಮಾಡಿದರು. ಬಳಿಕ ಬಂದ ಧೋನಿ 23 ರನ್, ಜಾದವ್ 16 ರನ್ ಸಿಡಿಸಿ ಟೀಂ ಇಂಡಿಯಾ 350 ರನ್ ಗಡಿದಾಟುವಂತೆ ಮಾಡಿದರು. ಅಂತಿಮವಾಗಿ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 377 ರನ್ ಗಳ ಬೃಹತ್ ರನ್ ಮೊತ್ತ ಗಳಿಸಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Highest scores for India in ODIs each year from 2013 onwards:
2013 – Rohit Sharma (209)
2014 – Rohit Sharma (264)
2015 – Rohit Sharma (150)
2016 – Rohit Sharma (171*)
2017 – Rohit Sharma (208*)
2018 – Rohit Sharma (162)#IndvWI
— Bharath Seervi (@SeerviBharath) October 29, 2018