ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 443 ರನ್ ಗೆ ಡಿಕ್ಲೇರ್ ಮಾಡಿಕೊಂಡಿದೆ.
ಪಂದ್ಯದ 2ನೇ ದಿನದಾಟದ ಮುಕ್ತಾಯಕ್ಕೆ ಕೆಲವೇ ಓವರ್ ಗಳು ಬಾಕಿ ಇರುವ ವೇಳೆ ಅಚ್ಚರಿ ಎಂಬಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಿಸಿದರು. ಈ ವೇಳೆ ಟೀಂ ಇಂಡಿಯಾ 169.4 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 443 ರನ್ ಗಳಿಸಿತ್ತು. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 2ನೇ ದಿನದಾಟದ ಅಂತ್ಯಕ್ಕೆ 6 ಓವರ್ ಗಳಲ್ಲಿ ವಿಕೆಟ್ 8 ರನ್ ಗಳಿಸಿದೆ.
Advertisement
Stumps on Day 2 of the 3rd Test.
Australia 8/0, trail #TeamIndia 443/7d by 435 runs
Scorecard – https://t.co/xZXZnUvzvk #AUSvIND pic.twitter.com/gRuxXZS1NV
— BCCI (@BCCI) December 27, 2018
Advertisement
2ನೇ ದಿನದಾಟವನ್ನು 2 ವಿಕೆಟ್ಗೆ 215 ರನ್ ಗಳಿಂದ ಆರಂಭಿಸಿದ ಟೀಂ ಇಂಡಿಯಾ ಚೇತೇಶ್ವರ ಪೂಜಾರ ಭರ್ಜರಿ ಶತಕ, ಕೊಹ್ಲಿ 82 ರನ್ ಕಾಣಿಕೆ ಹಾಗೂ ರೋಹಿತ್ ಶರ್ಮಾರ ಅರ್ಧ ಶತಕ (63* ರನ್) ನೆರವಿನಿಂದ ತಂಡದ ಮೊತ್ತ 400 ರನ್ ಗಡಿ ದಾಟಲು ನೆರವಾಯಿತು. ಅಂತಿಮ ಹಂತದಲ್ಲಿ ಅನುಭವಿ ಆಟಗಾರ ರಹಾನೆ 34 ರನ್ ಹಾಗೂ ರಿಷಬ್ ಪಂತ್ ರ ಬಿರುಸಿನ 39 ರನ್ ಗಳಿಸಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾದರು. ಮೆಲ್ಬರ್ನ್ ಕ್ರೀಡಾಂಗಣದ ಪಿಚ್ ವಿಭಿನ್ನವಾಗಿ ವರ್ತಿಸುತ್ತಿದ್ದು, 2ನೇ ದಿನದಾಟದ ವೇಳೆ ಪೂಜಾರ ಹಾಗೂ ರಹಾನೆ ಔಟಾದ ರೀತಿ ಇದಕ್ಕೆ ಸಾಕ್ಷಿಯಾಗಿದೆ. ಬೌಲಿಂಗ್ ವೇಳೆ ಚೆಂಡು ಬೌನ್ಸ್ ಆಗದೆ ನೇರವಾಗಿ ವಿಕೆಟ್ ನತ್ತ ನುಗ್ಗಿತ್ತು, ಈ ವೇಳೆ ಪೂಜಾರ ಬೌಲ್ಡ್ ಆದರೆ ರಹಾನೆ ಎಲ್ಬಿಡಬ್ಲ್ಯು ಬಲೆಗೆ ಸಿಲುಕಿ ಔಟಾದರು.
Advertisement
https://twitter.com/telegraph_sport/status/1078176442100391937?
Advertisement
ಸರಣಿಯಲ್ಲಿ 2ನೇ ಶತಕ ಸಿಡಿಸಿದ ಪೂಜಾರ ವೃತ್ತಿ ಜೀವನದ 17 ನೇ ಟೆಸ್ಟ್ ಶತಕವನ್ನು 112 ಇನ್ನಿಂಗ್ಸ್ ಗಳಲ್ಲಿ ಪೂರೈಸಿದರು. ಆ ಮೂಲಕ ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಶತಕಗಳ ಸಾಧನೆಯನ್ನು ಸರಿಗಟ್ಟಿದರು. 188 ಇನ್ನಿಂಗ್ಸ್ ಗಳಲ್ಲಿ ಗಂಗೂಲಿ 16 ಶತಕಗಳನ್ನು ಸಿಡಿಸಿದ್ದರೆ, ವಿವಿಎಸ್ ಲಕ್ಷ್ಮಣ್ 225 ಇನ್ನಿಂಗ್ಸ್ ಗಳಲ್ಲಿ 17 ಶತಕಗಳನ್ನು ಸಿಡಿಸಿದ್ದಾರೆ.
ಉಳಿದಂತೆ ಆಸೀಸ್ ತಂಡದ ಪರ ಕಮ್ಮಿನ್ಸ್ 3 ಮತ್ತು ಸ್ಟಾರ್ಕ್ 2 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಆರಂಭಿಕರಾದ ಫಿಂಚ್ 3 ರನ್, ಮಾರ್ಕಸ್ ಹ್ಯಾರಿಸ್ 5 ರನ್ ಗಳಿಸಿದ್ದಾರೆ.
https://twitter.com/telegraph_sport/status/1078153465489178624?
This century by @cheteshwar1 has laid the foundation for India to get ahead in this match. One more good partnership needed. The bounce is already uneven, which is a good sign for #TeamIndia. #INDvAUS pic.twitter.com/CPfDNTLpxj
— Sachin Tendulkar (@sachin_rt) December 27, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv