ಬೆಂಗಳೂರು: ಶ್ರೇಯಸ್ ಅಯ್ಯರ್ (Shreyas Iyer), ಕೆ.ಎಲ್ ರಾಹುಲ್ (KL Rahul) ದ್ವಿಶತಕ ಜೊತೆಯಾಟ ಹಾಗೂ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 410 ರನ್ ಗಳಿಸಿ ಎದುರಾಳಿ ನೆದರ್ಲೆಂಡ್ಸ್ (Netherlands) ತಂಡಕ್ಕೆ 410 ರನ್‌ಗಳ ಗುರಿ ನೀಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಡಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ (World Cup 2023) ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಕಲೆಹಾಕಿತು. ಇದನ್ನೂ ಓದಿ: World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್ – ಹೀನಾಯ ಸೋಲಿನೊಂದಿಗೆ ಪಾಕ್ ಮನೆಗೆ
Advertisement
India post their 2nd highest World Cup score in history.
This Indian team. ???????? pic.twitter.com/lHC2Zvhn1u
— Mufaddal Vohra (@mufaddal_vohra) November 12, 2023
Advertisement
ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ದ ರೋಹಿತ್ ಶರ್ಮಾ (Rohit Sharma) ಮತ್ತು ಶುಭಮನ್ ಗಿಲ್ (Shubman Gill) ಜೋಡಿ ಮೊದಲ ವಿಕೆಟ್‌ಗೆ 71 ಎಸೆತಗಳಲ್ಲಿ 100 ರನ್ ಬಾರಿಸಿತ್ತು. ಈ ಜೋಡಿ ವಿಕೆಟ್ ಬೀಳುತ್ತಿದ್ದಂತೆ 3ನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಮತ್ತು ಕೊಹ್ಲಿ (Virat Kohli) 66 ಎಸೆತಗಳಲ್ಲಿ 71 ರನ್‌ಗಳ ಜೊತೆಯಾಟ ನೀಡಿದ್ರು. ಬಳಿಕ ದ್ವಿಶತಕ ಜೊತೆಯಾಟ ನೀಡಿದ ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ 128 ಎಸೆತಗಳಲ್ಲಿ ಬರೋಬ್ಬರಿ 208 ರನ್ ಬಾರಿಸಿತ್ತು. ಇದರಿಂದ ತಂಡದ ಮೊತ್ತ 400 ರನ್‌ಗಳ ಗಡಿ ದಾಟಲು ನೆರವಾಯಿತು. ಅಂತಿಮವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 410 ರನ್ ಬಾರಿಸಿತು.
Advertisement
Advertisement
ಭಾರತದ ಪರ ಶ್ರೇಯಸ್ ಅಯ್ಯರ್ 128 ರನ್ (94 ಎಸೆತ, 10 ಬೌಂಡರಿ, 5 ಸಿಕ್ಸರ್), ಕೆ.ಎಲ್ ರಾಹುಲ್ 102 ರನ್ (64 ಎಸೆತ, 11 ಬೌಂಡರಿ, 4 ಸಿಕ್ಸರ್), ರೋಹಿತ್ ಶರ್ಮಾ 61 ರನ್ (54 ಎಸೆತ, 8 ಬೌಂಡರಿ, 2 ಸಿಕ್ಸರ್), ಶುಭಮನ್ ಗಿಲ್ 51 ರನ್ (32 ಎಸೆತ, 4 ಸಿಕ್ಸರ್, 3 ಬೌಂಡರಿ), ವಿರಾಟ್ ಕೊಹ್ಲಿ 51 ರನ್ (5 ಬೌಂಡರಿ, 1 ಸಿಕ್ಸರ್) ಚಚ್ಚಿದರೆ, ಸೂರ್ಯಕುಮಾರ್ ಯಾದವ್ 2 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಇದನ್ನೂ ಓದಿ: World Cup 2023: ಹಿಟ್‌ಮ್ಯಾನ್ ಸಿಕ್ಸರ್ ಹೊಡೆತಕ್ಕೆ ಲೆಜೆಂಡ್ ABD ದಾಖಲೆ ಪುಡಿಪುಡಿ
ವಿಶೇಷ ಸಾಧನೆ: ಡಚ್ಚರ ವಿರುದ್ಧ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆರಂಭಿಕನಾಗಿಯೇ 14 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಅಲ್ಲದೇ ಒಟ್ಟು 60 ಸಿಕ್ಸರ್ ಸಿಡಿಸುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ನಂ.1 ಆಟಗಾರ ಎನಿಸಿಕೊಂಡರು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನ ಪೂರೈಸಿದರೆ, ವಿರಾಟ್ ಕೊಹ್ಲಿ 70 ಅರ್ಧಶತಕ ದಾಖಲಿಸಿದರು.
ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡೆ 10 ಓವರ್‌ಗಳಲ್ಲಿ 82 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತರೆ, ಪಾಲ್ ವ್ಯಾನ್ ಮೀಕೆರೆನ್ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ವಿಜಯದ ನಾಗಾಲೋಟದತ್ತ ಟೀಂ ಇಂಡಿಯಾ- ಕೊನೆಯ ಲೀಗ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ ಚಿನ್ನಸ್ವಾಮಿ ಸ್ಟೇಡಿಯಂ